33 ಕೋಟಿ ಲಾಟರಿ ಹಣ ಗೆದ್ದ ಭಾರತೀಯ ಯುವಕ, ಮನೆ ತುಂಬಾ ನೋಟಿನ ಕಂತೆ

 | 
Fbgt

ಸಣ್ಣ ಉದ್ಯೋಗದಲ್ಲಿರುವ ಈ ವ್ಯಕ್ತಿಗೆ ಲಾಟರಿ ಪಡೆಯುವ ಹವ್ಯಾಸ. ಹಲವಾರು ವರ್ಷದಿಂದ ಲಾಟರಿ ಖರೀದಿಸುತ್ತಿದ್ದರೂ ಒಮ್ಮೆಯೂ ಬಹುಮಾನ ಬಂದಿರಲಿಲ್ಲ. ಈ ಬಾರಿ ಪತ್ನಿಯ ಸಲಹೆಯಂತೆ ತಮ್ಮಿಬ್ಬರು ಮಕ್ಕಳ ಜನುಮ ದಿನದ ನೆನಪಿಗಾಗಿ ಲಾಟರಿಗಳನ್ನು ಖರೀದಿಸಿದರು. ಒಂದು ಲಾಟರಿ ಬಹುಮಾನ ತಂದೇ ಬಿಟ್ಟಿತು. ಅದು ಬರೋಬ್ಬರಿ 33 ಕೋಟಿ ರೂ. ಎರಡು ಲಾಟರಿ ಪಡೆದಿದ್ದರಿಂದ ಉಚಿತವಾಗಿ ಸಿಕ್ಕಿದ್ದ ಒಂದು ಲಾಟರಿಯಲ್ಲಿ ಬಹುಮಾನ ಲಭಿಸಿದ ಖುಷಿ. 

ಇನ್ನೂ ಮೂರು ಲಾಟರಿಗೆ ಬಹುಮಾನ ಸಿಗಬಹುದು ಎನ್ನುವ ಕಾತರ.ಇದು ಕೇರಳ ಮೂಲದ ರಾಜೀವ್‌ ಎಂಬುವವರಿಗೆ ತಮ್ಮ ಮಕ್ಕಳ ಜನುಮ ದಿನ ತಂದುಕೊಟ್ಟ ಅದೃಷ್ಟ. ಸದ್ಯ ಯುಎಇನಲ್ಲಿ ನೆಲೆಸಿರುವ ರಾಜೀವ್‌ ತಮಗೆ ದೊರೆತ ಬಹುಮಾನದಿಂದ ಭಾರೀ ಖುಷಿಯಾಗಿದ್ದಾರೆ ಎಂದು ಕೇರಳದ ಖಲೀಜ್‌ ಟೈಮ್ಸ್‌ ವರದಿ ಮಾಡಿದೆ. 40 ವರ್ಷದ ರಾಜೀವ್‌ ಅರಿಕ್ಕಟ್‌ ಅವರು ಶಿಕ್ಷಣ ಪಡೆದು ಕೇರಳದಲ್ಲಿಯೇ ಕೆಲಸ ಮಾಡಿಕೊಂಡಿದ್ದರು. 

ಹತ್ತು ವರ್ಷದ ಹಿಂದೆ ಕೆಲಸ ಅರಸಿ ಯುಎಐಗೆ ಆಗಮಿಸಿದ್ದರು. ಇಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಡ್ರಾಫ್ಟ್‌ಮ್ಯಾನ್‌ ಆಗಿದ್ದರು. ಬರುವ ಸಂಬಳ ಸ್ವಲ್ಪ. ಅದರಲ್ಲಿಯೇ ಕುಟುಂಬ ಸಾಗಬೇಕು. ಮೂರು ವರ್ಷದಿಂದ ರಾಜೀವ್‌ ಲಾಟರಿ ಟಿಕೆಟ್‌ ಖರೀದಿಸಲು ಆರಂಭಿಸಿದ್ದರು. ಒಮ್ಮೆಯೂ ಬಹುಮಾನ ಬಂದಿರಲಿಲ್ಲ.
ಈ ಬಾರಿ ಲಾಟರಿ ತರಲು ಹೋದಾಗ ಪತ್ನಿಯೂ ಜತೆಗಿದ್ದರು. ಮಕ್ಕಳ ಜನುಮ ದಿನವಾದ 7 ಮತ್ತು 13 ಸಂಖ್ಯೆಯನ್ನು ಪತ್ನಿ ಸಲಹೆಯಂತೆ ಆಯ್ಕೆ ಮಾಡಿಕೊಂಡಿದ್ದರು. 

ಎರಡು ವಿಶೇಷ ಲಾಟರಿ ಖರೀದಿಸಿದ್ದಕ್ಕೆ ನಾಲ್ಕು ಉಚಿತ ಲಾಟರಿ ಅವರಿಗೆ ಲಭಿಸಿತ್ತು. ಅದರಲ್ಲಿ ಈ ಎರಡು ಸಂಖ್ಯೆಯೂ ಸೇರಿ ಒಟ್ಟು ನಾಲ್ಕು ಲಾಟರಿ ಆಯ್ಕೆ ಮಾಡಿಕೊಂಡಿದ್ದರು. ಒಟ್ಟು ಆರು ಲಾಟರಿಗಳು ರಾಜೀವ್‌ ಬಳಿ ಇದ್ದವು. ಒಂದರಲ್ಲಾದರೂ ಲಾಟರಿ ಬರಲಿ. ಮಕ್ಕಳ ಹೆಸರಿನ ಸಂಖ್ಯೆಗೆ ಲಾಟರಿ ಬಂದರೆ ಖುಷಿ ಎಂದು ಪ್ರಾರ್ಥಿಸಿಕೊಂಡಿದ್ದರು. 

ಅವರ ಪ್ರಾರ್ಥನೆ ಫಲ ನೀಡಿತ್ತು. ಏಕೆಂದರೆ ಅವರಿಗೆ ಬಹುಮಾನ ಬಂದಿತ್ತು. ಬಿಗ್‌ ಟಿಕೆಟ್‌ನಲ್ಲಿ ಬಹುಮಾನ ಪ್ರಕಟಿಸಿದಾಗ ಇವರ ಸಂಖ್ಯೆಯೂ ಇತ್ತು. ಇದರಲ್ಲಿ 33 ಕೋಟಿ ರೂ. ಬಹುಮಾನ ಲಭಿಸಿರುವುದಾಗಿ ಘೋಷಿಸಲಾಯಿತು. ಬಿಗ್‌ ಬಹುಮಾನದಲ್ಲಿ ಒಟ್ಟು 19 ಮಂದಿಗೆ ಬಹುಮಾನ ಹಂಚಿಕೆಯಾಗಲಿದೆ. ಇದರಲ್ಲಿ ರಾಜೀವ್‌ಗೆ 33 ಕೋಟಿ ರೂ. ಸಿಗಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.