ಭಾರತೀಯ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಮುದ್ದಿನ ಮಗಳ ಫಿಗರ್ ನೋಡಿ ಫಿದಾ ಆದ ಕನ್ನಡಿಗರು

 | 
Hh

ಕ್ರಿಕೆಟ್ ಲೋಕದ ಲೆಜೆಂಡ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಸದ್ಯ ಮಾಡೆಲಿಂಗ್ ಜಗತ್ತಿನಲ್ಲಿ ನೆಲೆ ನಿಲ್ಲುವ ಆಲೋಚನೆಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಹೊಂದಿರುವ ಸಾರಾ ಆಗಾಗ ಮುಂಬೈನ ರೆಸ್ಟೋರೆಂಟ್‌, ಕ್ರಿಕೆಟ್ ಕ್ರೀಡಾಂಗಣದಲ್ಲಿ ಕಾಣಸಿಗುತ್ತಾರೆ. ಇತ್ತೀಚೆಗಷ್ಟೇ ಕಪ್ಪು ಬಣ್ಣದ ಉಡುಗೆ ಧರಿಸಿ ಅವರು ಸ್ನೇಹಿತರ ಜೊತೆ ಊಟಕ್ಕೆಂದು ರೆಸ್ಟೋರೆಂಟ್‌ಗೆ ತೆರಳಿದ್ದರು. ಆ ವೇಳೆ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದ್ದರು.

ಇದೀಗ ಜಿಮ್ ಮುಗಿಸಿ ಬರುವಾಗ ಕೂಡ ಕ್ಯಾಮರಾ ಕಣ್ಣಲ್ಲಿ ಸೆರೆ ಆಗಿದ್ದಾರೆ. ನೋಡಲು ಸಕತ್ ಸುಂದರವಾಗಿರುವ ಸಾರಾ  ಸಾಧಾರಣವಾಗಿ ಕ್ಯಾಮರಾ ಕಣ್ಣಿನಿಂದ ದೂರ ಇರುತ್ತಾರೆ. ಸಿನೆಮಾ ನಟಿಸಲು ಕೂಡ ಇಷ್ಟ ಪಡದೆ ತಾಯಿಯ ಹಾದಿಯಲ್ಲೇ ಸೈನ್ಸ್ ನಲ್ಲಿ ಮುಂದುವರೆದಿದ್ದಾರೆ .ಈಗಾಗಲೇ ಕೆಲ ಜಾಹೀರಾತುಗಳಲ್ಲಿ ಸಾರಾ ಕಾಣಿಸಿಕೊಂಡಿದ್ದಾರೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸಾರಾ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತ, ವಿಶಿಷ್ಟವಾದ ಫ್ಯಾಷನ್‌ ಸೆನ್ಸ್‌ನಿಂದ ನೆಟ್ಟಿಗರು ಹುಬ್ಬೇರಿಸುವಂತೆ ಮಾಡುತ್ತಿರುತ್ತಾರೆ.

ಸಚಿನ್ ತೆಂಡೂಲ್ಕರ್ ಹಾಗೂ ಡಾ ಅಂಜಲಿ ಅವರ ಮೊದಲ ಮಗು ಸಾರಾ. ಸಾರಾಗೆ ಅರ್ಜುನ್ ಎಂಬ ತಮ್ಮನಿದ್ದಾನೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಅರ್ಜುನ್ ಆಡುತ್ತಿದ್ದಾನೆ. ಸಾರಾ ಶಾಲಾ ಶಿಕ್ಷಣವನ್ನು ಮುಂಬೈನಲ್ಲಿ, ಕಾಲೇಜು ಶಿಕ್ಷಣವನ್ನು ಶಿಕ್ಷಣ ಪೂರೈಸಿದ್ದಾರೆ.ಇನ್ನು ಅಭಿಮಾನಿಗಳು, ಸಾರಾ ಅವರು 2022ರ ಐಪಿಎಲ್ ಮ್ಯಾಚ್‌ನಲ್ಲಿ ಶುಬ್ಮನ್ ಗಿಲ್ ಬೆಂಬಲಿಸಲು ಬಂದಿದ್ದರೋ ಅಥವಾ ಸಹೋದರ ಅರ್ಜುನ್‌ಗೆ ಬೆಂಬಲ ನೀಡಲು ಬಂದಿದ್ದರೋ ಎಂಬ ಸಂದೇಹದಲ್ಲಿದ್ದಾರೆ.

ಇನ್ನು ತಮ್ಮ ಹೆಸರಿನಲ್ಲಿ ಕಾರ್ಯಾಚರಿಸುತ್ತಿರುವ ಅಣಕು  ಖಾತೆಗಳನ್ನು ಕ್ಲೋಸ್‌ ಮಾಡುವಂತೆ ಸೋಶಿಯಲ್‌ ಮೀಡಿಯಾ ಎಕ್ಸ್‌ (ಟ್ವಿಟರ್)ಗೆ ಸಾರಾ ತೆಂಡೂಲ್ಕರ್‌  ಮನವಿ ಮಾಡಿದ್ದು, ಹಾಗೇ ಡೀಪ್‌ಫೇಕ್‌  ಫೋಟೋಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ.ತಮ್ಮ ಹೆಸರಿನ ಅಣಕು ಎಕ್ಸ್‌ ಖಾತೆಯ ಬಗ್ಗೆ ಅಸಮಾಧಾನಗೊಂಡಿರುವ ಸಾರಾ ತೆಂಡೂಲ್ಕರ್ ಇನ್‌ಸ್ಟಾಗ್ರಾಂ ನಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, 'ಸೋಶಿಯಲ್‌ ಮೀಡಿಯಾ ನಮಗೆಲ್ಲರಿಗೂ ನಮ್ಮ ಸಂತಸ, ದುಃಖ ಹಾಗೂ ದಿನಚರಿಯನ್ನು ಹಂಚಿಕೊಳ್ಳಲು ಅದ್ಭುತ ಜಾಗ ಎಂಬುದರಲ್ಲಿ ಎರಡು ಮಾತಿಲ್ಲ. 

ಆದರೂ, ತಂತ್ರಜ್ಞಾನದ ದುರ್ಬಳಕೆಯು ವಿಷಾದಗೊಳಿಸುವಂಥದು. ಯಾಕೆಂದರೆ ಇದು ಇಂಟರ್‌ನೆಟ್‌ನ ವಿಶ್ವಾಸಾರ್ಹತೆ ಹಾಗು ಅಧಿಕೃತತೆಯನ್ನು ಕಿತ್ತುಕೊಳ್ಳುತ್ತದೆ. ನನ್ನ ಕೆಲವು ಡೀಪ್‌ಫೇಕ್‌ ಫೋಟೋಗಳು ಕಂಡುಬಂದಿವೆ. ಅವೆಲ್ಲವೂ ಸತ್ಯಕ್ಕೆ ದೂರವಾದುದು ಎಂದು ಹೇಳಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.