ಕರ್ನಾಟಕದಲ್ಲಿ ಕಮಲ ಹಾಸನ್ ಸಿನಿಮಾ ಬ್ಯಾನ್, ಹೊಸ‌ ಸಿನಿಮಾ ಮಾಡಿ 40 ಕೋಟಿ ಲಾಸ್ ಮಾಡಿಕೊಂಡ ತಮಿಳ್ ಹಾಸನ್

 | 
Jjj
ನಟ ಕಮಲ್‌ ಹಾಸನ್‌ ಅವರು ಕರ್ನಾಟಕ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡ ಮೇಲೆಯೂ ಕನ್ನಡಿಗರ ಕ್ಷಮೆ ಕೇಳಿಲ್ಲ. ಈ ನಡುವೆ ಪಕ್ಕಾ ರಾಜಕಾರಣಿಯಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಸಂಕಷ್ಟ ಬಂದ ಸಂದರ್ಭದಲ್ಲಿ ತಮಿಳುನಾಡಿನ ಜನ ನನ್ನ ಕೈಹಿಡಿದಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಮತ್ತೆ ಅನವಶ್ಯಕವಾಗಿ ತಮಿಳಿಗರು ಹಾಗೂ ಕನ್ನಡಿಗರ ನಡುವೆ ವಿವಾದ ಸೃಷ್ಟಿ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. 
ನಾನು ಈಗ ಏನು ಮಾತನಾಡುವುದಿಲ್ಲ ಅಂತ ಹೇಳುತ್ತಲ್ಲೇ ಸಿನಿಮಾ ಪ್ರಮೋಷನ್‌ಗೆ ಸರ್ಕಸ್ಸ್‌ ಮಾಡಿದ್ದಾರೆ. ತಮಿಳುನಾಡು ಹಾಗೂ ತಮಿಳಿಗರ ಪರವಾಗಿ ಅವರು ಮಾತನಾಡಿರುವುದು ಏನು ಎನ್ನುವುದು ಇಲ್ಲಿದೆ.ತಮಿಳು - ಕನ್ನಡ ಹುಟ್ಟಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಕಮಲ್‌ ಹಾಸನ್‌ ಅವರು, ಇದೀಗ ತಮಿಳುನಾಡಿಗೆ ಮೆಚ್ಚುಗೆ ಸೂಚಿಸುವಂತೆ ಮಾತನಾಡಿರುವುದು ಕನ್ನಡಿಗರನ್ನು ಕೆರಳಿಸಿದೆ. ನೆಲ - ಜಲ ಹಾಗೂ ಭಾಷೆಯ ವಿಚಾರದಲ್ಲಿ ಜನ ಭಾವನಾತ್ಮಕವಾಗಿರುತ್ತಾರೆ. ಈ ವಿಚಾರದಲ್ಲಿ ಕಮಲ್‌ ಹಾಸನ್‌ ಅವರು ಮಾತ್ರವಲ್ಲ. ಯಾರೇ ಆಗಿರಲಿ ಈ ವಿಚಾರದಲ್ಲಿ ಜನರ ಭಾವನೆಗಳನ್ನು ಕೆರಳಿಸುವಂತೆ ಮಾತನಾಡಬಾರದು ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ.
ಕನ್ನಡಿಗರ ತೀವ್ರ ಆಕ್ರೋಶ ಹಾಗೂ ವಿರೋಧಗಳ ಕಾರಣದಿಂದಾಗಿ ನಟ ಕಮಲ್‌ ಹಾಸನ್‌ ಅವರ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಆಗಿಲ್ಲ. ಇದರ ಹೊರತಾಗಿಯೂ ಕಮಲ್‌ ಹಾಸನ್‌ ಅವರ ತಮಿಳು ಪ್ರೀತಿ ಏನು ಕಡಿಮೆ ಆಗಿಲ್ಲ. ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಆಗದೆ ಇರುವುದರಿಂದ ಈ ಸಿನಿಮಾಗೆ ಕೋಟ್ಯಾಂತರ ರೂಪಾಯಿ ಲಾಸ್‌ ಆಗುತ್ತಿದೆ. ಹೀಗಾಗಿ, ತಮಿಳುನಾಡಿನಲ್ಲಿ ಸಿನಿಮಾವನ್ನು ಹೇಗಾದರೂ ಮಾಡಿ ಸಕ್ಸಸ್‌ ಮಾಡಿಕೊಳ್ಳಬೇಕು ಎಂದು ನಟ ಕಮಲ್‌ ಹಾಸನ್‌ ಅವರು ಹರಸಾಹಸಪಡುತ್ತಿದ್ದಾರೆ. 
ನಟ ಕಮಲ್‌ ಹಾಸನ್‌ ಅವರು ತಮಿಳಗರನ್ನು ಸಂತೋಷಪಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇದರ ಭಾಗವಾಗಿ ಅವರು ಕೊಟ್ಟಿರು ಹೇಳಿಕೆ ವೈರಲ್‌ ಆಗುತ್ತಿದೆ.ಕಮಲ್‌ ಹಾಸನ್‌ ಅವರ ಪ್ರೊಡೆಕ್ಷನ್‌ನಿಂದಲೇ ಥಗ್‌ ಲೈಫ್‌ ಸಿನಿಮಾ ನಿರ್ಮಾಣವಾಗಿದೆ. ಬೆಂಗಳೂರಿನಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದರೆ ಕೋಟ್ಯಾಂತರ ರೂಪಾಯಿ ಬರುತ್ತಿತ್ತು. ಆದರೆ, ಕಮಲ್‌ ಹಾಸನ್‌ಗೆ ಇದೀಗ ಕೋಟಿ ಕೋಟಿ ಲಾಸ್‌ ಆಗಿದೆ. ಇದನ್ನು ಹೇಗಾದರೂ ಮಾಡಿ ತಮಿಳುನಾಡಿನಲ್ಲಿ ಸಕ್ಸಸ್‌ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಅವರಿಗೆ ಎದುರಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.