ಡ್ರೋನ್ ಪ್ರತಾಪ್ ಅವರಿಗೆ ಮದುವೆ ಆಗಿದ್ಯಾ’ ಹುಟ್ಟೂರಲ್ಲಿ ಮಗು ಜೊತೆ ಬಿಗ್ ಬಾಸ್ ಪ್ರತಾಪ್ ಪತ್ತೆ

 | 
Bjis

ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 10’ನ ರನ್ನರ್ ಅಪ್ ಆಗಿದ್ದಾರೆ. ರನ್ನರ್​ಅಪ್ ಆದ ಪ್ರತಾಪ್ ಅವರಿಗೆ ಬಿಗ್ ಬಾಸ್ ಕಡೆಯಿಂದ 10 ಲಕ್ಷ ರೂಪಾಯಿ ಹಾಗೂ ಒಂದು ಬೌನ್ಸ್ ಬೈಕ್ ಸಿಕ್ಕಿದೆ. ಪ್ರತಾಪ್‌ಗೆ ಬಿದ್ದ ವೋಟ್​ಗಳ ಸಂಖ್ಯೆ ಕೋಟಿಗಳಲ್ಲಿದೆ. YBವಿನಯ್‌ ಗೌಡ, ಸಂಗೀತಾ ಶೃಂಗೇರಿ ಅವರನ್ನೂ ಸೋಲಿಸಿ ಪ್ರತಾಪ್‌ ಕೊನೆಗೂ ರನ್ನರ್​ಅಪ್ ಆಗೇ ಬಿಟ್ಟರು. 

ಈ ಬಗ್ಗೆ ಪ್ರತಾಪ್ ಅವರಿಗೆ ಯಾವುದೇ ಬೇಸರ ಇಲ್ಲ. ನನಗೆ ಇಲ್ಲಿಯವರೆಗೆ ಬಂದಿದ್ದು ಖುಷಿ ಇದೆ ಎಂದು ವೇದಿಕೆ ಮೇಲೆ ಹೇಳಿದ್ದಾರೆ. ಆದರೀಗ ಪ್ರತಾಪ್‌ ತಮಗೆ ಸಿಕ್ಕ ಬಹುಮಾನವನ್ನು ಏನು ಮಾಡುವುದಾಗಿ ವೇದಿಕೆ ಮೇಲೆ ಪ್ರತಾಪ್ ಘೋಷಿಸಿದ್ದಾರೆ. ಬೌನ್ಸ್ ಸ್ಕೂಟರ್​ನ ಫುಡ್ ಡೆಲಿವರಿ ಬಾಯ್​ಗೆ ನೀಡುವುದಾಗಿ ಹೇಳಿದ್ದಾರೆ. ಪ್ರತಾಪ್ ನಿರ್ಧಾರವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.

ಬಿಗ್‌ ಬಾಸ್‌ ರನ್ನರ್‌ಅಪ್‌ ಎಂದು ತಿಳಿದ ಪ್ರತಾಪ್‌ ಬಳಿಕ ಸುದೀಪ್‌ ಜತೆ ಮಾತನಾಡಿದರು. ಈ ಮುಂಚೆ ನಾನು ಹೇಳಿದ ಹಾಗೇ ನಾನು ಆಡುತ್ತಿರುವುದು ಗೆಲ್ಲಲು ಮಾತ್ರ, ಹಣಕ್ಕಾಗಿ ಅಲ್ಲ, ಮೊದಲೇ ಹೇಳಿದಂತೆ ನನಗೆ ಟ್ರೋಫಿ ಮಾತ್ರ ಸಾಕು, ಹಣವನ್ನು ನಾನು ಯಾವುದಾದರೂ ಸೇವಾಲಯಕ್ಕೆ ದಾನ ಮಾಡುತ್ತೇನೆ ಎಂದರು ಬಂದ ಹಣವನ್ನು ಕೂಡ ಅಪ್ಪುವಿನ ಶಕ್ತಿ ಧಾಮಕ್ಕೆ ನೀಡುತ್ತೇನೆ ಎಂದಿದ್ದಾರೆ.

ಇದೀಗ ಪ್ರತಾಪ್‌ ಅವರು ಘೋಷಿಸುತ್ತಿದ್ದಂತೆ ಅನೇಕರು ಮೆಚ್ಚಿದ್ದಾರೆ. ಫ್ಯಾನ್ಸ್‌ ಕಮೆಂಟ್‌ ಮೂಲಕ ಪ್ರತಾಪ್‌ ಅವರನ್ನು ಹೊಗಳುತ್ತಿದ್ದಾರೆ. ವೇದಿಕೆಯಲ್ಲಿ ವೋಟ್‌ಗಳ ಬಗ್ಗೆ ಸುದೀಪ್‌ ಮಾಹಿತಿ ನೀಡಿದರು. ರನ್ನರ್​ ಅಪ್​ಗೆ ಸಿಕ್ಕ ವೋಟ್ 2,20,04,202, ವಿನ್ನರ್​ಗೆ ಸಿಕ್ಕ ವೋಟ್ 2, 97,39,904’ ಎಂದರು ಸುದೀಪ್ ಅವರು.