ಕನ್ನಡದ‌ ಬಗ್ಗೆ ಮಾತನಾಡಿದವರಿಗೆ ಖಡಕ್ ಎ ಚ್ಚರಿಕೆ ಕೊಟ್ಟ ಜಗ್ಗೇಶ್, ಶಿವಣ್ಣ ಶಾ ಕ್

 | 
Bji
ಕಮಲ್ ಹಾಸನ್ ಅವರು ಕನ್ನಡ ಭಾಷೆಯ ಬಗ್ಗೆ ನೀಡಿದ ಹೇಳಿಕೆಯು ಕರ್ನಾಟಕದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ. ಅವರ ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂಬ ಹೇಳಿಕೆಗೆ ಕನ್ನಡಪರ ಸಂಘಟನೆಗಳು, ಕನ್ನಡ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಮತ್ತು ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸದ್ಯ ಈ ಬಗ್ಗೆ ನವರಸ ನಾಯಕ ಜಗ್ಗೇಶ್‌ ತಮ್ಮ ಎಕ್ಸ್‌ ಖಾತೆಯಲ್ಲಿ, ಕನ್ನಡ ಭಾಷೆಯ ಉಗಮ ವಿಕಾಸದ ವೃಕ್ಷಚಿತ್ರ ಹಂಚಿಕೊಂಡಿದ್ದಾರೆ. ಕನ್ನಡದ ಉಗಮದ ಬಗ್ಗೆ ಯಾರಾದರು ಪ್ರಶ್ನಿಸಿದಾಗ ಸಿರಿಗನ್ನಡ ಸ್ವತಂತ್ರ, ಶ್ರೇಷ್ಠವೆಂದು ಈ ವೃಕ್ಷ ಚಿತ್ರ ಹಂಚಿ ಹೇಳಿ ಎಂದು ಟ್ವೀಟ್‌ ಮಾಡಿದ್ದಾರೆ. ಇದು ವಿವಾದಕ್ಕೆ ಮತ್ತೊಂದು ತಿರುವು ಕೊಟ್ಟಂತಾಗಿದೆ.
ಅಡ್ವೊಕೇಟ್‌ ಎಂಬ ಎಕ್ಸ್‌ ಖಾತೆದಾರನೊಬ್ಬ ಕಾಮೆಂಟ್‌ ಮಾಡಿದ್ದು, ದ್ರಾವಿಡ ಅನ್ನೋ ಕಪೋಲಾಕಲ್ಪಿತ ಭ್ರಮೆ ನ ಬಿಟ್ಟು ಆಚೆ ಬನ್ನಿ ಎಂದಿದ್ದಾರೆ. ರೀ ಜಗ್ಗೇಶ್ ಕನ್ನಡದ ಮೂಲ ದ್ರಾವಿಡ ಭಾಷೆ ಅಂತೀರಲ್ಲ. ನಿಮಗೆ ಕುವೆಂಪು ಅವರ ಮೇಲೆ ನಂಬಿಕೆ ಇಲ್ವಾ? ಕುವೆಂಪು ಅವರೇ ಬಹಳಷ್ಟು ಬಾರಿ ಸಾರಿ ಸಾರಿ ಹೇಳಿದ್ದಾರೆ ಸಂಸ್ಕೃತ ಮಾತೃ ಭಾಷೆ ಅಂತ ನೀವು ನೋಡಿದ್ರೆ ಹೀಗೆ ಎಂದು ಟ್ವೀಟ್‌ ಮಾಡಿದ್ದಾರೆ.
ಕಲೆಗೆ ಜಾತಿ ಇಲ್ಲ. ಎಲ್ಲಾ ಭಾಷೆಯ ಕಲಾವಿದರು ಶಾರದಾಸುತರು ಒಪ್ಪುತ್ತೇವೆ. ಆ ನಿಟ್ಟಿನಲ್ಲಿ ಕಮಲ್ ಹಾಸನ್ ಅವರನ್ನು ಮೆಚ್ಚಿದ್ದೇವೆ. ಹಾಗಂತ ಕನ್ನಡ ತಮಿಳಿಂದ ಹುಟ್ಟಿದೆ ಎಂದ ಅವರ ಮಾತು ಒಪ್ಪಲ್ಲ. ಕನ್ನಡಕ್ಕೆ ಎರಡೂವರೆ ಸಾವಿರ ವರ್ಷದ ಇತಿಹಾಸವಿದೆ. ಅಷ್ಟೇಕೆ ಹನುಮದೇವರು ಕನ್ನಡ ಕಲಿಪುಂಗವ ಅವನ ಕಾಲ ರಾಮಾಯಣ ಇಷ್ಟು ಅರ್ಥವಾದರೆ ಸಾಕಲ್ಲವೆ ಸಾರ್ ಎಂದು ಜಗ್ಗೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.