ದೊಡ್ಡ ಸಮಸ್ಯೆಯಿಂದ ಪಾರಾದ ಕನ್ನಡದ ನಟಿ, ಕೊರಗಜ್ಜ ದೈವದ ಶಕ್ತಿಗೆ ಬಾರಿ ಮೆಚ್ಚುಗೆ

 | 
H

ಕಾಂತಾರ ಸಿನಿಮಾ ಬಳಿಕ ಕೊರಗಜ್ಜನ ದೈವಸ್ಥಾನಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಅದರಲ್ಲೂ ಚಂದನವನದ ಕಲಾವಿದರೂ ಆಗಾಗ ಭೇಟಿ ನೀಡುತ್ತಲೇ ಇರುತ್ತಾರೆ. ಮಾಲಾಶ್ರೀ, ಶಿವರಾಜ್‌ಕುಮಾರ್‌, ಶ್ರುತಿ, ಅನುಶ್ರೀ, ಪ್ರೇಮಾ, ರಚಿತಾ ರಾಮ್ ಹೀಗೆ ಹಲವರು ಭೇಟಿ ನೀಡಿ ದೈವದ ಆಶೀರ್ವಾದ ಪಡೆದು ಮರಳುತ್ತಿರುತ್ತಾರೆ. ಇದೀಗ ರಕ್ಷಿತಾ ಪ್ರೇಮ್‌ ಸಹ ಕುತ್ತಾರು ಕ್ಷೇತ್ರಕ್ಕೆ ಆಗಮಿಸಿ ಕೊರಗಜ್ಜನ ದರ್ಶನ ಪಡೆದಿದ್ದಾರೆ.

ಇತ್ತೀಚೆಗೆ ತಮ್ಮ ಆಪ್ತರ ಜತೆಗೆ ಕುತ್ತಾರಿನ ಕೊರಗಜ್ಜ ದೈವದ ಆದಿಸ್ಥಳಕ್ಕೆ ಭೇಟಿ ನೀಡಿದ ರಕ್ಷಿತಾ ಪ್ರೇಮ್‌, ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅವರು ಕುತ್ತಾರು ಭಂಡಾರ ಬೈಲಿನ ಪಂಜಂದಾಯ, ಬಂಟ, ವೈದ್ಯನಾಥ ದೈವಸ್ಥಾನಕ್ಕೆ ಭೇಟಿ ನೀಡಿ ದೈವದ ದರ್ಶನ ಪಡೆದರು. ಈ ವೇಳೆ ನಾನು ಕೊರಗಜ್ಜನ ಆದಿಸ್ಥಳ, ಭಂಡಾರ ಬೈಲು ಪಂಜಂದಾಯ, ಬಂಟ, ವೈದ್ಯನಾಥ ಕ್ಷೇತ್ರಕ್ಕೆ ಮೂರು ತಿಂಗಳಿಗೊಮ್ಮೆ ಬಂದೆ ಬರ್ತೀನಿ ಎಂದು ರಕ್ಷಿತಾ ಪ್ರೇಮ್ ಹೇಳಿಕೊಂಡರು.

ಕುತ್ತಾರಿನ ಕೊರಗಜ್ಜ ಮತ್ತು ಪಂಜಂದಾಯ, ಬಂಟ ಕ್ಷೇತ್ರದ ಕಾರಣೀಕ ಹೇಳಲು ಅಸಾಧ್ಯ. ಕೊರಗಜ್ಜನೇ ಇಲ್ಲಿಗೆ ಮೂರು ತಿಂಗಳಿಗೊಮ್ಮೆ ನನ್ನನ್ನು ಕರೆಸಿಕೊಳ್ಳುತ್ತಾನೆ ಎಂದು ನಾನು ನಂಬಿದ್ದೇನೆ. ವಿಶೇಷವಾಗಿ ಭಂಡಾರ ಬೈಲಿನ ಪಂಜಂದಾಯ ದೈವದ ಕ್ಷೇತ್ರವು ಪ್ರಶಾಂತವಾಗಿ ಮನಸಿಗೆ ನೆಮ್ಮದಿ ಕೊಡುತ್ತದೆ. ಹಾಗಾಗಿ ಕುತ್ತಾರಿಗೆ ಭೇಟಿ ನೀಡಿದಾಗ ಪಂಜಂದಾಯ ಕ್ಷೇತ್ರದಲ್ಲಿ ಕುಳಿತು ಹೋಗುತ್ತೇನೆ ಎಂದರು.

ಮುಂದುವರಿದು ಮಾತನಾಡುವ ರಕ್ಷಿತಾ, ದೈವದ ಬಳಿ ಹೆಚ್ಚಿನ‌ ಬೇಡಿಕೆ ಏನೂ ಇಡಲ್ಲ, ಎಲ್ಲವನ್ನೂ ಕೊಟ್ಟ ದೈವ, ದೇವತೆಗಳು ನನ್ನ ಕೈಬಿಡದಂತೆ ಪ್ರಾರ್ಥಿಸುತ್ತೇನೆ. ಇಲ್ಲಿಂದ ಪ್ರತೀ ಬಾರಿ ಕಟೀಲು, ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡುವ ವಾಡಿಕೆ ನನ್ನದು ಎಂದು ರಕ್ಷಿತಾ ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.