ಕೇವಲ ಮೂರೇ ತಿಂಗಳಲ್ಲಿ ಖ್ಯಾತ ಸೀರಿಯಲ್ ನಟನ ಪತ್ನಿ ಗರ್ಭಿಣಿ, ಖುಷಿಯಲ್ಲಿ ತೇಲಾಡಿದ ದಂಪತಿಗಳು

 | 
B

ಸತ್ಯ ಧಾರವಾಹಿ ಖ್ಯಾತಿಯ ಸಾಗರ್ ಬಿಳಿ ಗೌಡ ಹಾಗೂ ಸಿರಿ ರಾಜು ದಂಪತಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಸುದ್ದಿ ಕೇಳಿದ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. ಹೌದು ಸಾಗರ್ ಬಿಳಿ ಗೌಡ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಐದು ವರುಷಗಳಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದ ಜೋಡಿ ಕಳೆದ ವರ್ಷ ಮದುವೆ ಎಂಬ ಮುದ್ರೆಯನ್ನು ಅಧಿಕೃತವಾಗಿ ಒತ್ತಿದ್ದರು.

ಸಾಗರ್ ಬಿಳಿಗೌಡ, ಸಿರಿ ರಾಜು ಜೊತೆ 2023 ಜನವರಿ 26 ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅಂತಿಮವಾಗಿ ಐದು ವರುಷದ ಪ್ರೀತಿಗೆ ಈ ಮದುವೆ ಬಹಳ ಕಳೆಯನ್ನು ತಂದುಕೊಟ್ಟಿತು. ಮದುವೆಗೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ಬಹಳ ವಿಜೃಂಭಣೆಯಿಂದ ಇವರಿಬ್ಬರ ಮದುವೆ ನಡೆದಿದೆ. ಆದರೆ ಈ ವರುಷ ಮತ್ತೊಮ್ಮೆ ಅಭಿಮಾನಿಗಳ ಜೊತೆ ಖುಷಿ ಸುದ್ದಿ ಹಂಚಿಕೊಂಡಿದ್ದಾರೆ.

ಸಿರಿ ರಾಜು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಧಿಕೃತವಾಗಿ ಅಭಿಮಾನಿಗಳಿಗೆ ತಾನು ತಾಯಿ ಆಗುತ್ತಿರುವ ವಿಚಾರವನ್ನು ತಿಳಿಸಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ದಂಪತಿಗಳು ಇಬ್ಬರು ಮಗುವಿನ ಶೂ ಹಿಡಿದು ಕೊಂಡು ಇರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಹಾಗೆಯೇ ಆ ಫೋಟೋದ ಕೆಳಗಡೆ , ಪವಾಡಗಳಿಗೂ ಸಮಯ ಹಿಡಿಯುತ್ತದೆ ಎಂಬ ಸಾಲನ್ನು ನಟಿ ಬರೆದುಕೊಂಡಿದ್ದಾರೆ.

ಮಗುವಿನ ಶೂ ಫೋಟೋ ನೋಡಿ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. ಹಾಗೆಯೇ ಮಾಮ್ ಟೂ ಬಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸಾಗರ್ ಬಿಳಿಗೌಡ ಅಮೂಲ್ ಬೇಬಿ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ. ಸತ್ಯ ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಇವರನ್ನು ಅಮೂಲ್ ಬೇಬಿ ಎಂದು ಬಾಯಿ ತುಂಬ ಅಭಿಮಾನಿಗಳು ಕರೆಯುತ್ತಾರೆ. ಸತ್ಯ ಗಂಡನ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

ಸಾಗರ್ ಬಿಳಿಗೌಡ ಕಿರುತೆರೆ ಮೂಲಕ ಜನಪ್ರಿಯರಾಗಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತಿದ್ದ ಮಣಿ ಸೀರಿಯಲ್‌ನಲ್ಲೂ ಸಾಗರ್ ಬಿಳಿ ಗೌಡ ಕಾಣಿಸಿಕೊಂಡಿದ್ದರು. ಸಾಗರ್ ಇದೀಗ ತಂದೆ ಆಗುತ್ತಿದ್ದಾರೆ. ಆ ಖುಷಿಯಲ್ಲಿ ದಿನ ದೂಡುತ್ತ ಇದ್ದಾರೆ. ತಾನು ತಂದೆ ಆಗುತ್ತಿರುವ ವಿಚಾರ ತಿಳಿದ ದಿನದಿಂದ ತನ್ನ ಕಂದನ ಬರುವಿಕೆಗಾಗಿ ಕಾಯುತ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಸಾಗರ್ ಹಾಗೂ ಸಿರಿ ರಾಜು ಜೋಡಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.