51ನೇ ವಸಂತದಲ್ಲಿ ದುಬೈಗೆ ಹೋಗಿ ಸಿಹಿಸುದ್ದಿ ಕೊಟ್ಟ ಕನ್ನಡದ ನಟಿ ತಾರಾ, ಫಿದಾ ಆದ ಗಂಡ

 | 
Bjj
ನಟಿ ತಾರಾ ಅನುರಾಧ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ ಬಾಲ ನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು, ನಾಯಕಿಯಾಗಿ, ವಿಲನ್ ಆಗಿ, ಕಾಮಿಡಿ ಪಾತ್ರದಲ್ಲಿ, ಪೋಷಕಪಾತ್ರಗಳಲ್ಲಿ ನಟಿಸಿ ಜನಮನ ಗೆದ್ದ ನಟಿ ತಾರಾ ಅನುರಾಧ ನಟಿ ತಾರಾ ಅವರು 80ರ ದಶಕದಿಂದ ಇವತ್ತಿನವರೆಗೂ ಕೊಟ್ಟಂತಹ ಎಲ್ಲಾ ಪಾತ್ರಗಳಿಗೂ ಜೀವ ತುಂಬುತ್ತಾ, ಆ ಪಾತ್ರದಲ್ಲಿ ಜೀವಿಸಿದ ನಟಿ ಇವರು. 
ಇನ್ನು ನಟಿಯ ಮೂಲ ಹೆಸರು ಅನುರಾಧ, ಸಿನಿಮಾಕ್ಕಾಗಿ ತಾರ ಆದರು. ಅದ್ಭುತ ನಟನೆಗಾಗಿ ಇವರಿಗೆ ರಾಷ್ಟ್ರಪ್ರಶಸ್ತಿ ರಾಜ್ಯಪ್ರಶಸ್ತಿ, ಫಿಲಂಫೇರ್ ಅವಾರ್ಡ್ ಗಳು ಸಹ ಒದಗಿ ಬಂದಿದೆ. ಈ ಮಾಹಿತಿಗಳು ನಿಮಗೆ ಗೊತ್ತೇ ಇದೆ. ಸದ್ಯ ಸಿನಿಮಾಗಳ ಜೊತೆಗೆ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿರುವ ನಟಿ ತಾರ ಇತ್ತೀಚೆಗೆ ತಮ್ಮ ಎಂಗೇಜ್ ಮೆಂಟ್ ಆನಿವರ್ಸರಿಯನ್ನು ದುಬೈನಲ್ಲಿ ತಮ್ಮ ಸ್ನೇಹಿತರ ಜೊತೆ ಸೆಲೆಬ್ರೇಟ್ ಮಾಡಿದ್ದಾರೆ. 
ನಟಿ ತಾರಾ ಹಾಗೂ ಪತಿ ವೇಣು ಹಾಗೂ ನಿರೂಪಕಿ ಅನುಶ್ರೀ ಹಾಗೂ ಇನ್ನಿತರ ಸ್ನೇಹಿತರಾದ ಪೀಟರ್, ಹರೀಶ್, ಕಾರ್ತಿಕ್, ಭರತ್, ದೀಪಿಕಾ ಮತ್ತು ದೀಪಕ್ ಗೌಡ ಜೊತೆಗೆ ಸಣ್ಣದಾಗಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಇನ್ನು ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ಹಾಗೂ ವಿಡಿಯೋ ಪೋಸ್ಟ್ ಮಾಡಿರುವ ತಾರಾ ಅವರು ನಮ್ಮ ಎಂಗೇಜ್ ಮೆಂಟ್ ಆನಿವರ್ಸರಿಯನ್ನು ಪ್ರೀತಿಯಿಂದ ಸೆಲೆಬ್ರೇಟ್ ಮಾಡಿದರು. ಥ್ಯಾಂಕ್ಯೂ ಎಲ್ಲರಿಗೂ ಎಂದು ಹೇಳಿದ್ದಾರೆ.  
ನಟಿ ತಾರಾ ಅವರು ತಮ್ಮ 2005ರಲ್ಲಿ ಖ್ಯಾತ ಛಾಯಾಗ್ರಾಹಕ ಎಚ್ ಡಿ ವೇಣು ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.. ಇವರಿಗೆ ಮುದ್ದಾದ ಒಬ್ಬ ಮಗ ಕೂಡ ಇದ್ದಾನೆ.ತಾರಾ ಹಾಗೂ ವೇಣು ದಂಪತಿಗಳು ಕಳೆದ ವರ್ಷ ಹೊಸ ಕಾರು ಖರೀದಿಸಿದ್ದರು, ಅಲ್ಲದೇ ಹೊಸ ಮನೆಯ ಗೃಹಪ್ರವೇಶವನ್ನು ಅದ್ಧೂರಿಯಾಗಿ ನೆರವೇರಿಸಿದ್ದು, ನಂತರ ಚಿತ್ರರಂಗದ ಹಿರಿ-ಕಿರಿಯ ನಟಿಯರನ್ನು ಆಹ್ವಾನಿಸಿ ಸಂಭ್ರಮಿಸಿದ್ದರು. ಅದರ ಫೋಟೋ ಕೂಡ ಎಲ್ಲೆಡೆ ವೈರಲ್ ಆಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.