ಸಂಸ್ಕಾರ ಬಿ ಟ್ಟವಳು 'ಜಗ್ಗಪ್ಪ ಪತ್ನಿ ಸುಶ್ಮಿತಾ ಮೇಲೆ ನೆಟ್ಟಿಗರು ಗರಂ'
Aug 15, 2024, 11:51 IST
|
ಕಿರುತೆರೆಯ ಜೋಡಿ ಸುಶ್ಮಿತಾ ಹಾಗೂ ಜಗ್ಗಪ್ಪ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪಂಚ್ ಡೈಲಾಗ್, ಪಟ ಪಟ ಮಾತಿನ ಮೂಲಕ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ಈ ಜೋಡಿ ಮಜಾ ಭಾರತ, ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಮೂಲಕ ಕನ್ನಡಿಗರ ಮನ ಗೆದ್ದವರು. ತಮ್ಮ ಕಾಮಿಡಿ ಮೂಲಕ ಕಿರುತೆರೆಯಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಸುಶ್ಮಿತಾ ಹಾಗೂ ಜಗ್ಗಪ್ಪ ಕಳೆದ ವರ್ಷ 2023 ನವೆಂಬರ್ 19ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಸದ್ಯ ವೀಕೆಂಡ್‌ನ ಕಾಮಿಡಿ ಶೋಗಳಲ್ಲಿ ಬರುವ ಸುಶ್ಮಿತಾ ಹಾಗೂ ಜಗ್ಗಪ್ಪ ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಕ್ಟೀವ್. ಅದರಲ್ಲೂ ಸುಶ್ಮಿತಾ ಆಗಾಗ ತಮ್ಮ ವಿಡಿಯೋ ಹಾಗೂ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಫೋಸ್ಟ್ ಮಾಡುತ್ತಲೇ ಇರುತ್ತಾರೆ. ಇದೀಗ ಸುಶ್ಮಿತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದ್ದು, ಈ ವಿಡಿಯೋಗೆ ನೆಟ್ಟಿಗರು ಕಮೆಂಟ್ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಜಾ ಭಾರತದ ಸುಶ್ಮಿತಾ ಜಗ್ಗಪ್ಪ ಗಾಂಧಿ ಬಜಾರ್‌ನಲ್ಲಿ ಎನ್ನುವ ವಿಡಿಯೋ ವೈರಲ್ ಆಗಿದ್ದು, ಮದುವೆಯಾಗಿದ್ದರೂ ನಟಿ ಸುಶ್ಮಿತಾ ಮಾಂಗಲ್ಯ ಸರ ಅಥವಾ ತಾಳಿ ಹಾಕಿಲ್ಲ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಸುಶ್ಮಿತಾ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ತಮ್ಮ ಮನಬಂದಂತೆ ಕಮೆಂಟ್ ಹಾಕಿದ್ದಾರೆ.
ಇವರಿಗೆಲ್ಲ ಸ್ವಲ್ಪ ಬೆಳೆದರೆ ಸಾಕು ತಾಳಿ ಏನು ಬೇಕಿಲ್ಲ ಬರೀ ಶೋಕಿ ಅಷ್ಟೇ. ಮದುವೆ ಅಂದ್ರೆ ಇವರಿಗೆಲ್ಲಾ ಕಟಾಚಾರ. ಕರಿಮಣಿ ಮಾಲೀಕ ಜಗ್ಗಪ್ಪ ಕಟ್ಟಿದ ಕರಿಮಣಿ ತಾಳಿನೇ ಇಲ್ಲ ತಾಯಿ, ಪ್ರೀತಿಗೆ ಬೆಲೆ ಇದೆ ಅಂತಾ ಹೇಳಿ ತಾಳಿ ಇಲ್ಲದೇ ರೋಡಿಗೆ, ತಾಳಿ ಕಾಲುಂಗರ ಮನೆಯಲ್ಲಿ ಗಂಡನ ಕಾಳಜಿ ಹಾಗೂ ಮಕ್ಕಳ ನೆಮ್ಮದಿ ನೋಡಿಕೊಳ್ಳುವ ತಾಯಂದಿರ ಸ್ವತ್ತು. ಟಿಆರ್‌ಪಿ ಹಿಂದೆ ಓಡುವವರಿಗಲ್ಲ. ಇವಳು ಈ ರೀತಿ ಆಡಿದರೆ ಜಗ್ಗಪ್ಪನ ಕಥೆ ಮುಗಿತು ಪಾಪ.
ಇಂತವರಿಂದಾನೇ ನಮ್ಮ ಸಂಸ್ಕೃತಿ ಹಾಳಾಗುತ್ತಿರುವುದು. ತಾಳಿ ಮಹತ್ವ ಗೊತ್ತಿಲ್ಲದೇ ಇರುವ ನಿನಗೆ ಮದುವೆ ಯಾಕೆ ಬೇಕಿತ್ತು. ಸಂಸ್ಕಾರ ಬಿಟ್ಟವಳು ಎಂದೆಲ್ಲಾ ಕಮೆಂಟ್ ಮಾಡಿರುವ ನೆಟ್ಟಿಗರು, ಅಂತಹ ಅಂಬಾನಿ ಸೊಸೆ ಪ್ಯಾರೀಸ್‌ಗೆ ಹೋದಾಗಲೇ ತಾಳಿ ತೆಗೆದಿರಲಿಲ್ಲ. ಇನ್ನು ಇವಳು ಐಶ್ವರ್ಯ ಬಂದರೆ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿಯೋರು. ಕೆಲವೊಂದನ್ನು ನೋಡಿಯಾದರೂ ಕಲಿಯಬೇಕು ಎಂದು ಕಮೆಂಟ್‌ನಲ್ಲಿ ಉಪದೇಶ ನೀಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.