ನಾನು ಕೊಡುವ ಏಟಿಗೆ ಮತ್ತೆ ಮತ್ತೆ ಬೇಕು ಅಂತಾರೆ, ಕಾಮಿ ಸ್ವಾಮೀಜಿಯ WhatsApp Chat ಬಹಿರಂಗ
ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ವಯಂಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ಕೊನೆಗೂ ಪೊಲೀಸರ ಬಲೆಗೆ ಬಿದ್ದರು. 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದ ಬಳಿಕ, ಸ್ವಾಮೀಜಿ 50 ದಿನಗಳ ಕಾಲ ತಲೆಮರೆಸಿಕೊಂಡಿದ್ದರು. ಈ ಅವಧಿಯಲ್ಲಿ ಅವರು 15 ಹೋಟೆಲ್‌ಗಳನ್ನು ಬದಲಾಯಿಸಿ, CCTV ಕ್ಯಾಮೆರಾ ಇಲ್ಲದ ಸ್ಥಳಗಳಲ್ಲಿ ಅಡಗಿ ವಾಸ ಮಾಡುತ್ತಿದ್ದರು ಎಂಬ ಮಾಹಿತಿ ಹೊರಬಂದಿದೆ. ಕೊನೆಗೆ ಆಗ್ರಾದಲ್ಲಿದ್ದ ಹೋಟೆಲ್‌ನಿಂದ ಭಾನುವಾರ ಬೆಳಿಗ್ಗೆ ಬಂಧಿಸಲ್ಪಟ್ಟರು.
ಚೈತನ್ಯಾನಂದ ಸ್ವಾಮೀಜಿ, ಪಾರ್ಥಸಾರಥಿ ಎಂಬ ಹೆಸರಿನಿಂದಲೂ ಪ್ರಸಿದ್ಧರಾಗಿದ್ದರು. ಅವರು ದೆಹಲಿಯ ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ವ್ಯವಸ್ಥಾಪಕರಾಗಿದ್ದರು. ವಿದ್ಯಾರ್ಥಿನಿಯರ ಮೇಲೆ ಕಣ್ಣು ಇಡಲು ಹಾಸ್ಟೆಲ್‌ನಲ್ಲಿ CCTV ಅಳವಡಿಸಿದ್ದರೆಂಬ ಗಂಭೀರ ಆರೋಪ ಕೂಡ ಕೇಳಿಬಂದಿದೆ. ವಿದೇಶಿ ಪ್ರವಾಸದ ಆಮಿಷ ತೋರಿಸಿ ವಿದ್ಯಾರ್ಥಿನಿಯರನ್ನು ಕಿರುಕುಳ ನೀಡುತ್ತಿದ್ದರೆಂಬ ಸಾಕ್ಷಿಗಳು ಪೊಲೀಸರ ಕೈ ಸೇರಿವೆ.
ಪ್ರಕರಣ ಬೆಳಕಿಗೆ ಬರಲು ಕಾರಣವಾದದ್ದು, ಒಬ್ಬ ಹಳೆಯ ವಿದ್ಯಾರ್ಥಿನಿ ಸಂಸ್ಥೆಗೆ ಬರೆದ ಪತ್ರ. ನಂತರ ಹಲವಾರು ವಿದ್ಯಾರ್ಥಿನಿಯರು ತಮ್ಮ ಅನುಭವಗಳನ್ನು ಹಂಚಿಕೊಂಡು ದೂರು ನೀಡಿದರು. ವಾಯುಪಡೆ ಸಿಬ್ಬಂದಿಯ ಕುಟುಂಬದಿಂದ ಬಂದ ಕೆಲವು ವಿದ್ಯಾರ್ಥಿನಿಯರು ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾರಣ, ವಾಯುಪಡೆಯೇ ವಿಷಯದಲ್ಲಿ ಹಸ್ತಕ್ಷೇಪ ಮಾಡಿತು.
ಚೈತನ್ಯಾನಂದ ಸ್ವಾಮೀಜಿ ಬಂಧನಕ್ಕೂ ಮುನ್ನ ನಕಲಿ ನಂಬರ್‌ಪ್ಲೇಟ್ ಹೊಂದಿದ್ದ ವೋಲ್ವೊ ಕಾರು ಪೊಲೀಸರು ವಶಪಡಿಸಿಕೊಂಡಿದ್ದರು. 2009 ಮತ್ತು 2016 ರಲ್ಲಿಯೂ ಅವರ ವಿರುದ್ಧ ಇದೇ ರೀತಿಯ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದವು ಎಂಬುದು ಇನ್ನಷ್ಟು ಆಘಾತಕಾರಿ ವಿಚಾರ.ಸದ್ಯ ಪೊಲೀಸರು ಸ್ವಾಮೀಜಿಯನ್ನು ವಿಚಾರಣೆಗಾಗಿ ಕಸ್ಟಡಿಯಲ್ಲಿ ಇರಿಸಿದ್ದು, ಅವರಿಗೆ ಸಹಕರಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಬೆಂಬಲಿಗರ ಸಹಕಾರದಿಂದ ಸ್ವಾಮೀಜಿ 50 ದಿನಗಳ ಕಾಲ ಪೊಲೀಸರ ಕಣ್ಣ ತಪ್ಪಿಸಿದ್ದರು. ಈಗ ಆ ಬೆಂಬಲಿಗರ ಪತ್ತೆಹಚ್ಚುವ ಕಾರ್ಯವೂ ಆರಂಭವಾಗಿದೆ.