ದುಬೈ ಶೇಖ್ ಜೊತೆ ಕನ್ನಡದ ನಟಿ ಮದುವೆ; ಈತ ಕೋಟಿಯ ಒಡೆಯ

 | 
Jj

ಸೆಲೆಬ್ರಿಟಿಗಳ ನಿಶ್ಚಿತಾರ್ಥ, ಮದುವೆ, ಪ್ರೇಮಕಥೆಗಳ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡುತ್ತವೆ. ‘ಗಂಗೆ ಬಾರೆ ತುಂಗೆ ಬಾರೆ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದ ಸುನೈನಾ ಅವರು ದುಬೈ ಮೂಲದ ಯೂಟ್ಯೂಬರ್, ಸೋಶಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್ ಖಲೀದ್ ಅಲ್ ಅಮೇರಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸೋಮವಾರ ಈ ನಿಶ್ಚಿತಾರ್ಥ ನೆರವೇರಿದೆ ಎನ್ನಲಾಗುತ್ತಿದೆ.

ಜೂನ್ 5ರಂದು ಸುನೈನಾ ಪೋಸ್ಟ್ ಒಂದನ್ನು ಮಾಡಿದ್ದರು. ಅವರು ಪುರುಷನೊಬ್ಬನ ಕೈ ಹಿಡಿದಿದ್ದಾರೆ. ಈ ಫೋಟೋಗೆ ಬೀಗದ ಚಿತ್ರದ ಎಮೋಜಿ ಹಾಕಿದ್ದರು. ಈ ಮೂಲಕ ತಾವು ಎಂಗೇಜ್ ಎಂದು ಪರೋಕ್ಷವಾಗಿ ಹೇಳಿದ್ದರು. ಈ ಫೋಟೋನ ಖಲೀದ್ ಅವರು ಲೈಕ್ ಮಾಡಿದ್ದಾರೆ. ಈಗ ಖಲೀದ್ ಅಲ್ ಅಮೇರಿ ಕೂಡ ಇದೇ ರೀತಿಯ ಫೋಟೋ ಹಾಕಿದ್ದಾರೆ.

ಈ ಮೂಲಕ ಇಬ್ಬರ ಎಂಗೇಜ್​ಮೆಂಟ್ ಸುದ್ದಿ ಹರಿದಾಡಿದೆ. ಖಲೀದ್ ಅವರ ಮೊದಲ ಪತ್ನಿ ಸಲಾಮಾ ಮೊಹ್ಮದ್ ಜುಲೈ 1ರಂದು ವಿಚ್ಛೇದನದ ವಿಚಾರ ರಿವೀಲ್ ಮಾಡಿದ್ದಾರೆ. ಈ ವರ್ಷ ಫೆಬ್ರವರಿ 14ರಂದು ಇಬ್ಬರೂ ಬೇರೆ ಆಗಿದ್ದಾಗಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇದೆಲ್ಲವೂ ಖಲೀದ್ ಅವರ ಎರಡನೇ ಮದುವೆ ಬಗ್ಗೆ ಚರ್ಚೆ ಹುಟ್ಟುಹಾಕುವಂತೆ ಮಾಡಿದೆ.

ಖಲೀದ್ ಅಲ್ ಅಮೇರಿ ಅವರು ಸ್ಟ್ಯಾನ್​ಫೋರ್ಡ್ ವಿಶ್ವ ವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. ಖಲೀದ್ ಹಾಗೂ ಸಲಾಮಾ ಇಬ್ಬರೂ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಖಲೀದ್​ಗೆ 31 ಲಕ್ಷಕ್ಕೂ ಅಧಿಕ ಹಿಂಬಾಲಕರು ಇದ್ದಾರೆ.

ಇನ್ನು ನಟಿ ಸುನೈನಾ ಅವರು 2005ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಕುಮಾರ್ vs ಕುಮಾರಿ’ ಅವರ ನಟನೆಯ ಮೊದಲ ಸಿನಿಮಾ. 2008ರಲ್ಲಿ ರಿಲೀಸ್ ಆದ ಕನ್ನಡದ ‘ಗಂಗೆ ಬಾರೆ ತುಂಗೆ ಬಾರೆ’ ಚಿತ್ರದಲ್ಲಿ ಅವರು ನಟಿಸಿದ್ದರು. ಇತ್ತೀಚೆಗೆ ಬಿಡುಗಡೆ ಆದ ಕ್ರೈಮ್ ಥ್ರಿಲ್ಲರ್ ಸೀರಿಸ್ ‘ಇನ್​ಸ್ಪೆಕ್ಟರ್ ರಿಷಿ’ಯಲ್ಲಿ ಅವರು ನಟಿಸಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadh.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.