ಸಾ ಯಲು ನಿರ್ಧಾರ ಮಾಡಿದ್ದ ಜಗ್ಗೇಶ್; ಅಣ್ಣವ್ರ ಅ ಒಂದು ಮಾತಿನಿಂದ ಕೋಟಿಯ ಒಡೆಯನಾದ ಜಗ್ಗಣ್ಣ

 | 
Gh

ಇಂದು ಸಿನಿಮಾಗಳಲ್ಲಿ ಹಿರೋ ಆಗಿ ಕಾಣಿಸಿಕೊಳ್ಳುವ ನಟ ಜಗ್ಗೇಶ್​  ಈ ಮೊದಲು ಕನ್ನಡ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ ನಾಯಕನಾಗಿ ಬೆಳೆದ್ರು.  1992ರಲ್ಲಿ ತರ್ಲೆ ನನ್ಮಗ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾದ್ರು. ಜಗ್ಗೇಶ್ ಅಭಿನಯವನ್ನು ಅಣ್ಣಾವ್ರು ಕೂಡ ಮೆಚ್ಚಿಕೊಂಡಿದ್ರು. ರಾಜ್ ಪುತ್ರ ಪುನೀತ್ ರಾಜ್​ಕುಮಾರ್ ಸಹ ಜಗ್ಗೇಶ್​ ಕಾಮಿಡಿ ನನಗೆ ತುಂಬಾ ಇಷ್ಟ ಎಂದು ಅನೇಕ ಬಾರಿ ಹೇಳಿದ್ರು.

ನಾಯಕನಾಗಿ ಸಿನಿ ಜರ್ನಿ ಆರಂಭಿಸಿದ ಕೆಲವೇ ವರ್ಷಗಳ ಬಳಿಕ ಜಗ್ಗೇಶ್ ಅಭಿನಯದ ಸಾಲು ಸಾಲು ಸಿನಿಮಾಗಳು ಫ್ಲಾಪ್​ ಆಗಿತ್ತು. ಸಿನಿಮಾಗಳ ಸೋಲಿನಿಂದ ಬೇಸತ್ತಿದ್ದ ನಟ ಜಗ್ಗೇಶ್​ ಆತ್ಮಹತ್ಯೆಗೂ ಯತ್ನಿಸಿದ್ದರಂತೆ. ಈ ಬಗ್ಗೆ ಅವರೇ ಸ್ವತಃ ಹೇಳಿಕೊಂಡಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಮಾಧ್ಯಮಗಳ ಜೊತೆ ಮಾತಾಡಿದ ಜಗ್ಗೇಶ್​, ನನಗೆ ಆತ್ಮಸ್ಥೈರ್ಯ ತುಂಬಿದ್ದು ಅಣ್ಣಾವ್ರು ಎಂದು ಹೇಳಿದ್ದಾರೆ.

ಈ ಹಿಂದೆ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಪಟ್ಟಿದ್ದೆ. ಆಗ ಮಣಿಪಾಲ್ ಆಸ್ಪತ್ರೆ ಸೇರಿದ್ದ ನನ್ನನ್ನು ನೋಡಲು ಡಾ.ರಾಜ್​ ಕುಮಾರ್ ಬಂದಿದ್ರು. ಅತಿಯಾದ ಆಸೆ ಒಳ್ಳೆಯದಲ್ಲ, ಜಗತ್ತನ್ನು ಮೆಚ್ಚಿಸಿ ಬದುಕಲು ಹೋಗಬಾರದು ಎಂದು ಹೇಳಿದ್ರು. ಬಳಿಕ ಆಸ್ಪತ್ರೆಯಲ್ಲಿದ್ದ ನನ್ನ ತಲೆ ಮೇಲೆ ಕೈ ಇಟ್ಟು ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದ್ದರು. ಅಣ್ಣಾವ್ರ ಆಶೀರ್ವಾದ ನಂತರ ನನ್ನ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಆದವು ಎಂದು ನಟ ಜಗ್ಗೇಶ್​ ಹೇಳಿದ್ರು.

ನಮ್ಮ ತಂದೆ ಹಾಗೂ ರಾಜ್​ಕುಮಾರ್ ಅವರ ಮೂಗು ಒಂದೇ ರೀತಿ ಇದೆ. ನನಗೆ ರಾಜಣ್ಣ ಅಂದ್ರೆ ಪಂಚಪ್ರಾಣ. ಅಣ್ಣಾವ್ರಲ್ಲಿ ನಾನು ತಂದೆ ಪ್ರೀತಿ-ವಾತ್ಸಲ್ಯ ಕಂಡೆ.  ನಾನು ಹೊಸ ಮನೆ ಕಟ್ಟಿದೀನಿ ಬರಬೇಕು ಎಂದು ಆಹ್ವಾನ ನೀಡಿದ್ದೆ. ನಮ್ಮ ಮನೆಗೆ ಬೆಳಿಗ್ಗೆ 11 ಗಂಟೆಗೆ ಬಂದರು. ಮಧ್ಯಾಹ್ನ 3 ಗಂಟೆವರೆಗೂ ಕೂತು ಮಾತನಾಡಿದ್ದರು. ರಾಜ್​ ಕುಮಾರ್ ಅವರ ಜೊತೆ ಕಳೆದ ದಿನಗಳನ್ನು ಮರೆಯಲು ಆಗಲ್ಲ. 

ರಾಜ್​ಕುಮಾರ್ ಕೊನೆಯ ಜರ್ನಿಯಲ್ಲಿ ನಾನಿದ್ದೆ. ಅಣ್ಣಾವ್ರ ಮೃತದೇಹದ ಜೊತೆಗೆ ನಾನು ಇಡೀ ದಿನ ಇದ್ದೆ ಎಂದು ಜಗ್ಗೇಶ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.