ಕನ್ನಡದ ಖ್ಯಾತ ಆಂಕರ್ ನಿರಂಜನ್ ದೇಶಪಾಂಡೆ ಮುಖಕ್ಕೆ ಉಗಿದಂತೆ ಮಾತನಾಡಿದ ಸಂಗೀತ ಶೃಂಗೇರಿ

 | 
ು ವರ ದ

ಬಿಗ್ ಬಾಸ್ ಕನ್ನಡ 10 ಶೋ ಸ್ಪರ್ಧಿ ಸಂಗೀತಾ ಶೃಂಗೇರಿ ಹೊಸಪೇಟೆಯಲ್ಲಿ ನಡೆದ ಕೆಂಡಸಂಪಿಗೆ ಸೀರಿಯಲ್ ಸಂತೆ’ಯಲ್ಲಿ ಭಾಗಿಯಾಗಿದ್ದರು. ಆ ವೇಳೆ ಹೊಸಪೇಟೆ ಜನರಿಗೆ ನಿರಂಜನ್ ಅವರು ಸಂಗೀತಾ ಬಗ್ಗೆ ಕೆಲ ಪ್ರಶ್ನೆಗಳನ್ನು ಕೇಳಿದರು. ಅದರಲ್ಲಿ ಒಂದು ಪ್ರಶ್ನೆ ಮಾತ್ರ ಸಂಗೀತಾಗೆ ಸಿಟ್ಟು ತರಿಸಿದೆ. ನಿರಂಜನ್ ಕೇಳಿದ ಪ್ರಶ್ನೆಗೆ ಅವರು ಒಂದು ಲುಕ್ ಕೊಟ್ಟಿದ್ದು, ಅದನ್ನು ನೋಡಿ ನಿರಂಜನ್ ಅವರೇ ಗಾಬರಿಪಟ್ಟಿಕೊಂಡರು.

ಸಂಗೀತಾ ಅವರು ರೆಬಲ್ ಆಗಿ ನಿರ್ಧಾರಗಳನ್ನು ತಗೋತಿದ್ರು, ಹೌದಾ?ಸಂಗೀತಾಗೆ ಕೋಪ ಜಾಸ್ತಿ ಅಲ್ವಾ? ಅಂತ ನಿರಂಜನ್ ಅವರು ಪ್ರಶ್ನೆಗಳನ್ನು ಕೇಳಿದ್ದರು. ಆಗ ಹೊಸಪೇಟೆ ಜನರು ಹೌದು ಎಂದಿದ್ದಾರೆ. ಇದಾದ ನಂತರದಲ್ಲಿ ಸಂಗೀತಾರನ್ನು ಮದುವೆಯಾಗುವ ಹುಡುಗ ಇಲ್ಲಿಯೇ ಇದ್ದಾನೆ, ಹೌದಾ ಎಂದು ಪ್ರಶ್ನೆ ಕೇಳಿದ್ದಾರೆ. ನಿರಂಜನ್ ಈ ಪ್ರಶ್ನೆ ಕೇಳಿದ ಬಳಿಕ ಸಂಗೀತಾ ಅವರು ಸಿಟ್ಟಿನಿಂದ ಒಂದು ಲುಕ್ ನೀಡಿದ್ದಾರೆ. ಆ ಲುಕ್ ನೋಡಿ ನಿರಂಜನ್ ಅವರೇ ಹೆದರಿದ್ದಾರೆ.

ಸಂಗೀತಾ ಗುರಾಯಿಸ್ತಿದ್ದಾರೆ, ಬಿಡ್ರೋ ಲೋ ಅಂತ ನಿರಂಜನ್ ಅವರು ಹೊಸಪೇಟೆ ಜನರಿಗೆ ಹೇಳಿದ್ದಾರೆ. ವಾಹಿನಿಯು ಬಿಟ್ಟಿರುವ ಈ ಪ್ರೋಮೋ ನೋಡಿ ವೀಕ್ಷಕರು ಕೂಡ ನಕ್ಕಿದ್ದಾರೆ. ಸಂಗೀತಾ ನೋಡಿ ನಿರಂಜನ್ ಕೂಡ ಹೆದರಿದರು ಅಂತ ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸೀರಿಯಲ್ ಸಂತೆ ಭರ್ಜರಿಯಾಗಿ ನಡೆದಿದೆ. ನಿರಂಜನ್ ದೇಶಪಾಂಡೆ ಅವರು ಸಂಗೀತಾ ಬಳಿ ಕಾರ್ತಿಕ್ ಬಗ್ಗೆ ಪ್ರಶ್ನೆ ಕೇಳಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 

ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಜಗಳ ಆಡಿಕೊಂಡು ಈ ಜೋಡಿ ಹೊರಗಡೆ ಬಂದ ಬಳಿಕವೂ ಮಾತನಾಡಿರಲಿಲ್ಲ. ಈಗ ಈ ಸಂತೆಯಲ್ಲಿ ಮಾತನಾಡಿಕೊಂಡಿದೆಯಾ? ಇವರಿಬ್ಬರ ಮಧ್ಯೆ ಏನಾದರೂ ಮಾತು ಆಯ್ತಾ? ಎಂಬ ಪ್ರಶ್ನೆಗಳಿವೆ. ಅದಕ್ಕೆಲ್ಲ ಉತ್ತರ ಕಂಡುಕೊಳ್ಳಲು ಸೀರಿಯಲ್ ಸಂತೆ ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.