ವರ್ತೂರುಗೆ ಕಿತ್ತೋದವನು ಎಂದ ಜಗ್ಗೇಶ್, ಮೀಡಿಯಾ ಮುಂದೆ ಚಳಿಬಿಡಿಸಿದ ಸಂತು ತಾಯಿ

 | 
Vh

ನವರಸ ನಾಯಕ ಜಗ್ಗೇಶ್ ಅವರು ಈಚೆಗೆ ರಂಗನಾಯಕ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಯಾವನೋ ಕಿತ್ತೋದ್ ನನ್ ಮಗ, ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡು, ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ.. ಎಂದು ಹೇಳಿಕೆ ನೀಡಿದ್ದರು. ಆದರೆ ಆ ರೀತಿ ಟಿವಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನಂತರ ಅರಣ್ಯಾಧಿಕಾರಿಗಳಿಂದ ಬಂಧನಕ್ಕೆ ಒಳಪಟ್ಟಿದ್ದು ಯಾರೆಂದು ಎಲ್ಲರಿಗೂ ಗೊತ್ತು. ಹೌದು, ಕಲರ್ಸ್ ಕನ್ನಡ ವಾಹಿನಿಯ 'ಬಿಗ್ ಬಾಸ್‌' ಶೋನಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಕ್ಕಾಗಿ ವರ್ತೂರು ಸಂತೋಷ್ ಅವರನ್ನು ಬಂಧಿಸಲಾಗಿತ್ತು.

ಇದೀಗ ನಟ ಜಗ್ಗೇಶ್ ಅವರು ಬಹಿರಂಗ ವೇದಿಕೆಯಲ್ಲಿ ಯಾವನೋ ಕಿತ್ತೋದ್ ನನ್ ಮಗ.. ಎಂದು ಹೇಳಿಕೆ ನೀಡಿದ ಬಗ್ಗೆ ವರ್ತೂರು ಸಂತೋಷ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬಿಡಣ್ಣ, ಅವರು ದೊಡ್ಡವರು. ನಾನು ಏನು ಹೇಳುತ್ತೇನೆ ಅಂದ್ರೆ, ಕಾಲಾಯ ತಸ್ಮೈ ನಮಃ ಅಷ್ಟೇ. ಕೆಲವೊಂದಕ್ಕೆ ಉತ್ತರ ಕೊಡಬೇಕು, ಇನ್ನೂ ಕೆಲವು ಮಾತುಗಳಿಗೆ ಸೈಲೆಂಟ್ ಆಗಿದ್ದರೆ ಸಾಕು. ಉತ್ತರ ಸಿಕ್ಕಿಬಿಡುತ್ತದೆ ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.

ಸುದೀಪಣ್ಣನ ಹತ್ರ ಕೆಲವೊಂದನ್ನು ನಾನು ಕಲಿತಿದ್ದೇನೆ. ಸುದೀಪಣ್ಣ ಒಂದು ಮಾತು ಹೇಳ್ತಾರೆ, ವರ್ತೂರು ಅವ್ರೇ ಎಲ್ಲಾ ಟೈಮ್‌ನಲ್ಲೂ ಮಾತನಾಡಬೇಕು ಅಂತೇನಿಲ್ಲ. ಕೆಲವು ಸಲ ಮಾತನಾಡದೇ ಸುಮ್ಮನಿದ್ರೆ ಸಾಕು, ಆ ಮೌನವೇ ಉತ್ತರ ನೀಡುತ್ತದೆ' ಅಂತ. ಅಷ್ಟೇ ಸಾಕು ನನಗೆ. ಕೆಲವು ಸಂದರ್ಭ, ಜಾಗಗಳಲ್ಲಿ ಮಾತನಾಡಲೇಬೇಕು. ತೂಕದ ಜೊತೆ ತೂಕವನ್ನು ಅಳೆಯಬೇಕಾದರೆ ತೂಕಕ್ಕೆ ತೂಕ ಸರಿ ಇರಬೇಕು ಎಂದು ವರ್ತೂರು ಸಂತೋಷ್ ತಿಳಿಸಿದ್ದಾರೆ.

ಇನ್ನು ವರ್ತೂರ್ ಸಂತೋಷ್ ತಾಯಿ ನಾಲಿಗೆ ಸಂಸ್ಕಾರ ಹೇಳತ್ತೆ ಅವರು ಎಂಥವರು ಎಂದು ಇದರಲ್ಲೇ ಗೊತ್ತಾಗತ್ತೆ ಬಿಡಿ ಅಂದಿದ್ದಾರೆ.ಆದರೆ, ಇದನ್ನೀಗ ಕೆಟ್ಟ ಪ್ರಚಾರದ ಉದ್ದೇಶದಿಂದ ನನ್ನ ಸಂಪೂರ್ಣ ವಿಚಾರ ತಿರುಚಿ ಜಾತಿ ನಿಂದನೆ, ವ್ಯಕ್ತಿ ನಿಂದನೆ ಎಂದು ಪ್ರಚಾರ ಪಡೆದು ನನ್ನ ತೇಜೋವಧಗೆ ಕೆಲ ಕಿಡಿಗೇಡಿಗಳು ಯತ್ನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಕೆಲವು ಪ್ರಚಾರ ಪ್ರಿಯರು ಇಂಥ ವಿಷಯ ಕಾಯುತ್ತಿರುತ್ತಾರೆ. 

ಇಂಥವರು ನನ್ನ ಸಿಕ್ಕಿಸಿ, ಜಾತಿ ನಿಂದನೆ ಎಂದಿದ್ದಲ್ಲದೆ, ಮನುಷ್ಯತ್ವದಲ್ಲೇ ಬಳಸದ ಕೆಟ್ಟ ಶಬ್ದ ಬಳಕೆ ಹಾಗೂ ವೈಕ್ತಿಕವಾಗಿ ಹಲ್ಲೆ, ಮನೆ ಮುತ್ತಿಗೆ, ಅವಾಚ್ಯ ಶಬ್ದ ಪ್ರಯೋಗ, ಮುಖಕ್ಕೆ ಮಸಿ ಬಳಿಯುವ ಬೆದರಿಕೆ ಒಡ್ಡಿದ್ದಾರೆ ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.