ಕರ್ನಾಟಕದಲ್ಲಿ ಕಾಟೇರ ಸಿನಿಮಾ ಭರ್ಜರಿ ಹಿಟ್, ಯಶ್ ಪುನೀತ್ ಸುದೀಪ್ ರೆಕಾರ್ಡ್ ಪುಡಿಪುಡಿ

 | 
V Nj

ಕಾಟೇರ ಚಿತ್ರ ಒಳ್ಳೆ ರೆಸ್ಪಾನ್ಸ್ ಪಡೆದಿದೆ. ದರ್ಶನ್ ಫ್ಯಾನ್ಸ್  ಸೇರಿ ಎಲ್ಲರೂ ಈ ಚಿತ್ರ ಮೆಚ್ಚಿಕೊಂಡಿದೆ. ಇದರೊಟ್ಟಿಗೆ ಚಿತ್ರದ ಮೊದಲ ದಿನದ ಕಲೆಕ್ಷನ್ ಕೂಡ ಭರ್ಜರಿ ಆಗಿದೆ. ಸಾವಿರ ಪ್ಲಸ್ ಶೋಗಳಲ್ಲಿ ಪ್ರದರ್ಶನ ಕಂಡ ಕಾಟೇರ ಮೊದಲ ದಿನ ಕೋಟಿ ಕೋಟಿ ಕಲೆಕ್ಷನ್  ಮಾಡಿದೆ. ಈ ಒಂದು ಖುಷಿಯನ್ನ ಸಿನಿಮಾ ತಂಡವೇ ಹೆಮ್ಮೆಯಿಂದಲೇ ಹೇಳಿಕೊಂಡಿದೆ. ಎಷ್ಟು ಟಿಕೆಟ್ ಬುಕ್ ಆಗಿವೆ. ಎಷ್ಟು ಒಟ್ಟು ಕಲೆಕ್ಷನ್ ಆಗಿದೆ. ಈ ಎಲ್ಲ ವಿಚಾರಗಳನ್ನ ರಿವೀಲ್ ಮಾಡಿದೆ. 

ಇದರ ಬೆನ್ನಲ್ಲಿಯೇ ದಾಸನ ಫ್ಯಾನ್ಸ್ ಕೂಡ ಭರ್ಜರಿಯಾಗಿಯೇ ಚಿತ್ರವನ್ನ ಸ್ವಾಗತ ಮಾಡಿದ್ದಾರೆ. ದೊಡ್ಡ ಹಬ್ಬದಂತೇನೆ ಚಿತ್ರದ ರಿಲೀಸ್ ಅನ್ನ ಸಂಭ್ರಮಿಸಿದ್ದಾರೆ. ಕಾಟೇರ ಚಿತ್ರ ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗಿದೆ. ರಾಜ್ಯದ 389 ಥಿಯೇಟರ್‌ನಲ್ಲಿ ರಿಲೀಸ್ ಆಗಿದೆ. 72 ಮಲ್ಟಿಪ್ಲೆಕ್ಸ್ ಥಿಯೇಟರ್‌ನಲ್ಲಿ ಪ್ರದರ್ಶನ ಕಂಡಿದೆ. 1544 ಹೌಸ್‌ಫುಲ್ ಶೋಗಳೂ ಆಗಿವೆ. ಹೀಗೆ ಸಿನಿಮಾದ ಮೊದಲ ದಿನ ಭರ್ಜರಿ ಶೋಗಳೂ ಆಗಿವೆ. ಭರ್ಜರಿ ಓಪನಿಂಗ್ ಕೂಡ ಪಡೆದಿದೆ.

ಕಾಟೇರ ಸಿನಿಮಾದ ಮೊದಲ ದಿನ ಕಲೆಕ್ಷನ್ ಜೋರಾಗಿದೆ. ಈ ಮೂಲಕ ಕಾಟೇರ ದಾಖಲೆಯ ಕಲೆಕ್ಷನ್ ಮಾಡಿದೆ. ಈ ಒಂದು ದಾಖಲೆಯ ಲೆಕ್ಕ 19 ಕೋಟಿ 79 ಲಕ್ಷ ಆಗಿವೆ. ಈ ಒಂದು ನಂಬರ್ ಅನ್ನ ಸ್ವತಃ ಸಿನಿಮಾ ಟೀಮ್ ಕೊಟ್ಟಿದೆ. ಅಲ್ಲಿಗೆ ಇದು ಅಧಿಕೃತ ಅಂತಲೇ ಹೇಳಬಹುದು.ಕಾಟೇರ ಸಿನಿಮಾದಲ್ಲಿ ದರ್ಶನ್ ಡಬಲ್ ಶೇಡ್ ರೋಲ್ ಮಾಡಿದ್ದಾರೆ. ವಯಸ್ಸಾದ ರೋಲ್‌ನಲ್ಲೂ ದರ್ಶನ್ ಕಾಣಿಸಿಕೊಂಡಿದ್ದಾರೆ. ಯಂಗ್ ಕಾಟೇರನಾಗಿಯೂ ಕಾಣಿಸಿಕೊಂಡಿದ್ದಾರೆ. ಎರಡೂ ರೋಲ್‌ನಲ್ಲಿಯೇ ದರ್ಶನ್ ಭರ್ಜರಿಯಾಗಿಯೇ ಅಭಿನಯಿಸಿದ್ದಾರೆ.

ಕಾಟೇರ ಚಿತ್ರದಲ್ಲಿ ದರ್ಶನ್ ಒಳ್ಳೆ ಕಥೆಯನ್ನ ಮಾಡಿದ್ದಾರೆ. ಈ ಮೂಲಕ ಜಾತಿ ಪದ್ಧತಿಯನ್ನ ಕೂಡ ಟೀಕಿಸಿದ್ದಾರೆ. ಇದರಿಂದ ಆಗೋ ಸಮಸ್ಯೆಗಳನ್ನ ಕೂಡ ಎತ್ತಿ ತೋರಿದ್ದಾರೆ. ಊಳುವವನೆ ಹೊಲದ ಒಡೆಯ ಅನ್ನುವ ದೇವರಾಜ ಅರಸ ಕಾಯ್ದೆ ಬಂದ್ಮೇಲೆ ಏನೆಲ್ಲ ಆಯಿತು ಅನ್ನೋ ಚಿತ್ರಣವೂ ಇಲ್ಲಿದೆ. ಒಟ್ಟಾರೆ, ಕಾಟೇರ ತನ್ನ ಕಂಟೆಂಟ್ ಮೂಲಕವೇ ಹೆಚ್ಚು ಗಮನ ಸೆಳೆಯುತ್ತಿದೆ ಅಂತಲೇ ಹೇಳಬಹುದು. ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಂತೂ ನಿಜ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.