ವೇದಿಕೆ ಮೇಲೆ ಎದ್ದು ಬಿದ್ದು ಕಣ್ನೀ ರು ಹಾಕಿದ ಜಗ್ಗೇಶ್; ಇವತ್ತಿನ ಪರಿಸ್ಥಿತಿಗೆ ಕಾರಣ ನಾ ವೇ
Aug 3, 2024, 13:05 IST
|
ಕನ್ನಡದ ಹಿರಿಯ ನಟ, ಹಾಸ್ಯ ನಟ, ರಾಜಕಾರಣಿ ಜಗ್ಗೇಶ್ ಅವರು ಕನ್ನಡ ಚಿತ್ರರಂಗದ ಈಗಿನ ಪರಿಸ್ಥಿತಿ ನೆನೆದು ಕಣ್ಣೀರಿಟ್ಟಿದ್ದಾರೆ. ಝೀ ಕನ್ನಡ ರಿಯಾಲಿಟಿ ಶೋ ವೇದಿಕೆಯಲ್ಲಿ ಕನ್ನಡ ಚಿತ್ರರಂಗದ ಈಗಿನ ದುಸ್ಥಿತಿ ನೆನೆದು ದುಃಖಿಸಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡ ಚಿತ್ರರಂಗ ಈಗ ಹೇಗಿದೆ ಎಂದು ಹೇಳಿದ್ದಾರೆ. ಇವರ ಭಾವುಕ ಮಾತುಗಳಿಗೆ ಕೇಳುಗರ ಕಣ್ಣಲ್ಲೂ ಹನಿ ಜಿನುಗಿದೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಡಿಸಾಸ್ಟರ್ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ಕಳೆದ 3-4 ವರ್ಷಗಳಿಂದ ಚಿತ್ರರಂಗದಲ್ಲಿ ಅನಾಹುತ ಸಂಭವಿಸಿದೆ. ಎಲ್ಲರೂ ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಯಾರೂ ಕೆಟ್ಟ ಚಿತ್ರಗಳನ್ನು ಮಾಡುತ್ತಿಲ್ಲ. ಪೇಪರ್‌ನಲ್ಲಿ ಜಾಹೀರಾತು ನೀಡುತ್ತಾರೆ. ಟೀವಿಯಲ್ಲಿ ಜಾಹೀರಾತು ನೀಡುತ್ತಾರೆ. ಎಲ್ಲವನ್ನೂ ಮಾಡುತ್ತಾರೆ. ಆದರೆ, ಥಿಯೇಟರ್‌ಗೆ ಬಂದಾಗ ಜನವೇ ಇಲ್ಲಾ ಎಂದಾಗ ಆಶ್ಚರ್ಯವಾಗುತ್ತದೆ. ಯಾಕೆ ಹೀಗಾಯ್ತು ಎಂದು ಬೇಸರವಾಗುತ್ತದೆ ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ಯಾಕೆ ಹೀಗಾಯ್ತು ಎಂದು ಯೋಚಿಸಿದಾಗ ಕನ್ನಡವೇ ಹಿಂಗೆ ಎಂದು ಯೋಚಿಸುತ್ತೇವೆ. ಹಾಗಲ್ಲ ವಿಷಯ. ಯಾಕೆ ಇಂಡಸ್ಟ್ರಿಗೆ ಹೀಗೆ ಆಗ್ತಾ ಇದೆ. ಏನಾಗುತ್ತಿದೆ. ಜನರು ಯಾಕೆ ಬರುತ್ತಿಲ್ಲ ಎಂದು ಯೋಚಿಸಿದಾಗ ಬೇಸರವಾಗುತ್ತದೆ. ಕನ್ನಡದ ಪರಿಸ್ಥಿತಿ ಮಾತ್ರವಲ್ಲ. ಅಕ್ಷಯ್ ಕುಮಾರ್ ಕೋಟ್ಯಂತರ ರೂಪಾಯಿ ಹಾಕಿ ಫಿಕ್ಚರ್ ಮಾಡಿದ್ದಾರೆ. ಅವರಿಗೂ ಡಿಸಾಸ್ಟರ್ ಆಯಿತು.
ಇಡೀ ಭಾರತದ ಚಿತ್ರರಂಗ ಕೊಚ್ಚಿ ಹೋಗಿದೆ. ಈಗ ಪರಿಸ್ಥಿತಿ ಏನಾಗಿದೆ ಅಂದ್ರೆ, ಯಾರು 200 ಕೋಟಿ ರೂಪಾಯಿ ಹಾಕಿ ಸಿನಿಮಾ ಮಾಡ್ತಾರೋ ಅದು ಸಿನಿಮಾ ಆಗಿದೆ. ಉಳಿದವು ಸಿನಿಮಾ ಅಲ್ಲ ಅನ್ನೋ ಪರಿಸ್ಥಿತಿ ಉಂಟಾಗಿದೆ ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ಯಾರು 200 ಕೋಟಿ ಹಾಕಿ ಸಿನಿಮಾ ಮಾಡ್ತಾರೆ ಅದು ಸಿನಿಮಾ ಅಂತಾಗಿದೆ. ಯಾರು ಒಳ್ಳೆ ಕಥೆ ಹಾಕಿ ಸಣ್ಣ ಸಿನಿಮಾ ಮಾಡ್ತಾರೆ ಅದು ಸಿನಿಮಾ ಅಲ್ಲ ಅನ್ನೋ ಪರಿಸ್ಥಿತಿ ಇದೆ.
ನನ್ನ ಬಾಂಧವರು, ಒಡಹುಟ್ಟಿದವರು, ನನ್ನವರು ನನ್ನ ಪಿಕ್ಚರ್ ರಿಲೀಸ್ ಆದಾಗ ಇದು ದರಿದ್ರ ಪಿಚ್ಚರು, ಇದು ಕೆಟ್ಟ ಸಿನಿಮಾ ಎಂದು ತಮ್ಮ ಶ್ರಮ ಹಾಕಿ ಇನ್ನೊಬ್ಬರ ಲೈಫ್ ಹಾಳು ಮಾಡುತ್ತಾರೆ. ಎಲ್ಲರೂ ಚೆನ್ನಾಗಿರಲಿ, ನಾವು ಯಾರಿಗೂ ಕೆಟ್ಟದ್ದು ಬಯಸೋದು ಬೇಡ ಎಂದು ಸಿನಿಮಾ ಟ್ರೋಲ್ ಮಾಡುವವರ ವಿರುದ್ಧವೂ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.