'ಬ್ರಾಹ್ಮಣ ಸಮುದಾಯದ ಕನ್ನಡದ ನಟಿ' ಇವತ್ತು ಕ್ರೈಸ್ತ ಧರ್ಮದ ಮುಖ್ಯ ಕೌನ್ಸಿಲರ್

 | 
Gd

ಕಲ್ಯಾಣ ಮಂಟಪ, ಶ್ರೀರಾಮ ಚಂದ್ರ, ಸಿಡಿದೆದ್ದ ಪಾಂಡವರು, ಲಾಲಿ, ನಿಶ್ಯಬ್ದ ಚಿತ್ರಗಳನ್ನು ನೋಡಿದಾಗ ನೆನಪಾಗೋದು ಈ ನಟಿಯ ಮುದ್ದು ಮುಖ. ಒಂದು ಕಾಲದಲ್ಲಿ ಸಿನಿಮಾರಂಗದಲ್ಲಿ ತಮ್ಮ ಸೌಂದರ್ಯದಿಂದಲೇ ಮನೆಮಾತಾಗಿದ್ದ ನಟಿ ಮೋಹಿನಿ  ಇಂದು ಸಂಪೂರ್ಣ ವೈರಾಗ್ಯದೆಡೆಗೆ ವಾಲಿದ್ದಾರೆ.

90ರ ದಶಕದ ಡ್ರೀಮ್ ಗರ್ಲ್‌ ನಟಿ ಮೋಹಿನಿ ಯಾರಿಗೆ ಗೊತ್ತಿಲ್ಲ. ಕನ್ನಡ ಮಾತ್ರವಲ್ಲ ದಕ್ಷಿಣ ಭಾರತದ ಭಾಷೆಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ದೊಡ್ಡ ಮಟ್ಟದ ಯಶಸ್ಸು ಸಂಪಾದನೆ ಮಾಡಿದ್ದರು. ಚೈನ್ನೈನ ತಂಜಾವೂರಿನಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಮಹಾಲಕ್ಷ್ಮೀ ಶ್ರೀನಿವಾಸನ್‌ ಎನ್ನುವ ಹೆಸರಿನಲ್ಲಿ ಜನಿಸಿದ್ದ ಮೋಹಿನಿ ಇಂದು ಸಂಪೂರ್ಣವಾಗಿ ಅಮೆರಿಕದ ಪ್ರಜೆಯಾಗಿದ್ದಾರೆ.

2011ರಲ್ಲಿ ಮಲಯಾಳಂನ ಕಲೆಕ್ಟರ್‌ ಸಿನಿಮಾವೇ ಕೊನೆ. ಅದಾದ ಬಳಿಕ ಮೋಹಿನಿ ಯಾವ ಸಿನಿಮಾದಲ್ಲೂ ನಟಿಸಿಲ್ಲ. ಅದಕ್ಕೆ ಕಾರಣವೂ ಇದೆ.ಆ ಬಳಿಕ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ ಧ್ಯಾನದ ಮೊರೆ ಹೋದ ಮೋಹಿನಿ ಈಗ ಅಮೆರಿಕದಲ್ಲಿ ಕ್ರೈಸ್ತ ಧರ್ಮದ ಪ್ರಚಾರಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಇನ್ನು ನಟಿ ಮೋಹಿನಿ ಅವರು ನೀಡಿರುವ ಪ್ರವಚನಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ. ಕ್ಯಾಥೋಲಿಕ್‌ ಸ್ಪೀಕರ್ಸ್‌ ಎನ್ನುವ ವೆಬ್‌ಸೈಟ್‌ ಇವರ ಪ್ರವಚನವನ್ನು ಪ್ರಕಟಿಸಿದೆ. ಒಂದು ಕಾಲದಲ್ಲಿ ಸಿನಿಮಾ, ನೃತ್ಯ, ಸಂಗೀತ ಕ್ಷೇತ್ರದಲ್ಲಿ ಮಿಂಚಿದ್ದ ನಟಿ ಮೋಹಿನಿ ಇಂದು ಎಲ್ಲವನ್ನೂ ತೊರೆದು ಕ್ರೈಸ್ತ ಧರ್ಮದ ಪ್ರಚಾರಕಿಯಾಗಿ ವೈರಾಗ್ಯದೆಡೆಗೆ ಸಾಗುತ್ತಿರುವ ಬಗ್ಗೆ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.