ಗುರೂಜಿ ಮಾತಿಗೆ ಪ್ರತಾಪ್ ಸು.ಸೈಡ್ ಮಾಡಲು ಹೋಗಿದ್ದು ನಿಜಾನಾ? ಅಜ್ಜಿ ಹೇಳಿದ್ದೇನು ಗೊ ತ್ತಾ

 | 
Bd

ಬಿಗ್‌ ಬಾಸ್‌ ಸೀಸನ್‌ ಕಾರ್ಯಕ್ರಮದಲ್ಲಿ ವೀಕ್ಷಕರಿಂದ ಅಪಾರ ಬೆಂಬಲ ಪಡೆದುಕೊಂಡಿರುವ ಡ್ರೋನ್‌ ಪ್ರತಾಪ್‌ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರ ಬೆಂಬಲಿಗರ ಚಿಂತೆಗೆ ಕಾರಣವಾಗಿದೆ.ಎರಡು ಮೂರು ದಿನಗಳಿಂದ ಪ್ರತಾಪ್‌ ಮನೆಯಲ್ಲಿ ಸಕ್ರಿಯವಾಗಿ ಯಾವ ವಿಚಾರದಲ್ಲೂ ಭಾಗಿಯಾಗುತ್ತಿಲ್ಲ. ಇತ್ತೀಚೆಗೆ ಗುರೂಜಿ ಮನೆಗೆ ಬಂದಾಗ ಪ್ರತಾಪ್‌ ಅವರ ಭವಿಷ್ಯ ನುಡಿದಿದ್ದರು. 

ಇದರಲ್ಲಿ ಮನೆಯಿಂದ ದೂರವಿರುವುದು ಒಳಿತು ಎಂದು ಹೇಳಿದ್ದರು. ಕಳೆದ ಮೂರು ವರ್ಷಗಳಿಂದ ಅಪ್ಪ- ಅಮ್ಮನಿಂದ ದೂರವಿದ್ದ ಪ್ರತಾಪ್ ಗುರೂಜಿಯ ಮಾತುಗಳನ್ನು ಕೇಳಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.
ಇನ್ನು ಈ ಕುರಿತು ಮಾತನಾಡಿದ ಪ್ರತಾಪ್ ಅಭಿಮಾನಿ ಮಹಿಳೆಯೊಬ್ಬರು ಬ್ರಹ್ಮ ಹುಟ್ಟುವಾಗಲೇ ಎಲ್ಲರ ಹಣೆ ಬರಹ ಬರೆದು ಕಳುಹಿಸುತ್ತಾನೆ. 

ಯಾರು ಏನೇ ಹೇಳಿದರೂ ಮಾಡಿದರೂ ಕೂಡ ಅದನ್ನು ತಿದ್ದಲು ಸಾಧ್ಯವಿಲ್ಲತಂದೆ ತಾಯಿ ಜೊತೆಗೆ ಇದ್ದು ಹೇಸಿಗೆ ಆದರೆ ಆಗಲಿ ಆದರೆ ಅವರ ಮಾತು ಕೇಳಿ ತಂದೆ ತಾಯಿ ಯನ್ನು ಬಿಟ್ಟು ದೂರ ಹೋಗಿ ಉಳಿಯುವುದು ಬೇಡ ಎಂದಿದ್ದಾರೆ. ಕುಟುಂಬ ಜೀವನ ಅಷ್ಟು ಸರಿ ಇಲ್ಲ. ದೂರ ಇದ್ದು ಧೂಪವಾಗ್ತಿಯೋ, ಹತ್ತಿರವಿದ್ದು ಹೇಸಿಗೆ ಆಗ್ತೀಯೋ ನಿನಗೆ ಬಿಟ್ಟಿದ್ದು ಅಂತ ಭವಿಷ್ಯ ನುಡಿದಿದ್ದಾರೆ. ಆದರೆ ಅದರಿಂದ ಪ್ರತಾಪ್ ಗೆ ಅದೆಷ್ಟು ನೋವಾಗಿರಬಹುದು ಈಗಾಗಲೇ ಇದನ್ನು ಕೇಳಿ ಪ್ರತಾಪ್ ಕುಗ್ಗಿ, ಕಣ್ಣೀರು ಹಾಕಿದ್ದಾರೆ. 

ಡ್ರೋನ್ ವಿಚಾರವಾಗಿ ಸಾಕಷ್ಟು ಟ್ರೋಲ್, ಟೀಕೆಗಳನ್ನು ಎದುರಿಸಿದ್ದ ಪ್ರತಾಪ್, ತಾವು ಮಾಡಿದ ತಪ್ಪಿನಿಂದ ಸಾಕಷ್ಟು ಕುಗ್ಗಿ ಹೋಗಿದ್ದರು. ಜೊತೆಗೆ ಕಳೆದ ಮೂರು ವರ್ಷಗಳಿಂದ ಹೆತ್ತವರಿಂದಲೂ ದೂರವಾಗಿಬಿಟ್ಟಿದ್ದರು. ಆದರೆ,  ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಟ್ಟ ಮೇಲೆ ಕನ್ನಡಿಗರು ಪ್ರತಾಪ್ ತಪ್ಪನ್ನು ಕ್ಷಮಿಸಿ, ಪ್ರೀತಿಯಿಂದ ಅಪ್ಪಿಕೊಂಡಿದ್ದರು. ಜೊತೆಗೆ ಕಳೆ ವಾರ ಬಿಗ್‌ಬಾಸ್‌ ಮನೆಯಲ್ಲಿ ಅಪ್ಪ-ಅಮ್ಮನನ್ನು ಭೇಟಿಯಾಗಿ ಖುಷಿಯಿಂದ ಇದ್ದರು. ಇದೀಗ ಮತ್ತೆ ಕುಗ್ಗಿದ್ದಾರೆ ಅವರೇನು ಅವನ ಭವಿಷ್ಯ ಹಾಗೆಲ್ಲ ನುಡಿಯಲು ದೇವರಲ್ಲವಲ್ಲ ಎಂದು ಮಹಿಳೆ ಕಿಡಿಕಾರಿದ್ದಾರೆ.

ಇದರೊಂದಿಗೆ ಮನೆಯ ಟಾಸ್ಕ್‌ ಗಳಿಂದ ಅವರನ್ನು ಹೊರಗಿಟ್ಟಿದ್ದಾರೆ. ಸಂಗೀತಾ , ನಮೃತಾ ಅವರು ನೀನು ಟಾಸ್ಕ್‌ ನಲ್ಲಿ ಪ್ಯಾನಿಕ್ ಆಗ್ತೀಯಾ ಎಂದು ಹೇಳಿದ್ದಾರೆ. ಮನೆಯಲ್ಲಿ ಎಲ್ಲರಿಂದ ಅವಮಾನ ಹಾಗೂ ಹೀಯಾಳಿಸುವುದರಿಂದ ಮಾನಸಿಕವಾಗಿ ಪ್ರತಾಪ್‌ ಕುಗ್ಗಿ ಹೋಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕಮೆಂಟ್‌ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.