ಹೋರಾಟ ಆವೇಶ ಬಿಟ್ಟು ಮನೆಯ ಪಾತ್ರೆ ತೊಳೆಯುತ್ತಿರುವ ಜಗದೀಶ್, ಇದು ಬಿಗ್ಬಾಸ್ ಕಲಿಸಿದ ಪಾಠ ಎಂದ ಜನ
Oct 23, 2024, 08:50 IST
|

ಈ ಸಾರಿ ಬಿಗ್ ಬಾಸ್ನಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದ್ದು ಲಾಯರ್ ಜಗದೀಶ್. ಬಿಗ್ಬಾಸ್ಗೆ ಹೇಳಿ ಮಾಡಿಸಿದಂಥ ಕಿರುಚಾಟ, ಗಲಾಟೆ ಜೊತೆಗೆ ತಮಾಷೆ ಮಾಡುತ್ತ ಹಲವು ವೀಕ್ಷಕರಿಗೆ ಬೇಕಾಗಿದ್ದವರು ಜಗದೀಶ್. ಈ ಸೀಸನ್ನಲ್ಲಿ ಹೈಲೈಟ್ ಅಂತ ಇದ್ದಿದ್ದೇ ಜಗದೀಶ್.
ಕಂಡಕಂಡವರ ಜೊತೆಗೆ ಕಾಲು ಕೆರೆದುಕೊಡು ಜಗಳ ಆಡ್ತಾ, ಲಾಯರ್ ಪಾಯಿಂಟ್ಗಳನ್ನ ಹಾಕ್ತಾ ಇದ್ದ ಜಗ್ಗಿ ಜನರಿಗೆ ಹೇರಳ ಮನರಂಜನೆ ಕೊಟ್ಟಿದ್ರು. ಬರೀ ಮನೆಮಂದಿಗೆ ಮಾತ್ರ ಅಲ್ಲ , ಸಾಕ್ಷಾತ್ ಬಿಗ್ ಬಾಸ್ಗೇನೇ ಚಾಲೆಂಜ್ ಹಾಕಿದ್ರು ಜಗದೀಶ್. ಬೇರೆ ಸ್ಪರ್ಧಿಗಳಿಗೆ ಮಾತ್ರ ಅಲ್ಲ ಖುದ್ದು ಬಿಗ್ ಬಾಸ್ಗೇನೇ ತಿರುಗೇಟು ಕೊಟ್ಟವರು. ಆದ್ರೆ ಈಗ ದೊಡ್ಮನೆಯಿಂದ ಜಗದೀಶ್ರನ್ನೇ ಹೊರಹಾಕಲಾಗಿದೆ.
ಲಾಯರ್ ಜಗದೀಶ್ಗೆ ಗೇಟ್ ಪಾಸ್ ಕೊಟ್ಟಿದ್ದನ್ನ ನೋಡಿ ಈ ಸಾರಿಯ ಬಿಗ್ ಬಾಸ್ ಫಿನಿಶ್ ಅಂತಿದ್ದಾರೆ ಜನ. ಬಿಗ್ ಬಾಸ್ ಮನೆಯಿಂದ ಲಾಯರ್ ಜಗದೀಶ್ನ ಆಚೆ ಹಾಕಲಾಗಿದೆ. ಮನೆಯ ಮೂಲಭೂತ ನಿಯಮ ಉಲ್ಲಂಘಿಸಿರೋದು, ಮತ್ತೊಂದು ಹೆಣ್ಣುಮಕ್ಕಳ ಬಗ್ಗೆ ಅವಾಚ್ಯ ಶಬ್ದ ಬಳಸಿದ್ದಕ್ಕೆ ಲಾಯರ್ ಜಗದೀಶ್ನ ಮನೆಯಿಂದ ಹೊರಹೋಗುವಂತೆ ಬಿಗ್ ಬಾಸ್ ಆದೇಶ ಬಂತು. ಆ ಆದೇಶಕ್ಕೆ ತಲೆಬಾಗಿದ ಜಗದೀಶ್ ದೊಡ್ಮನೆಯ ಮುಖ್ಯಬಾಗಿಲಿನಿಂದ ಹೊರಬಂದಿದ್ದಾರೆ.
https://www.instagram.com/reel/DBYhyeGvstK/?igsh=MWxwdXE2YThqaDl6eA==
ಇದೀಗ ಲಾಯರ್ ಜಗದೀಶ್ ಅವರಿಗೆ ಮನೆಯಲ್ಲಿ ಸ್ಥಿತಿ ಹೇಗಿದೆ ಎಂಬುದನ್ನು ನೋಡಿ ಅಸಂಖ್ಯ ಅಭಿಮಾನಿಗಳು ಮರುಕ ಪಟ್ಟುಕೊಳ್ಳುತ್ತಿದ್ದಾರೆ. ಇವರ ಸ್ಥಿತಿಯನ್ನು ಕಿರಿಕ್ ಕೀರ್ತಿಯವರು ತೋರಿಸಿಕೊಟ್ಟಿದ್ದಾರೆ. ಕೀರ್ತಿಯವರು ಜಗದೀಶ್ ಮನೆಗೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ಜಗದೀಶ್ ಅವರು ಪಾತ್ರೆ ತೊಳೆಯುತ್ತಿದ್ದರು. ಬಿಗ್ಬಾಸ್ನಿಂದ ಬಂದ ಮೇಲೆ ಈ ಸ್ಥಿತಿ ಆಯ್ತಾ ಎಂದು ಕೇಳಿದಾಗ, ಜಗದೀಶ್ ಪತ್ನಿ, ಹೌದು.
ಬಿಗ್ಬಾಸ್ನಲ್ಲಿ ಪಾತ್ರೆ ತೊಳೆಯುತ್ತಿದ್ದರಲ್ಲ, ಇನ್ನು ಇಲ್ಯಾಕೆ ತೊಳೆಯಬಾರದು ಅದಕ್ಕಾಗಿ ಪಾತ್ರ ತೊಳೆಸುತ್ತಿದ್ದೇನೆ ಎಂದರು. ಆಗ ಜಗದೀಶ್ ಅವರು, ಮೊದ್ಲು ಕೂಡ ಪಾತ್ರೆ ತೊಳೀತಿದ್ದೆ. ಅಲ್ಲಿ ಬಿಗ್ಬಾಸ್ ಆರ್ಡರ್ ಮಾಡ್ತಿದ್ರು, ಈಗ ಇಲ್ಲಿ ಈ ಬಾಸ್ ಆರ್ಡರ್ ಮಾಡೋಕೆ ಶುರು ಮಾಡಿದ್ದಾರೆ ಎಂದರು. ಇದರ ಪ್ರೊಮೋ ರಿಲೀಸ್ ಆಗುತ್ತಿದ್ದಂತೆಯೇ ಜಗದೀಶ್ ಅವರನ್ನು ಮನೆಗೆ ವಾಪಸ್ ಕರೆಸಿಕೊಳ್ಳಿ ಎಂದು ಜನರು ದುಂಬಾಲು ಬಿದ್ದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.