ದುನಿಯಾ ವಿಜಯ್ ಜೀವನದಲ್ಲಿ ಮತ್ತೆ ಬಿರುಕು? ಎರಡನೇ ಪತ್ನಿಯೂ ಜೊತೆಗಿಲ್ಲ ಯಾ.ಕೆ

 | 
ರ

ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್‌ ಆಗಾಗ ತಮ್ಮ ಫ್ಯಾಮಿಲಿ ವಿಚಾರಕ್ಕೆ ಮುನ್ನೆಲೆಗೆ ಬರುತ್ತಿರುತ್ತಾರೆ. ಮೊದಲ ಪತ್ನಿ, ಎರಡನೇ ಪತ್ನಿ, ಮೂವರು ಮಕ್ಕಳು.. ಹೀಗೆ ಸೋಷಿಯಲ್‌ ಮೀಡಿಯಾದಲ್ಲಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿರುತ್ತಾರೆ ವಿಜಯ್. ಇತ್ತೀಚೆಗಷ್ಟೇ ಹಿರಿ ಮಗಳನ್ನು ವಿದೇಶಕ್ಕೆ ಕಳಿಸುವ ನೆಪದಲ್ಲಿ ಮೊದಲ ಪತ್ನಿ ಜತೆ ವಿಜಯ್‌ ಕಾಣಿಸಿಕೊಂಡಿದ್ದರು. 

ಇದೆಲ್ಲದರ ನಡುವೆಯೇ ಎರಡನೇ ಪತ್ನಿ ಕೀರ್ತಿ ಪಟ್ಟಾಡಿ ಜತೆ ವಿಜಯ್‌ ದೂರವಾಗಿದ್ದಾರಾ? ಹೀಗೊಂದು ಅನುಮಾನ ಮೂಡಿತ್ತು. ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ವಿಚಾರಗಳು, ಸಿನಿಮಾ ವಿವಾದಗಳಿಗೆ ಸುದ್ದಿಯಾದಷ್ಟೇ ವೈಯಕ್ತಿಕ ವಿಚಾರಗಳಿಗೂ ವಿಜಯ್‌ ಆಗಾಗ ಸದ್ದು ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಮೊದಲ ಪತ್ನಿ ನಾಗರತ್ನ ಅವರಿಗೆ 2013ರಲ್ಲಿ ವಿಚ್ಛೇದನ ನೀಡಿದ ಬಳಿಕ, ಕೀರ್ತಿ ಪಟ್ಟಾಡಿ ಜತೆಗೆ ಎರಡನೇ ಮದುವೆಯಾಗಿದ್ದ ವಿಜಯ್‌, ಇಂದಿಗೂ ಅವರ ಜತೆಗೇ ಇದ್ದಾರಾ? ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸ್ವತಃ ಕೀರ್ತಿ ಅವರಿಗೇ ನೆಟ್ಟಿಗರೊಬ್ಬರಿಂದ ಪ್ರಶ್ನೆ ಎದುರಾಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ‌ಕೀರ್ತಿ ಪಟ್ಟಾಡಿ ಸಕ್ರಿಯರು. ಆಗಾಗ ಫೋಟೋ ಗೊಂಚಲುಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡುತ್ತಲೇ ಇರುತ್ತಾರೆ. ಆದರೆ, ಅವರ ಇನ್‌ಸ್ಟಾ ಪ್ರೋಫೈಲ್‌ ಗಮನಿಸಿದರೆ, ಅಲ್ಲಿ ಒಂದೇ ಒಂದು ಪತಿ ವಿಜಯ್‌ ಜತೆಗಿನ ಫೋಟೋಗಳು ಕಾಣಸಿಗುವುದಿಲ್ಲ. ಆ ಒಂದು ಕಾರಣದಿಂದಲೇ ಅವರ ಪ್ರತಿ ಪೋಟೋಗಳಿಗೂ ಸಾಕಷ್ಟು ಮಂದಿ ನೆಟ್ಟಿಗರು, ಪತಿ ಜತೆಗಿನ ಫೋಟೋ ಶೇರ್‌ ಮಾಡಿ ಪ್ಲೀಸ್‌ ಎಂದು ಕೇಳಿಕೊಂಡ ಉದಾಹರಣೆಗಳಿವೆ. ಇಷ್ಟಾದರೂ, ವಿಜಯ್‌ ಜತೆಗಿನ ಫೋಟೋ ಶೇರ್‌ ಮಾಡಿಲ್ಲ ಕೀರ್ತಿ.

ಇತ್ತ ನೀವು ಪತಿ ದುನಿಯಾ ವಿಜಯ್‌ ಅವರೊಂದಿಗೇ ಇದ್ದೀರಾ? ನಾನು ನಿಮ್ಮಿಬ್ಬರ ಫೋಟೋಗಳನ್ನು ನೋಡಿಯೇ ಇಲ್ಲ ಎಂಬ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ ಕೀರ್ತಿ, ಯಾವಾಗಲೂ ಮತ್ತು ಎಂದೆಂದಿಗೂ ಎಂದು ಆ ಪ್ರಶ್ನೆಗೆ ಕಾಮೆಂಟ್‌ ಹಾಕಿದ್ದಾರೆ. ಅದಾದ ಬಳಿಕ ಓಹ್‌ ಒಳ್ಳೆಯದು, ಆ ದೇವರು ನಿಮ್ಮಿಬ್ಬರನ್ನು ಚೆನ್ನಾಗಿಟ್ಟಿರಲಿ ಎಂದಿದ್ದಾರೆ. ಅದಕ್ಕೂ ಉತ್ತರಿಸಿದ ಕೀರ್ತಿ, ನಿಮ್ಮ ಈ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಎಂದಿದ್ದಾರೆ. ಈ ಮೂಲಕ ಹರಿದಾಡಿದ ಸುದ್ದಿಗೆ ತೆರೆ ಎಳೆದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.