ಆ ಸೀನ್ ಮಾಡುವಾಗ ಮನಸ್ಸಿಗೆ ತುಂಬಾ ನೋವುಂಟಾಯಯಿತು; ಅಳುನು ಬಂತು ಎಂದ ನ ಟಿ
ನಟಿ ಅಂಜಲಿ ಅಭಿನಯದ ಬಹಿಷ್ಕರಣ ವೆಬ್ ಸರಣಿಯು ಈ ತಿಂಗಳ 19 ರಿಂದ ಜನಪ್ರಿಯ OTT ಪ್ಲಾಟ್‌ಫಾರ್ಮ್ Zee 5 ನಲ್ಲಿ ಸ್ಟ್ರೀಮ್ ಆಗುತ್ತಿದೆ. ಇತ್ತೀಚೆಗಷ್ಟೇ ಗ್ಯಾಂಗ್ಸ್ ಆಫ್ ಗೋದಾವರಿ ಸಿನಿಮಾದ ಮೂಲಕ ಸೂಪರ್ ಹಿಟ್ ಪಡೆದಿದ್ದ ಅಂಜಲಿ ಬಹಿಷ್ಕರಣ ವೆಬ್ ಸೀರಿಸ್ ಮೂಲಕ ಹೊಸ ಪಾತ್ರದಲ್ಲಿ ಪ್ರೇಕ್ಷಕ ಮುಂದೆ ಬಂದಿದ್ದಾರೆ.
ಮುಖೇಶ್ ಪ್ರಜಾಪತಿ ನಿರ್ದೇಶನದ ಈ ವೆಬ್ ಸರಣಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಗ್ರಾಮೀಣ ಭಾಗಗಳ ಹಿನ್ನೆಲೆಯಲ್ಲಿ ಒಟ್ಟು ಆರು ಕಂತುಗಳಲ್ಲಿ ವೆಬ್ ಸರಣಿಯನ್ನು ನಿರ್ಮಿಸಲಾಗಿದೆ. ಪುಷ್ಪಾ ಎಂಬ ವೇಶ್ಯೆಯ ಪಾತ್ರದಲ್ಲಿ ಅಂಜಲಿ ನಟಿಸಿದ್ದಾರೆ. ಈ ಪಾತ್ರದಲ್ಲಿ ಅವರ ಅಭಿನಯ ಪ್ರೇಕ್ಷಕರ ಪ್ರಶಂಸೆಗೆ ಕಾರಣವಾಗಿದೆ.
ಕಾರ್ಯಕ್ರಮವೊಂದರಲ್ಲಿ ಸಿನಿಮಾ ಕುರಿತು ಮಾತನಾಡಿದ ಅಂಜಲಿ, ಬಹಿಷ್ಕರಣ ವೆಬ್ ಸರಣಿಯಲ್ಲಿ ಪುಷ್ಪಾ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.. ಹಳ್ಳಿಗಾಡಿನ ಯುವತಿಯ ಪಾತ್ರದಲ್ಲಿ ನಟಿಸುವುದು ನನಗೆ ಖುಷಿ ತಂದಿದೆ. ಪುಷ್ಪಾ ಸಾಕಷ್ಟು ಡೆಪ್ತ್ ಇರುವ ಪಾತ್ರ. ಈ ಪಾತ್ರದಲ್ಲಿ ಭಾವುಕತೆಗಳನ್ನು ತುಂಬಾ ಶಕ್ತಿಯುತವಾಗಿ ತೋರಿಸಲಾಗಿದೆ ಎಂದರು.
ಅಲ್ಲದೆ, ಮೊದಮೊದಲು ಬೋಲ್ಡ್ ಸೀನ್ ಗಳಲ್ಲಿ ನಟಿಸಲು ಸ್ವಲ್ಪ ಕಷ್ಟ ಅನ್ನಿಸುತ್ತಿತ್ತು. ಇಂತಹ ಪಾತ್ರ ಮಾಡುವುದು ಚಾಲೆಂಜಿಂಗ್ ಅನಿಸಿತು. ಮೊದಲ ಬಾರಿಗೆ ಇಂತಹ ದೃಶ್ಯದಲ್ಲಿ ನಟಿಸಿದ್ದರಿಂದ ತುಂಬಾ ಭಾವುಕಳಾದೆ.. ಬೋಲ್ಡ್ ದೃಶ್ಯಗಳಲ್ಲಿ ನಟಿಸುವ ಮುನ್ನ ತಯಾರಿ ಮಾಡಿಕೊಂಡಿರಲಿಲ್ಲ, ಆದರೆ ಸವಾಲಾಗಿ ಈ ಪಾತ್ರದಲ್ಲಿ ನಟಿಸಿದ್ದೇನೆ ಎಂದು ನಟಿ ಅಂಜಲಿ ಹೇಳಿಕೊಂಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.