ಕಾಟೇರ ಸಿನಿಮಾ ನೂರಾರು ಕೋಟಿ ಕಲೆಕ್ಷನ್, ಕುಚಿಕು ಗೆಳೆಯನನ್ನು ಹಾಡಿ ಹೊಗಳಿದ ಸುದೀಪ್
ಕರುನಾಡಿನಲ್ಲೀಗ ಕಾಟೇರ ಸಿನಿಮಾದ್ದೇ ಹವಾ. ಬಿಡುಗಡೆಯಾದ ಕೇವಲ ಏಳೇ ದಿನಕ್ಕೆ ದಾಖಲೆಯ ಗಳಿಕೆ ಕಂಡು, ಇಡೀ ಸ್ಯಾಂಡಲ್‌ವುಡ್ ಸಿನಿಮಾ ಇಂಡಸ್ಟ್ರಿಯ ತಾಕತ್ತು ಪ್ರದರ್ಶಿಸಿದೆ ಕಾಟೇರ ಸಿನಿಮಾ. ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದ ಹೈಪ್ ಕ್ರಿಯೆಟ್ ಮಾಡಿದ್ದ ಕಾಟೇರ, ರಿಲೀಸ್ ಬಳಿಕ ಅದನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದೆ. ಪ್ಯಾನ್ ಇಂಡಿಯಾ ಸಲಾರ್ ಸಿನಿಮಾದ ಎದುರೂ ಕಾಟೇರ ಕರ್ನಾಟಕದಲ್ಲಿ ಗೆದ್ದು ಬೀಗಿದೆ.
ಕರುನಾಡಲ್ಲಿ ಕನ್ನಡಿಗನೇ ಸಾರ್ವಭೌಮ ಎಂದೂ ಸಾರಿ ಹೇಳಿದೆ ಕಾಟೇರ. ಇದೀಗ ಇದೇ ಕಾಟೇರ ಬಳಗದಿಂದ ಹೊಸ ಸುದ್ದಿ ಹೊರಬಂದಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಇಡೀ ಸ್ಯಾಂಡಲ್‌ವುಡ್‌ಗೆ ಕಾಟೇರ ಸಿನಿಮಾ ವೀಕ್ಷಣೆಗೆ ಆಮಂತ್ರಣ ನೀಡಿದ್ದರು ರಾಕ್‌ಲೈನ್ ವೆಂಕಟೇಶ್. ಹಿರಿ ಕಿರಿ ಕಲಾವಿದರೂ ಆಗಮಿಸಿ ದರ್ಶನ್ ಸಿನಿಮಾ ಕಣ್ತುಂಬಿಕೊಂಡು, ಹೌದೌದೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆಮಂತ್ರಣದ ಮೇರೆಗೆ ಬಹುತೇಕ ಎಲ್ಲ ಸೆಲೆಬ್ರಿಟಿಗಳು ಆಗಮಿಸಿ ಕಾಟೇರನನ್ನು ಕಣ್ತುಂಬಿಕೊಂಡಿದ್ದರು.
ಅದೇ ರೀತಿ ಕಾಟೇರ ಸಿನಿಮಾ ವೀಕ್ಷಣೆಗೆ ಕಿಚ್ಚ ಸುದೀಪ್ ಅವರಿಗೂ ಇನ್ವಿಟೇಷನ್ ಹೋಗಿದೆ ಎಂದು ಸ್ವತಃ ನಿರ್ದೇಶಕ ತರುಣ್ ಸುಧೀರ್ ಹೇಳಿದ್ದಾರೆ. ಇನ್ನು ಮಾಧ್ಯಮದ ಮುಂದೆ ಖಂಡಿತ, ನಾನೂ ಕಾಟೇರ ಸಿನಿಮಾ ನೋಡ್ತಿನಿ. ಆದರೆ, ಸದ್ಯ ನಾನು ಶೂಟಿಂಗ್‌ನಲ್ಲಿದ್ದೇನೆ. ಅದು ಮುಗಿಸಿ ಬಂದ ಮೇಲೆ ನೋಡುತ್ತೇನೆ ಎಂದು ನಮ್ಮ ನಿರ್ಮಾಪಕರ ಮುಂದೆ ತಿಳಿಸಿದ್ದಾರೆ.ಕಿಚ್ಚ ಸುದೀಪ್ ಸದ್ಯ ಮ್ಯಾಕ್ಸ್ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ.
ತಮಿಳುನಾಡಿನ ಮಹಾಬಲಿಪುರಂನಲ್ಲಿ ಆ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಸುದೀಪ್ ಭಾಗವಹಿಸಿದ್ದಾರೆ. ಅವರಿಗೂ ರಾಕ್‌ಲೈನ್ ವೆಂಕಟೇಶ್ ಅವರ ಕಡೆಯಿಂದ ಆಮಂತ್ರಣ ತಲುಪಿದೆ. ಕಾಟೇರ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿರುವುದಕ್ಕೆ ಶುಭಾಶಯ ತಿಳಿಸಿದ್ದಾರೆ.
ಸುದೀಪ್ ಮತ್ತು ದರ್ಶನ್ ದೂರವಾಗಿ ಕೆಲ ವರ್ಷಗಳೇ ಕಳೆದಿವೆ. ಇವರಿಬ್ಬರನ್ನು ಒಟ್ಟಿಗೆ ಮೊದಲಿನಂತೆ ಜತೆಯಾಗಿ ನೋಡಬೇಕು ಎಂದು ಅವರ ಕೋಟಿ ಕೋಟಿ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಆದರೆ, ಆ ಕ್ಷಣ ಮಾತ್ರ ಇನ್ನೂ ಆಗಮಿಸಿಲ್ಲ.
ಸುಮಲತಾ ಅಂಬರೀಶ್ ಕಾರ್ಯಕ್ರಮದಲ್ಲಿ ಇಬ್ಬರೂ ಒಂದೇ ವೇದಿಕೆ ಹಂಚಿಕೊಂಡಿದ್ದರೂ, ಇಬ್ಬರೂ ಮಾತನಾಡಿರಲಿಲ್ಲ. ಇದೀಗ ಸ್ನೇಹಿತ ದರ್ಶನ್ ಅವರ ಕಾಟೇರ ಸಿನಿಮಾ ನೋಡುವುದಾಗಿ ಸುದೀಪ್ ಹೇಳಿದ್ದಾರೆ. ಈ ವಿಚಾರ ಈ ಇಬ್ಬರ ಅಭಿಮಾನಿ ವಲಯದಲ್ಲಿ ಕುತೂಹಲ ಮೂಡಿಸಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.