ಶಾರುಖ್ ಖಾನ್ ಜೊತೆ ನಟಿಸುವಾಗ ಕಾಜಲ್ ಗರ್ಭಿಣಿ; ಗಂಡ ಅಜಯ್ ದೇವಾಗನ್ ಮಾಡಿದ್ದೇನು‌ ಗೊ.ತ್ತಾ

 | 
Tuu

ತೆರೆಯ ಮೇಲೆ ಶಾರುಖ್-ಕಾಜಲ್ ಕೆಮಿಸ್ಟ್ರಿ ಅದ್ಬುತವಾಗಿದ್ದು, ಈ ಜೋಡಿ ನೋಡಲು ಪ್ರೇಕ್ಷಕರು ಥಿಯೇಟರ್ ಗಳಿಗೆ ಹೋಗ್ತಿದ್ರು. ಇಬ್ಬರೂ ಅನೇಕ ಸೂಪರ್ ಹಿಟ್ ಸಿನಿಮಾ ನೀಡಿದ್ದಾರೆ. ಆದರೆ ಇಬ್ಬರು ಸ್ಟಾರ್ ಗಳು ನಿಜ ಜೀವನದಲ್ಲಿ ಅನೇಕ ಸಮಸ್ಯೆ ಹಾಗೂ ಸವಾಲ್ ಅನ್ನು ಎದುರಿಸಿದ್ದಾರೆ. ಗರ್ಭಿಣಿ ಕಾಜೋಲ್ ಕೂಡ ಗರ್ಭಪಾತದಿಂದ ಕಣ್ಣೀರು ಹಾಕಿದ್ರು.

ಸಿನಿಮಾರಂಗದಲ್ಲಿ ಟಾಪ್ ಹೀರೋಯಿನ್ ಪಟ್ಟಕ್ಕೇರಿದ ಕಾಜೋಲ್ ಡಿಮ್ಯಾಂಡ್ ಇರುವಾಗ್ಲೆ ಅಜಯ್ ದೇವಗಾನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ರು. ಅಜಯ್ ಮತ್ತು ಕಾಜೋಲ್ ಇಂಡಸ್ಟ್ರಿಯಲ್ಲಿನ ಅತ್ಯುತ್ತಮ ಜೋಡಿಗಳಲ್ಲಿ ಒಂದಾಗಿದೆ. ಶಾರುಖ್ ಖಾನ್ ಮತ್ತು ಕಾಜೋಲ್ ಜೋಡಿ ಹಿಟ್ ಆದರೆ ಅಜಯ್ ಕಾಜೋಲ್ ಅವರ ಆಫ್-ಸ್ಕ್ರೀನ್ ಜೋಡಿ ಹಿಟ್ ಆಗಿದೆ.

2001 ರಲ್ಲಿ ಶಾರುಖ್-ಕಾಜಲ್ ಅಭಿನಯದ ‘ಕಬಿ ಖುಷಿ ಕಬಿ ಗಮ್’ ಚಿತ್ರ ಬಿಡುಗಡೆಯಾಯಿತು. ಈ ಚಿತ್ರ ಎಲ್ಲಾ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಕರಣ್ ಜೋಹರ್ ನಿರ್ದೇಶನದ ‘ಕೆ3ಜಿ’ ಸಿನಿಮಾ ಭಾರೀ ಹಿಟ್ ಆಗಿತ್ತು. ಈ ಸಿನಿಮಾ ಮೂಲಕ ಶಾರುಖ್-ಕಾಜಲ್ ಜೋಡಿ ಮತ್ತಷ್ಟು ಫೇಮಸ್ ಆಯ್ತು.

ಆದರೆ ‘ಕಬಿ ಖುಷಿ ಕಬಿ ಗಮ್’ ಚಿತ್ರದ ಚಿತ್ರೀಕರಣದಲ್ಲಿ ಕಾಜೋಲ್ ಜೀವನದಲ್ಲಿ ಒಂದು ದುರಂತ ಘಟನೆ ಸಂಭವಿಸಿದೆ. ಈ ಚಿತ್ರದ ಸೆಟ್ನಲ್ಲಿ ಅಜಯ್, ಕಾಜೋಲ್ ನಡುವೆ ದೊಡ್ಡ ಜಗಳವೇ ನಡೆದಿತ್ತು ಎನ್ನಲಾಗಿದೆ. ಕಾಜೋಲ್ ಅನಾರೋಗ್ಯಕ್ಕೆ ಒಳಗಾಗಿದ್ದರು.ಕಬಿ ಖುಷಿ ಕಬಿ ಗಮ್ ಚಿತ್ರದ ಸೆಟ್ ನಲ್ಲಿ ಹಾಡಿನ ಚಿತ್ರೀಕರಣದ ವೇಳೆ ಕಾಜೋಲ್ ಕೆಳಗೆ ಬಿದ್ದಿದ್ದಾರೆ. ಸುದ್ದಿ ತಿಳಿದು ಪತಿ ಅಜಯ್ ಶೂಟಿಂಗ್ ನಡೆಯುತ್ತಿದ್ದ ಜಾಗಕ್ಕೆ ಓಡೋಡಿ ಬಂದಿದ್ರು. ಆ ಸಮಯದಲ್ಲಿ ಕಾಜಲ್ ಪ್ರಜ್ಞೆ ತಪ್ಪಿದ್ದರು. ಪತ್ನಿಯ ಸ್ಥಿತಿ ಕಂಡು ಅಜಯ್ ಕೂಡ ಗಾಬರಿಯಾಗಿದ್ರು.

ಕೊಂಚ ಸುಧಾರಿಸಿಕೊಂಡ ಕಾಜೋಲ್ ಮೇಲೆ ಅಜಯ್ ಕೋಪಗೊಂಡಿದ್ದರು. ಸೆಟ್ ನಲ್ಲಿ ಎಲ್ಲರ ಮುಂದೆ ಪತಿ-ಪತ್ನಿ ಜಗಳವಾಡಿದ್ರು. ಕಾಜೋಲ್ ಗೆ ಎರಡು ಬಾರಿ ಗರ್ಭಪಾತವಾಗಿತ್ತು. ಅಜಯ್ ಎಲ್ಲರ ಮುಂದೆ ಕಾಜೋಲ್ ಗೆ ಕಪಾಳಕ್ಕೆ ಹೊಡೆದಿದ್ದರು ಎನ್ನುವ ಸುದ್ದಿ ನ್ಯಾಷನಲ್ ಮಾಧ್ಯಮದಲ್ಲಿ ವರದಿಯಾಗಿದೆ.ಆದ್ರೆ ಈ ಬಗ್ಗೆ ಸ್ವತಃ ಕಾಜಲ್ ಏನನ್ನೂ ಹೇಳಿಲ್ಲ.