ಮೋದಿಗೆ ಬಗ್ಗೆ ಕೆಟ್ಟದಾಗಿ ಮಾತನಾಡಿದ ಕೈನಾಯಕ; 'ಆತನಿಗೆ ಚಪ್ಪಲಿಯಲ್ಲಿ ಹೊಡೀತಿನಿ'

 | 
Fff

ಮೋದಿ ನನ್ನ ಕೈಗೆ ಸಿಕ್ರೆ ಕಾಲಲ್ಲಿರೋದು ತೆಗೆದು ಹೊಡೀತಿನಿ ಎಂದು ಕಾರ್ಮಿಕರ ಕಲ್ಯಾಣ ಮಂಡಳಿಯ ಉಪಾಧ್ಯಕ್ಷ ಜಿ.ಎಸ್ ಮಂಜುನಾಥ್ ಹೇಳಿದ್ದಾರೆ. ಸಚಿವ ಡಿ. ಸುಧಾಕರ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಇದ್ದ ವೇದಿಕೆಯ ಮೇಲೆ ನಿಂತುಕೊಂಡು ವಾಗ್ದಾಳಿ ನಡೆಸಿದ್ದಾರೆ.ಹಿರಿಯೂರಿನಲ್ಲಿ ನಡೆದ ಡಾ. ಬಿಆರ್ ಅಂಬೇಡ್ಕರ್, ಬಾಬು ಜಗಜೀನವರಾಂ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿ.ಎಸ್ ಮಂಜುನಾಥ್ ಭಾಗವಹಿಸಿದ್ದರು. 

ಈ ವೇಳೆ ಮಾತನಾಡುವಾಗ, ಲೋಕಸಭೆ ಚುನಾವಣೆ ಬರ್ತಿದ್ದಂತೆ ಸಿಲಿಂಡರ್ ಬೆಲೆ 100 ರೂಪಾಯಿ ಕಡಿಮೆ ಮಾಡಿದ್ದಾರೆ. ಈಗ್ಯಾಕಲೇ ಮಾಡ್ತಿಯಾ ಎಂದು ಏಕ ವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.ಈ ದೇಶದ ಪ್ರಜೆಗಳಾಗಿ ನಾವೆಲ್ಲ ಪ್ರಶ್ನೆ‌ ಮಾಡಬೇಕು. ಇಷ್ಟು ದಿನ 95 ಸಾವಿರ ಒಂದು ಲಕ್ಷ ಮುಖಕ್ಕೆ ಹೊಡೆದು ಕಿತ್ಕೊಂಡು ಈಗ 100 ಫ್ರೀ ಅಂತಿದ್ದಾನೆ. 465 ರೂಪಾಯಿ ಇದ್ದ ಸಿಲಿಂಡರ್ ಬೆಲೆ 1200 ರೂ ಯಾಕೆ ಮಾಡ್ದೆ ಅಂತಾ ನಾವು ಪ್ರಶ್ನೆ ಮಾಡಬೇಕು. 

ಚುನಾವಣೆ ಆದ ಮೇಲೆ ಸಿಲಿಂಡರ್ ದರ 1400 ರೂಪಾಯಿ ಮಾಡ್ತೀಯಾ ಅಂತಾ ಪ್ರಶ್ನೆ ಮಾಡ್ಬೇಕು. ಲಕ್ಷ ರೂಪಾಯಿ ನಮ್ಮಿಂದ ದೋಚಿ, ನೂರು ಸಿಲಿಂಡರ್ ರೇಟ್ ಕಡಿಮೆ ಮಾಡಿದ್ರು ಎಂದು ಜಿ.ಎಸ್ ಮಂಜುನಾಥ್ ಹೇಳಿದ್ದಾರೆ. ನಂತರ ಮಾತು ಮುಂದುವರೆಸಿದ ಕಾರ್ಮಿಕರ ಕಲ್ಯಾಣ ಮಂಡಳಿಯ ಉಪಾಧ್ಯಕ್ಷ, ನಾವು ದೇವಸ್ಥಾನ ಕಟ್ಟಲಿಲ್ಲ, ನಾವು ಅದನ್ನು ವಿರೋಧ ಮಾಡಿಲ್ಲ, ನಮ್ಮ ಸಂಸ್ಕೃತಿಯೂ ಅದಲ್ಲ. 

ನಾವು ಯುನಿವರ್ಸಿಟಿಗಳನ್ನು ಕಟ್ಟಿದ್ದೇವೆ. ಅದರಲ್ಲಿ ಕಲಿತವರೇ ಈಗ ಬಿಜೆಪಿಯಲ್ಲಿ ನಿಂತು, ಕಾಂಗ್ರೆಸ್ ಏನು ಮಾಡಿದೆ ಅಂತಾ ಪ್ರಶ್ನೆ ಮಾಡ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್​​ನವರು, ದೇಶದ ಪ್ರಜೆಗಳು ಮಾತನಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜಿ.ಎಸ್. ಮಂಜುನಾಥ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.