ಕರ್ನಾಟಕದಲ್ಲಿ ದಾಖಲೆ ಬರೆದ ಕಾಟೇರ, 190 ಕೋಟಿ ಕಲೆಕ್ಷನ್ ಕೇಳಿ ಸ್ವತಃ ದರ್ಶನ್ ಕೂಡ ಶಾ.ಕ್

 | 
Bs

ಕಾಟೇರ ಸಿನಿಮಾ ಬಿಡುಗಡೆಯಾಗಿ ಎರಡು ವಾರ ಭರ್ತಿಯಾಗಿದೆ. ಕಳೆದ ಹದಿನಾಲ್ಕು ದಿನಗಳಲ್ಲಿ ದರ್ಶನ್‌ ಮತ್ತು ಆರಾಧನಾ ರಾಮ್‌ ಅಭಿನಯದ, ತರುಣ್‌ ಸುಧೀರ್‌ ನಿರ್ದೇಶನದ ಕಾಟೇರವು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮವಾಗಿ ಗಳಿಕೆ ಮಾಡಿದೆ. ಇದೀಗ ಚಿತ್ರತಂಡ ನೀಡಿದ ಮಾಹಿತಿ ಪ್ರಕಾರ ಕಳೆದ ಮೂರು ವಾರಗಳಲ್ಲಿ ಕಾಟೇರ ಗಳಿಕೆ 190 ಕೋಟಿ ರೂಪಾಯಿ ಗಳಿಕೆ ಮಾಡಿದೆ. 

ಕಾಟೇರ ಸಿನಿಮಾವು ಡಿಸೆಂಬರ್‌ 29, 2023ರಂದು ಬಿಡುಗಡೆಯಾಗಿತ್ತು. ಇದೀಗ ಸಂಕ್ರಾಂತಿ ಹಬ್ಬ ಹತ್ತಿರ ಇರುವಾಗ ಯಾವುದೇ ಕನ್ನಡ ಚಿತ್ರಗಳು ಬಿಡುಗಡೆಯಾಗಿಲ್ಲ ಎಂಬ ನೋವಿನ ನಡುವೆಯೂ ಕರ್ನಾಟಕದ ಚಿತ್ರಮಂದಿರಗಳಲ್ಲಿ ಕಾಟೇರನ ಅಬ್ಬರ ಮುಂದುವರೆದಿದೆ. ಕರ್ನಾಟಕದಲ್ಲಿ ಮೊದಲ ವಾರ 406 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕಾಟೇರ, ಎರಡನೇ ವಾರ 462 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಕರ್ನಾಟಕದ 27 ಚಿತ್ರಮಂದಿರಗಳಲ್ಲಿ 50 ಲಕ್ಷ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿರುವ ದರ್ಶನ್‌ ಸಿನಿಮಾವು ಹೊಸ ದಾಖಲೆ ಬರೆದಿದೆ.

ಕಾಟೇರ ಸಿನಿಮಾ ಮೊದಲು ಕರ್ನಾಟಕದಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಮೊದಲ ಒಂದೆರಡು ದಿನಗಳಲ್ಲಿ ಕಾಟೇರನ ಸಕ್ಸಸ್‌ ಕಾಣಿಸಿದರೂ ಚಿತ್ರತಂಡ ಪರಭಾಷೆಗಳತ್ತ ಅಷ್ಟಾಗಿ ಒಲವು ತೋರಲಿಲ್ಲ. ಆದರೆ, ಹೊರರಾಜ್ಯ ಮತ್ತು ಹೊರದೇಶಗಳಲ್ಲಿರುವ ಕನ್ನಡಿಗರ ಬೇಡಿಕೆಗೆ ತಕ್ಕಂತೆ ಹೊರರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿ ಕಾಟೇರ ಸಿನಿಮಾ ಬಿಡುಗಡೆ ಮಾಡಲಾಗಿದೆ. ದುಬೈನಲ್ಲಿ ಕಾಟೇರ ಬಿಡುಗಡೆಯಾಗಿ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿತ್ತು. 

ಸ್ವತಃ ದರ್ಶನ್‌ ದುಬೈಗೆ ಹೋಗಿ ಕರುನಾಡ ಅಧಿಪತಿಯೆಂಬ ಬಿರುದು ಪಡೆದು ವಾಪಸ್‌ ಬಂದಿದ್ದರು.ದರ್ಶನ್‌ ಅಭಿನಯದ ಇತ್ತೀಚಿನ ಕೆಲವು ಚಿತ್ರಗಳು ನಷ್ಟ ಅನುಭವಿಸದೆ ಇದ್ದರೂ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಹಿಟ್‌ ಆಗಿರಲಿಲ್ಲ. ಆದರೆ, ಕಾಟೇರ ಸಿನಿಮಾವು ಎಲ್ಲರ ನಿರೀಕ್ಷೆಯನ್ನೂ ಮೀರಿ ಸಖತ್‌ ಹಿಟ್‌ ಆಗಿತ್ತು. ಕಾಟೇರ ಸಿನಿಮಾ ಚೆನ್ನಾಗಿದೆಯಂತೆ ಎಂಬ ಸುದ್ದಿ ಬಾಯಿಂದ ಬಾಯಿಗೆ ಹರಡಿ ಸಾಕಷ್ಟು ಕ್ರೇಜ್‌ ಸೃಷ್ಟಿಸಿತ್ತು. ಕಾಂತಾರ, ಕೆಜಿಎಫ್ ಕಲೆಕ್ಷನ್ ಕೂಡ ಬ್ರೇಕ್ ಮಾಡಿದೆ ಎನ್ನಲಾಗುತ್ತಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.