ಇದು ಟಾಕ್ಸಿಕ್ ಟೀಸರ್ ಅಲ್ಲ, ಕಾಂಡೋಮ್ ಟೀಸರ್? Confuse ಆದ ವೀಕ್ಷಕರು
Jan 11, 2025, 20:15 IST
|
ಕನ್ನಡದ ಸ್ಟಾರ್ ನಟ ಕೆಜಿಎಫ್ ಖ್ಯಾತಿಯ ಯಶ್ ಅವರ ಹೊಸ ಸಿನಿಮಾ ಟಾಕ್ಸಿಕ್ ಝಲಕ್ ಬಿಡುಗಡೆಯಾಗಿದೆ. ಗೀತು ಮೋಹನ್‌ದಾಸ್-ನಿರ್ದೇಶನದ ಪೋಸ್ಟರ್ ಹಂಚಿಕೊಂಡು ಝಲಕ್ ಬಿಡುಗಡೆಯಾಗುವ ಬಗ್ಗೆ ಯಶ್ ಈಗಾಗಲೇ ಮಾಹಿತಿ ನೀಡಿದ್ದರು. ಜನವರಿ 8 ಯಶ್ ಅವರ ಜನ್ಮದಿನದಂದೆ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೊಂದು ಬಹು ನಿರೀಕ್ಷಿತ ಚಿತ್ರವಾಗಿದ್ದು ಸಾಕಷ್ಟು ಜನರಲ್ಲಿ ಕುತೂಹಲ ಹೆಚ್ಚಿಸಿದೆ.
ಮೊದಲ ವಿಡಿಯೋ ತುಣುಕು ಬಿಡುಗಡೆಗಾಗಿ ಸಾಕಷ್ಟು ಅಭಿಮಾನಿಗಳು ಕಾದಿದ್ದು ಇದೀಗ ಪಾರ್ಟಿ ಸೀನ್ ಬಿಡುಗಡೆಯಾಗಿದೆ. ಪಾರ್ಟಿ ಲುಕ್‌ನಲ್ಲಿ ಯಶ್ ರಿಚ್ ಆಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. 2025ರ ಭಾರತೀಯ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಈ ಟಾಕ್ಸಿಕ್ ಸಿನಿಮಾ ಸಾಮಾಜಿಕ ಮಾಧ್ಯಮದಲ್ಲಿ ಹೈಪ್ ಕ್ರಿಯೇಟ್ ಮಾಡಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ ಈ ಗ್ಯಾಂಗ್‌ಸ್ಟರ್ ಡ್ರಾಮಾಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್‌ನ ಮಾನ್‌ಸ್ಟರ್ ಮೈಂಡ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. ಜನವರಿ 8 ಯಶ್ ಅವರ ಹುಟ್ಟುಹಬ್ಬದಂದು ಅವರ ಅಭಿಮಾನಿಗಳ ಆಸೆ ಈಡೇರಿದೆ. ಯಶ್ ತುಂಬಾ ರಿಚ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್‌ನಿಂದ ಕ್ಲಬ್‌ಗೆ ಬಂದು ಇಳಿಯುತ್ತಾರೆ. ಎಲ್ಲೆಡೆ ರೆಡ್ ಲೈಟ್. ಕಣ್ಣು ಕುಕ್ಕುವ ಬೆಳಕಿನ ಅಲಂಕಾರ. ಯಾರೋ ಕಾರ್ ಡೋರ್ ಓಪನ್ ಮಾಡುತ್ತಾರೆ. ಆಗ ಯಶ್ ಲಗ್ಸುರಿ ಕಾರ್‌ನಿಂದ ಇಳಿದು ತಕ್ಷಣ ಸಿಗರೇಟ್ ಹೊತ್ತಿಸಿಕೊಂಡು ಒಳಗಡೆ ಹೋಗುತ್ತಾರೆ. ಆಗ ಅವರ ಲುಕ್ ಮಾತ್ರ ವೀಕ್ಷಕರಲ್ಲಿ ಸಂಚಲನ ಮೂಡಿಸುವಂತಿದೆ. ಅಲ್ಲಿ ಸಾಕಷ್ಟು ಜನ ಪಾರ್ಟಿಯ ಮೋಜಿನಲ್ಲಿ ಮುಳುಗಿ ಅಮಲಿನಲ್ಲಿ ತೇಲುತ್ತಾ ಇರುತ್ತಾರೆ. ಕಾರ್ಡ್ಸ್ ಆಡುವವರು, ಡ್ರಗ್ಸ್ ತೆಗೆದುಕೊಳ್ಳುವವರು ಹೀಗೆ ಸಾಕಷ್ಟು ರೀತಿಯಲ್ಲಿ ಪಾರ್ಟಿಯ ಮೋಜಿನ ಚಿತ್ರಣವನ್ನು ನೀಡಿದ್ದಾರೆ.
ಯಶ್ ಅವರ ಹಿಂದಿನಿಂದ ಒಂದಷ್ಟು ಜನ ನಡೆದುಕೊಂಡು ಬರುತ್ತಾರೆ. ಪಿಯಾನೋ ಪಕ್ಕದಲ್ಲಿ ಕುಳಿತುಕೊಂಡ ಹುಡುಗಿಯನ್ನು ತನ್ನೆಡೆಗೆ ಸೆಳೆಯುತ್ತಾ ಅವಳ ಮೇಲೆ ಬಾಟಲಿಯಲ್ಲಿದ್ದ ಮದ್ಯವನ್ನು ಸುರಿಯುತ್ತಾರೆ. ಮ್ಯೂಸಿಕ್ ಈ ಸೀನ್‌ಗಳಿಗೆ ಕಿಕ್ ಕೊಡುವಂತಿದೆ. ಆದರೆ ಇದು ಕಾಂಡೋಮ್ ಜಾಹೀರಾತಿನ ರೀತಿ ಇದೆ.ಈ ವಿಡಿಯೋ ಬಗ್ಗೆ ಮಲಯಾಳಂ ಚಿತ್ರರಂಗದಲ್ಲಿ ವಿರೋಧ ವ್ಯಕ್ತವಾಗಿದೆ. ಅನೇಕರು ಗೀತು ಮೋಹನ್‌ದಾಸ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ಮಹಿಳೆಯರನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಅನೇಕರು ಆರೋಪಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.