ಅಯೋಧ್ಯೆ ಪ್ರಾಣ ಪ್ರತಿಷ್ಠಾಪನೆಯ ಒಂದು ದಿನದ ಮುಂಚೆ ದೊಡ್ಡ ಸೂಚನೆ ಕೊಟ್ಟ ಕಂಗನಾ ರಣಾವತ್

 | 
Bs

ರಾಮಮಂದಿರದ ಉದ್ಘಾಟನೆಗೆ ಕ್ಷಣಗಣನೆ ಆರಂಭಗೊಂಡಿದೆ. ಐತಿಹಾಸಿಕ ಘಟನೆಗೆ ಇಡೀ ಭಾರತ ಎದುರು ನೋಡುತ್ತಿದ್ದು, ವಿದೇಶಗಳಿಂದಲೂ ಉತ್ಸಾಹ ವ್ಯಕ್ತವಾಗುತ್ತಿದೆ. ಜನವರಿ 22ರಂದು ಭಗವಾನ್​​ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ನೆರವೇರಲಿದ್ದು, ಕಲಾವಿದರು, ಕ್ರಿಕೆಟಿಗರು, ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗಿಯಾಗುವ ನಿರೀಕ್ಷೆಯಿದೆ. 

ಈಗಾಗಲೇ ಕೆಲವರು ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಇದೀಗ ಬಾಲಿವುಡ್ ನಟಿ ಕಂಗನಾ ರಣಾವತ್ ಅಯೋಧ್ಯೆ ತಲುಪಿದ್ದಾರೆ. ತೆರಳುವ ಮುನ್ನ ಮತ್ತು ತಲುಪಿದ ನಂತರ ವಿಮಾನ ನಿಲ್ದಾಣಗಳಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಏರ್​ಪೋರ್ಟ್​​​ಗಳಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಬಾಲಿವುಡ್​ ನಟಿ, ಬಹುನಿರೀಕ್ಷಿತ ಸಮಾರಂಭದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

​ಪೋರ್ಟ್​​ಗಳಿಂದ ವಿಡಿಯೋಗಳು ಹೊರಬರುತ್ತಿವೆ. ರಾಮಮಂದಿರದ ಮಹತ್ವದ ಬಗ್ಗೆ ಮಾತನಾಡಿದ ನಟಿ ಕಂಗನಾ ರಣಾವತ್​, ಇದು ನವ ಯುಗದ ಪ್ರಾರಂಭವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ. ನಟಿಯ ಪ್ರಕಾರ, ರಾಮಮಂದಿರ ಕೇವಲ ಪ್ರತಿಮೆಯಲ್ಲ, ಬದಲಿಗೆ ಅಗಾಧ ಪ್ರಜ್ಞೆಯ ಸಾಕಾರ ಕ್ಷಣ. ಹಾಗಾಗಿ ಈ ಘಳಿಗೆ ಭಾರತದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ಇದು ಮಿತಿಯಿಲ್ಲದ ಸಂತಸ, ವರ್ಣನಾತೀತ ಸಂತೋಷ ಸೃಷ್ಟಿಸುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಪಾಪರಾಜಿಗಳು ಹಂಚಿಕೊಂಡಿರುವ ಮತ್ತೊಂದು ವಿಡಿಯೋದಲ್ಲಿ, ಆಯೋಧ್ಯೆಯ ದರ್ಶನ ಪಡೆಯಲು ಹಲವು ಜನ್ಮಗಳ ಪುಣ್ಯ ಮಾಡಿರಬೇಕು. ನನಗಿದು ಸೌಭಾಗ್ಯದ ಕ್ಷಣ. ಕಾರ್ಯಕ್ರಮ ಪೂರ್ಣಗೊಳ್ಳುವವರೆಗೂ ಅಯೋಧ್ಯೆಯಲ್ಲೇ ಇರಲಿರುವೆ ಎಂದು ತಿಳಿಸಿದ್ದಾರೆ.ಕಂಗನಾ ರಣಾವತ್ ಅಲ್ಲದೇ, ಅಮಿತಾಭ್​ ಬಚ್ಚನ್, ರಿಷಬ್​ ಶೆಟ್ಟಿ, ರಾಮ್ ಚರಣ್, ರಜನಿಕಾಂತ್, ರಣ್​​ಬೀರ್ ಕಪೂರ್, ಆಲಿಯಾ ಭಟ್, ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ, ಜಾಕಿ ಶ್ರಾಫ್​​ ಫ್ಯಾಮಿಲಿ, ಆಯುಷ್ಮಾನ್ ಖುರಾನಾ ಸೇರಿದಂತೆ ವಿವಿಧ ಕ್ಷೇತ್ರಗಳ ಖ್ಯಾತನಾಮರಿಗೆ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗಲು ಆಹ್ವಾನಿಸಲಾಗಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.