ನೂರಾರು ಜನರ ನಡುವೆ ಕಿಚ್ಚ ಸುದೀಪ್ ಗೆ ಟಾಂಗ್ ಕೊಟ್ಟ ತಾರಾ, ' ನಾವು ಪ್ರಶಸ್ತಿ ನಿರಾಕರಿಸುವಷ್ಟು ದೊಡ್ಡವರಾಗಬಾರದು.
Feb 7, 2025, 09:23 IST
|

ಸ್ಯಾಂಡಲ್‌ವುಡ್ ಪ್ರೇಕ್ಷಕರಿಗಂತೂ ನಟ ಕಿಚ್ಚ ಸುದೀಪ್ ಅಷ್ಟೇ ನಟಿ ತಾರಾ ಅನುರಾಧ ಚಿರಪರಿಚಿತ. ಇತ್ತೀಚೆಗೆ ಕಿರುತೆರೆ ಪ್ರೇಕ್ಷಕರಿಗೂ ಬಹಳ ಹತ್ತಿರವಾಗಿರುವ ಈ ನಟಿಗೆ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿದೆ.ಕಳೆದ ನಾಲ್ಕು ದಶಕಗಳಿಂದಲೂ ಕಲಾ ಕ್ಷೇತ್ರದಲ್ಲಿ ಸೇವೆ ಹಾಗೂ ಸಾಧನೆಗಳನ್ನು ಮಾಡುತ್ತಿರುವ ನಟಿ ತಾರಾ ಅನುರಾಧ ನಟನೆ ಅಷ್ಟೇ ಅಲ್ಲದೆ ರಾಜಕೀಯ ಹಾಗೂ ಮಹಿಳಾ ಸಬಲೀಕರಣದ ವಿಚಾರವಾಗಿಯೂ ಸದಾ ಆಸಕ್ತಿಯನ್ನು ತೋರಿದ್ದಾರೆ.
ಇವರ ಕಲಾ ಸಾಧನೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಸಂದಿದ್ದಲ್ಲದೆ ಇದೀಗ ಗೌರವ ಡಾಕ್ಟರೇಟ್ ಕೂಡ ಸಿಕ್ಕಿದೆ. ಇನ್ನು ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ತಾರಾ ಅವರು, ತಮಗೆ ಡಾಕ್ಟರೇಟ್ ಪದವಿ ಸಿಕ್ಕಿದ್ದರ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. 'ನಮಗೆ ಈ ರೀತಿ ಪ್ರಶಸ್ತಿಗಳು ಬಂದಾಗ ಹೌದಾ..? ನಾನು ಈ ಪ್ರಶಸ್ತಿಗೆ ಭಾಜನಾಗಿದ್ನಾ ಅನ್ನೋ ಪ್ರಶ್ನೆ ಬರುತ್ತದೆ. ನನಗೆ ಪ್ರಶಸ್ತಿ ಬಂದಿರುವುದು ತುಂಬಾ ದೊಡ್ಡ ಗೌರವ.
ಡಾಕ್ಟರೇಟ್ ಅನ್ನು ತುಂಬಾ ಹಿರಿಯರಿಗೆ ಕೊಡುತ್ತಾರೆ ಅನ್ನೋ ಭ್ರಮೆ ಇತ್ತು ನನಗೆ. ಆದರೆ ಅದಕ್ಕೆ ತಕ್ಕ ವ್ಯಕ್ತಿ ಯಾರೇ ಆಗಲಿ ಅವರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ತುಂಬಾ ಜನ ಹಿರಿಯರಿಗೆ ಈ ಪ್ರಶಸ್ತಿ ಸಿಕ್ಕಿದೆ. ತುಂಬಾ ಜನರಿಗೆ ಪ್ರಶಸ್ತಿ ಸಿಗಬೇಕಿದೆ. ಆ ಹಿರಿಯರಲ್ಲಿ ನನ್ನನ್ನು ಗುರುತಿಸಿ ಈ ಪ್ರಶಸ್ತಿ ನೀಡಿದ್ದು ತುಂಬಾ ಖುಷಿ ಆಗಿದೆ ಎಂದು ತಾರಾ ಅವರು ಹೇಳಿದರು.
ಯಾವುದೇ ಪ್ರಶಸ್ತಿಯನ್ನು ನಿರಾಕರಿಸುವಷ್ಟು ದೊಡ್ಡದಾಗಿ ನಾನು ಬೆಳದಿಲ್ಲ. ಪ್ರಶಸ್ತಿ ನಮಗೆ ಸಂದ ಗೌರವ, ನಮಗೆ ತೋರಿಸುವ ಗೌರವ. ಆ ಪ್ರಶಸ್ತಿ ನನ್ನ ವೈಯಕ್ತಿವಾಗಿ ಸಂದ ಪ್ರಶಸ್ತಿ ಅಲ್ಲ. ಅದು ಒಬ್ಬ ಕಲಾವಿದನಿಗೆ ಬಂದ ಗೌರವ. ಅದನ್ನು ಕೊಟ್ಟಾಗ ನಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ನಾನು ಇನ್ನಷ್ಟು ಏನಾದರೂ ಮಾಡಬೇಕು ಅನ್ನೋದು ತಲೆಯಲ್ಲಿ ಬರುತ್ತದೆ. ಆದರೆ ಅದನ್ನು ನಿರಾಕರಿಸೋದು ನನಗೆ ಸರಿ ಅನಿಸೋದಿಲ್ಲ' ಎಂದು ತಾರಾ ಹೇಳಿದ್ದಾರೆ. ಈ ಮೂಲಕ ನಟ ರಾಜ್ಯ ಪ್ರಶಸ್ತಿ ಹಾಗೂ ಡಾಕ್ಟರೇಟ್ ನಿರಾಕರಿಸಿದ ನಟ ಸುದೀಪ್ ಗೆ ತಾರಾ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.