ಜನ್ಮದಿನದಂದು ಸೌಜನ್ಯ ಪ್ರತಿಮೆ ಪ್ರತಿಷ್ಟಾಪನೆ, ನ್ಯಾಯಕ್ಕಾಗಿ ದೈವ ದೇವರ ಬಳಿ ಪ್ರಾಥ೯ನೆ

 | 
Nbhh

 ಧರ್ಮಸ್ಥಳದಲ್ಲಿ ದುಷ್ಟರ ಅಟ್ಟಹಾಸಕ್ಕೆ ಬಲಿಯಾದ ಸೌಜನ್ಯಾಳ  28ನೇ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿದ ಕುಟುಂಬ ಸದಸ್ಯರು, ಆಕೆಯ ಸಮಾಧಿ ಬಳಿ ಹೊಸ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.ರಾಜ್ಯದಲ್ಲಿ ಕಳೆದ 11 ವರ್ಷಗಳ ಹಿಂದೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನೋವು ಅನುಭವಿಸಿ ಭೀಕರವಾಗಿ
 ಸಾವನ್ನಪ್ಪಿದ್ದಾಳೆ. ದುಷ್ಟರ ಆಸೆಗೆ ಸುಂದರ ಹೂವೊಂದು ಅರಳುವ ಮುನ್ನವೇ ಕಮರಿ ಹೋಗಿದೆ. 


ಇನ್ನು ಸೌಜನ್ಯಾ ಆತ್ಯಾಚಾರ ಆರೋಪಿ ಯಾರೆಂಬುದನ್ನು ಈಗಲೂ ಸರ್ಕಾರದಿಂದ ಪತ್ತೆಮಾಡಲು ಸಾಧ್ಯವಾಗಿಲ್ಲ. ಸೌಜನ್ಯ ಈಗ ಜೀವಂತವಾಗಿದ್ದರೆ ಆಕೆ ತನ್ನ 28ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಳು. ಆದರೆ, ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಶಪಥ ಮಾಡಿರುವ ಕುಟುಂಬ ಸದಸ್ಯರು ಬುಧವಾರ  ಸೌಜನ್ಯಾಳ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನಲ್ಲಿ 1.5 ಅಡಿ ಎತ್ತರದ ಕಲ್ಲಿನ ಪ್ರತಿಮೆಯನ್ನು ನಿರ್ಮಿಸಿ ಅದನ್ನು ತಂದು ಸೌಜನ್ಯಾಳ ಸಮಾಧಿ ಬಳಿ ಪ್ರತಿಷ್ಠಾಪಿಸಿ ಪೂಜೆಯನ್ನು ಮಾಡಿದ್ದಾರೆ.


 ಸೌಜನ್ಯಾ ಮೂರ್ತಿಯು ಕೂತಿರುವ ಭಂಗಿಯಲ್ಲಿದ್ದು, ಕಲ್ಲಿನ ಪ್ರತಿಮೆ ಪ್ರತಿಷ್ಠಾಪನೆಗೊಳಿಸಿ ನವರಾತ್ರಿ ಅಂಂಗವಾಗಿ ಭಜನೋತ್ಸವ ಮಾಡಲಾಗಿದೆ.ಸೌಜನ್ಯ ನಿವಾಸದಲ್ಲಿ ಆಕೆಯ ಸಮಾಧಿ ಬಳಿಯೇ ಈ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈ ವೇಳೆ ಸುಳ್ಯ ಭಾಗದ ಸೌಜನ್ಯಾಪರ ನ್ಯಾಯಕ್ಕಾಗಿ ಹೋರಾಟ ಮಾಡಿದವರು ಹಾಗೂ ವಿವಿಧ ಪಕ್ಷಗಳು ಮುಖಂಡರು ಕುಟುಂಬ ಸದಸ್ಯರಿಗೆ ಸೌಜನ್ಯಾಳ ಪ್ರತಿಮೆ ಪ್ರತಿಷ್ಠಾಪನೆಗೆ ಸಾಥ್ ನೀಡಿದ್ದಾರೆ. ಎಲ್ಲರೂ ಸೇರಿ ಸೌಜನ್ಯಾ ಚಾಮುಂಡೇಶ್ವರಿಯ ಸ್ವರೂಪವಾಗಿ ಲಕ್ಷಾಂತರ ಜನರಿಗೆ ಅಭಯ ನೀಡಲಿ ಎಂದು ಪ್ರಾರ್ಥನೆ ಮಾಡಿದ್ದಾರೆ. 


ಸೌಜನ್ಯ ನಿವಾಸದಲ್ಲಿ ಆಕೆಯ ಸಮಾಧಿ ಬಳಿಯೇ ಈ  ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಆ ಸಂದರ್ಭ ಹಲವು ಸುಳ್ಯ ಭಾಗದ ಒಕ್ಕಲಿಗ ನಾಯಕರು ಪಾಲ್ಗೊಂಡಿದ್ದರು . ಪ್ರಾರ್ಥನೆ ನೆರವೇರಿಸಿದ ಒಕ್ಕಲಿಗ ಹಾಗೂ ಬಿಜೆಪಿ ಮುಖಂಡರಾದ ದಕ್ಷಿಣ ಕನ್ನಡ ಜೇನು ಸಹಕಾರ ಸಂಘದ ಅಧ್ಯಕ್ಷ ಚಂದ್ರ ಕೊಲ್ಚಾರು, ಸೌಜನ್ಯಾ ಚಾಮುಂಡೇಶ್ವರಿಯ ಸ್ವರೂಪವಾಗಿ ಲಕ್ಷಾಂತರ ಜನರಿಗೆ ಅಭಯ ನೀಡುವ ಕೆಲಸವಾಗಲಿ ಎಂದು ಪ್ರಾರ್ಥಿಸಿದ್ದಾರೆ. 


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.