'ವರ್ತೂರ್ ಬಗ್ಗೆ ನಾಲಗೆ ಹೊರಹಾಕಿದ ಜಗ್ಗೇಶ್' ಒಮ್ಮೆಲೇ ರೊ ಚ್ಚಿಗೆದ್ದ ರಂಗಣ್ಣ

 | 
Uu

ಕಳೆದ ವರ್ಷ ಹುಲಿ ಉಗುರು ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಸದ್ದು ಮಾಡಿದ ಸುದ್ದಿ. ಕಿರುತೆರೆಯ ಬಿಗ್‌ ಬಾಸ್‌ ಶೋನಲ್ಲಿ ವರ್ತೂರು ಸಂತೋಷ್‌ ಕೊರಳಲ್ಲಿ ಹುಲಿ ಉಗುರು ಕಾಣಿಸಿದ್ದೇ ತಡ, ಅರಣ್ಯ ಇಲಾಖೆ ಅಖಾಡಕ್ಕಿಳಿದು, ಹುಲಿ ಉಗುರು ಧರಿಸಿದ್ದ ವರ್ತೂರು ಅವರನ್ನು ನೇರವಾಗಿ ಬಿಗ್‌ಬಾಸ್‌ ಮನೆಯಿಂದಲೇ ಬಂಧಿಸಿ ಜೈಲಿಗಟ್ಟಿದ್ದರು. ಅದಾದ ಬಳಿಕ ಸೆಲೆಬ್ರಿಟಿ ವಲಯದಲ್ಲೂ ಈ ವಿಚಾರ ಮುನ್ನೆಲೆಗೆ ಬಂದಿತು.

ಚಂದನವನದ ಜಗ್ಗೇಶ್‌, ದರ್ಶನ್‌ ಸೇರಿ ಹಲವರ ಬಳಿಯಿದ್ದ ಹುಲಿ ಉಗುರನ್ನೂ ವಶಕ್ಕೆ ಪಡೆಯಲಾಗಿತ್ತು. ಇದೀಗ ಆ ಉಗುರಿನ ಬಗ್ಗೆ ಜಗ್ಗೇಶ್‌ ಮಾತಾಡಿದ್ದಾರೆ. ನಿರ್ದೇಶಕ ಗುರುಪ್ರಸಾದ್‌ ಅವರ ರಂಗನಾಯಕ ಸಿನಿಮಾದಲ್ಲಿ ಜಗ್ಗೇಶ್‌ ನಟಿಸಿದ್ದಾರೆ. ಈಗಾಗಲೇ ಒಂದಷ್ಟು ಕಾರಣಕ್ಕೆ ಈ ಸಿನಿಮಾ ಸದ್ದು ಮಾಡುತ್ತಿದೆ. ಹಾಡಿನ ಮೂಲಕ ವಿವಾದ ಕಿಡಿ ಹೊತ್ತಿಸಿತ್ತು. ಇದೀಗ ಮನದರಸಿ.. ಅನ್ನೋ ಎರಡನೇ ಹಾಡನ್ನು ಬಿಡುಗಡೆ ಮಾಡಿದೆ. ಇದೇ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಹುಲಿ ಉಗುರಿನ ಪ್ರಕರಣದ ಪ್ರಹಸನ ಹೇಗಿತ್ತು ಎಂಬುದನ್ನು ನೆನಪು ಮಾಡಿಕೊಂಡಿದ್ದಾರೆ. ತಮ್ಮದೇ ಧಾಟಿಯಲ್ಲಿಯೇ ಆ ಘಟನೆಯನ್ನು ವಿವರಿಸಿದ್ದಾರೆ.

ನನ್ನಮ್ಮ ನನಗೆ ಒಂದು ಹುಲಿ ಉಗುರು ಕೊಟ್ಟಿದ್ಲು. ನಾನೀನ ನನ್ನ 40ನೇ ವರ್ಷದ ಸಿನಿಮಾ ಜರ್ನಿಯಲ್ಲಿದ್ದೇನೆ. ಎಂಥ ಬ್ಯೂಟಿಫುಲ್‌ ಜರ್ನಿರೀ ಇದು. ನಾನು ಸತ್ತೋದ ಮೇಲೆ ಜಗ್ಗೇಶ್‌ ಎಂಥ ನಟ. ಏನೆಲ್ಲ ಮಾಡಿ ಸತ್ತೋಗ್ಬಿಟ್ಟ ಅಂತ ಸತ್ತೋದ ಮೇಲೆ ಬರೆದ್ರೆ ನನಗೇನು ಗೊತ್ತಾಗಬೇಕು ಅಲ್ವಾ. ನಾನು ಬದುಕಿದ್ದಾಗ ಹೇಳಬೇಕು. ಅದಕ್ಕಾಗಿ ನಾನು ನನ್ನ ಮನಸೋ ಇಚ್ಛೇ ಸತ್ಯವನ್ನೇ ಆವತ್ತು ಸುದೀರ್ಘವಾಗಿ ಹೇಳಿಕೊಂಡೆ. ನಮ್ಮ ತಾಯಿ ಅವರು ನನಗೆ ಹುಲಿತರ ಬದುಕೋ ಮಗನೇ ಅಂತ ಹುಲಿ ಉಗುರು ಕೊಟ್ಟಿದ್ದರು ಅಂತ ನಾನು ಹೆಮ್ಮೆಯಿಂದ ಹೇಳಿದೆ. 

ಅವನು ಯಾರೋ ಕಿತ್ತೋದ್‌ ನನ್ಮಗ ರಿಯಲ್ ಆಗಿ ಹಾಕೊಂಡು, ಅದೇನೋ ಆಗಿ ಟಿವಿಯಲ್ಲಿ ತಗಲಾಕೊಂಡಿದ್ದಾನೆ. ಇಲ್ಲಿರೋ ಅಷ್ಟೂ ಕ್ಯಾಮರಾಗಳೂ ನನ್ನ ಮನೆ ಮುಂದೆ ಇತ್ತು. ಏನೇನ್‌ ಡೈಲಾಗ್‌ ಬಿಡ್ತಾವ್ರೇ ಅಂದ್ರೆ, ನನಗೆ ಕೇಳೋಕೆ ಆಗ್ತಿಲ್ಲ ಎಂದು ವರ್ತೂರು ಸಂತೋಷ್‌ ಹೆಸರು ಹೇಳದೇ ಪರೋಕ್ಷವಾಗಿಯೇ ಮಾತನಾಡಿದ್ದಾರೆ ಜಗ್ಗೇಶ್.‌ ಇನ್ನು ಈ ಕುರಿತಾಗಿ ಚಾಟಿ ಏಟು ಬೀಸಿರುವ ರಂಗಣ್ಣ ಮಾತಿನ ಮೇಲೆ ನಿಗಾ ಇರಲಿ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.