ವತೂ೯ರ್ ಕಿತ್ತೋದ್ ನನ್ ಮಗ ಎಂದ ಜಗ್ಗೇಶ್, ಹಳ್ಳಿಕಾರ್ ಒಡೆಯನ ಅಭಿಮಾನಿಗಳು ಕೆಂ,ಡಾಮಂಡಲ

 | 
Hs

ನಟ ಜಗ್ಗೇಶ್ ಅವರು ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದರು, ಅದು ವನ್ಯಜೀವಿ ಕಾಯ್ದೆಯ ವಿರೋಧವಾಗಿತ್ತು. ಹಾಗಾಗಿ ಅರಣ್ಯಾಧಿಕಾರಿಗಳು ಜಗ್ಗೇಶ್ ಧರಿಸಿದ್ದ ಪೆಂಡೆಂಟ್‌ನ್ನು ವಶ ಪಡೆದಿದ್ದರು. ರಂಗನಾಯಕ ಸಿನಿಮಾದ ಸುದ್ದಿಗೋಷ್ಠಿಯೊಂದರಲ್ಲಿ ನಟ ಜಗ್ಗೇಶ್ ಅವರು ಈ ಬಗ್ಗೆ ಮಾತನಾಡಿದ್ದಾರೆ.

ನಾನು ಹುಲಿ ತರ ಬದುಕಬೇಕು ಅಂತ ನನ್ನ ತಾಯಿ ಹುಲಿ ಉಗುರನ್ನು ಕೊಟ್ಟಳು. ಆದರೆ ಯಾವನೋ ಕಿತ್ತೋದ್‌ವನು ರಿಯಲ್ ಆಗಿ ಹುಲಿ ಉಗುರು ಹಾಕ್ಕೊಂಡು, ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ. ನನ್ನ ತಾಯಿ ಆ ಪೆಂಡೆಂಟ್ ಕೊಟ್ಟು 40 ವರ್ಷ ಆಗಿದೆ, ನಾನು ನನ್ನ ತಾಯಿ ಕೊಟ್ಟ ಹುಲಿ ಉಗುರಿನ ಬಗ್ಗೆ 3 ವರ್ಷದ ಹಿಂದಿನ ಸಂದರ್ಶನದಲ್ಲಿ ಹೇಳಿದ್ದೆ. ಅಲ್ಲಿಗೆ ಹುಲಿ ಉಗುರು ಕೊಟ್ಟು 43 ವರ್ಷ ಆಯ್ತು. 

ಆ ಥರದ ವಸ್ತುಗಳನ್ನು ಇಟ್ಟುಕೊಳ್ಳಬಾರದು ಅಂತ ಕಾನೂನಿದೆ, ಅದರ ಬಗ್ಗೆ ನಮಗೆ ಅರಿವಿಲ್ಲ ಎಂದು ನಟ ಜಗ್ಗೇಶ್ ಅವರು ಹೇಳಿದ್ದಾರೆ.ನಾನು ಯಾರಿಗೆ ಸಂದರ್ಶನ ಕೊಟ್ಟಿದ್ನೋ ಅವರೇ ನಾನು ಹುಲಿ ಉಗುರಿನ ಬಗ್ಗೆ ಮಾತಾಡಿದ್ದ ವಿಡಿಯೋವನ್ನು ವೈರಲ್ ಮಾಡಿದರು. ನಮ್ಮ ಬಗ್ಗೆ ಮಾತನಾಡಿದ ವಿಡಿಯೋಕ್ಕೆ ಮಿಲಿಯನ್‌ಗಟ್ಟಲೇ ವೀಕ್ಷಣೆ ಬರುತ್ತದೆ. ಈ ಥರ ಆದರೆ ನಾವು ಹೇಗೆ ಬದುಕೋದು? ಎಂದು ಜಗ್ಗೇಶ್ ಪ್ರಶ್ನೆ ಮಾಡಿದ್ದಾರೆ.

ಜಗ್ಗೇಶ್ ಅವರು ಆ ಟೈಮ್‌ನಲ್ಲಿ ಟ್ವೀಟ್ ಮಾಡಿ, ಕಾನೂನು ದೊಡ್ಡದು. ಅಧಿಕಾರಿಗಳು ಕೇಳಿದ ವಸ್ತುವನ್ನು ಕೊಡಲಾಗಿದೆ! ತಾಯಿ ನೀಡಿದ ಬಹಳ ಹಳೆಯ ಲಾಕೆಟ್ ಅದು. ದೋಚುವ ಮನುಷ್ಯರು, ಕೊಲೆ ಪಾತಕರು, ದೇಶ ದ್ರೋಹಿಗಳು, ಸಮಾಜ ಘಾತುಕರಿಗಿಂತ ನನ್ನ ತಾಯಿ ಕಾಣಿಕೆ ಬಗ್ಗೆ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದಗಳು. ನಾನು ತಲೆ ತಗ್ಗಿಸುವ ಕೆಲಸವನ್ನು ಮಾಡಿಲ್ಲ, ಮಾಡೋದಿಲ್ಲ ಎಂದು ಹೇಳಿದ್ದಾರೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.