ಜಾನು ಜೊತೆ ಕತ್ತಲೆ ಕೋಣೆ ಸೇರಿದ ಮನೆಯವರು, ಜಯಂತ್ ಮನೆಗೆ ಜಾನು ಎಂಟ್ರಿ

ಜೀ ಕನ್ನಡದಲ್ಲಿ ಒಂದು ಗಂಟೆಯ ಏಪಿಸೋಡ್ ಮೂಲಕವೇ ಹೆಚ್ಚು ವೀಕ್ಷಕರನ್ನು ಹಿಡಿದಿಟ್ಟುಕೊಂಡಿದೆ ಲಕ್ಷ್ಮೀ ನಿವಾಸ ಸೀರಿಯಲ್. ರೋಚಕ ಟ್ವಿಸ್ಟ್‌ಗಳು ಒಂದೆಡೆಯಾದರೆ, ಕವಲುಗಳಾಗಿ ತೆರೆದುಕೊಳ್ಳುವ ಹಲವು ಕಥೆಗಳೂ ಈ ಸೀರಿಯಲ್‌ನ ಹೈಲೈಟ್ಸ್. ಅದರಲ್ಲೂ ಸೈಕೋ ಜಯಂತನ ಲೀಲೆಗಳು ಕಿರುತೆರೆ ವೀಕ್ಷಕರ ಕಣ್ಣು ತೆರೆಸಿದ್ದವು. ಸೀರಿಯಲ್ ಶುರುವಾದಾಗ, ಜಯಂತನ ಪಾತ್ರಕ್ಕೆ ಕಟು ಟೀಕೆಗಳು ಮಾತ್ರವಲ್ಲದೆ, ಹೀಗೋ ಒಬ್ಬ ಮನುಷ್ಯ ಇರ್ತಾನಾ ಎಂದೂ ಕಾಮೆಂಟ್ ಬಂದಿದ್ದವು.
ಇದೀಗ ಇದೇ ಸೈಕೋ ಜಯಂತನ ವರ್ತನೆ ಸ್ವತಃ ಪತ್ನಿಗೇ ಅತೀ ಎನಿಸುತ್ತಿದೆ.ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ತನ್ನ ಪತ್ನಿ ಜಾನು ಮೇಲೆ ಅತಿಯಾದ ಕಾಳಜಿ ಮತ್ತು ಪ್ರೀತಿಯೇ ಜಯಂತನಿಗೆ ಇದೀಗ ಮುಳುವಾಗಿದೆ. ಕ್ಷಣ ಕ್ಷಣಕ್ಕೂ ಆಕೆಯ ನಡೆಯ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಜಯಂತ್, ಜಾನು ಯಾರ ಜತೆ ಮಾತನಾಡ್ತಾಳೆ, ಯಾರ ಜತೆ ಇರ್ತಾಳೆ ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಇದಷ್ಟೇ ಅಲ್ಲ, ಅರಮನೆಯಂಥ ಮನೆಯಲ್ಲಿ ಒಬ್ಬೇ ಒಬ್ಬ ಕೆಲಸದವರು ಇಲ್ಲದಂತೆ ಮಾಡಿದ್ದ.
ಇಡೀ ಮನೆ ತುಂಬ ಸಿಸಿ ಕ್ಯಾಮರಾಗಳನ್ನು ಫಿಕ್ಸ್ ಮಾಡಿ, ಚಿನ್ನುಮರಿಯ ಚಲನವಲನಗಳನ್ನು ವೀಕ್ಷಿಸುತ್ತಿದ್ದ. ಇದೀಗ ಜಯಂತನ ಅಸಲಿ ಮುಖಗಳು ಒಂದೊಂದಾಗಿಯೇ ಪತ್ನಿ ಜಾನು ಮುಂದೆ ಬಯಲಾಗುತ್ತಿದೆ.ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಇತ್ತೀಚಿನ ಒಂದಷ್ಟು ಬೆಳವಣಿಗೆಗಳನ್ನು ನೋಡುವುದಾದರೆ, ಜಯಂತನ ಫೋನ್‌ನಲ್ಲಿ ಏನಿದೆ ಎಂದು ಆತನ ಫಿಂಗರ್ ಬಳಸಿ ಲಾಕ್ ತೆಗೆದಿದ್ದ ಜಾನುಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು.
ಫೋನ್‌ನಲ್ಲಿನ ಹಳೇ ವಿಡಿಯೋಗಳನ್ನು ನೋಡಿ ಶಾಕ್ ಆಗಿದ್ದಳು. ಪತಿ ಜಯಂತ್ ಅಜ್ಜಿಯ ಕುತ್ತಿಗೆ ಹಿಡಿದಿದ್ದು, ವೆಂಕಿಗೆ ಹೊಡೆದಿದ್ದು, ಮನೆಯಲ್ಲಿ ಅಲ್ಲಲ್ಲಿ ಫಿಕ್ಸ್ ಮಾಡಿದ್ದ ಸಿಸಿ ಕ್ಯಾಮರಾಗಳನ್ನೂ ನೋಡಿ ತಲೆ ತಿರುಗಿತ್ತು. ಮೊದಲೇ ಗರ್ಭಿಣಿ ಆಗಿದ್ದ ಜಾನು, ಶಾಕ್‌ಗೆ ಒಳಗಾಗಿ ತಲೆತಿರುಗಿ ಬಿದ್ದಿದ್ದಳು.ಪ್ರಜ್ಞೆ ತಪ್ಪಿ ಬಿದ್ದ ಜಾನುವನ್ನು ಸ್ವತಃ ಜಯಂತ್ ಆಸ್ಪತ್ರೆಗೆ ಸೇರಿಸಿದ್ದಾನೆ. ಆಕೆಗೆ ಪ್ರಜ್ಞೆ ಬಂದ ಬಳಿಕ, ತನಗೆ ಅಬಾರ್ಷನ್ ಆದ ವಿಚಾರವೂ ಜಾನುಗೆ ಗೊತ್ತಾಗಿದೆ. ಹೀಗ್ಯಾಕೆ ಮಾಡಿದ್ರಿ ಎಂದು ಜಯಂತನ ಬಳಿ ಅಳುತ್ತಲೇ ಪ್ರಶ್ನೆ ಮಾಡಿದ್ದಾಳೆ. ಇತ್ತ ತನ್ನ ಬಣ್ಣ ಬಯಲಾಗುತ್ತಿದ್ದಂತೆ, ಈ ವಿಚಾರವನ್ನು ಮನೆಯಲ್ಲಿ ಯಾರ ಬಳಿಯೂ ಹೇಳಬೇಡಿ ಎಂದಿದ್ದಾನೆ. ಇದೀಗ ಜಾಹ್ನವಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಮನೆಗೆ ಕರೆತಂದಿದ್ದಾನೆ ಜಯಂತ್. ಆಕೆ ಜತೆಗೆ ಮಾತಿಗಿಳಿಯುತ್ತಿದ್ದಂತೆ, ಚಿನ್ನುಮರಿ ಕೊಂಚ ಗರಂ ಆಗಿಯೇ ಪ್ರತಿಕ್ರಿಯಿಸಿದ್ದಾಳೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.