ಸಿಹಿಸುದ್ದಿ ಕೊಟ್ಟ ಕನ್ನಡದ ಜನ ಮೆಚ್ಚಿದ ಜೋಡಿ; ಸೃಜನ್ ಲೋಕೇಶ್ ಫಿದಾ

 | 
Hu

ಕನ್ನಡ ಹೆಸರಾಂತ ಧಾರಾವಾಹಿ ಸೀತಾರಾಮದಲ್ಲಿ ನಟಿ ಪೂಜಾ ಲೋಕೇಶ್ ಭಾರ್ಗವಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ,ನಾಯಕ ರಾಮನ ಚಿಕ್ಕಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಪೂಜಾ ಲೋಕೇಶ್ ತಮ್ಮ ಮನೋಜ್ಞ ಅಭಿನಯದಿಂದ ಮನೆ ಮಾತಾಗಿದ್ದಾರೆ.

ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡಿರುವ ನಟಿ ಪೂಜಾ ಲೋಕೇಶ್ ಬಗ್ಗೆ ಅನೇಕ ಜನರಿಗೆ ಗೊಂದಲಗಳಿವೆ. ಇವರಿಗೆ ಮದುವೆಯಾಗಿದೆಯೇ? ಅಥವಾ ಇನ್ನೂ ಸಿಂಗಲ್ ಆಗಿದ್ದಾರಾ? ಎಂದೆಲ್ಲಾ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅಂದಹಾಗೆ ನಟಿ ಪೂಜಾ ಲೋಕೇಶ್ ರಿಯಲ್ ಲೈಫ್’ನಲ್ಲಿ ಸಿಂಗಲ್ ಆಗಿ ಬದುಕುತಿದ್ದಾರೆ. ವಯಸ್ಸು 45 ಆದ್ರೂ ಇನ್ನೂ ಸಿಂಗಲ್ ಆಗಿರುವುದೇಕೆ ಎಂಬ ಪ್ರಶ್ನೆಗಳು ಆಗಾಗ್ಗ ಕೇಳಿಬರುವುದುಂಟು.

ಇನ್ನು ಕೆಲವೊಂದಿಷ್ಟು ಯೂಟ್ಯೂಬ್ ಚಾನೆಲ್’ಗಳು, ಪೂಜಾ ಲೋಕೆಶ್ ಅವರಿಗೆ ಮದುವೆಯಾಗಿದೆ, ವಿಚ್ಛೇದನ ಪಡೆದುಕೊಂಡಿದ್ದಾರೆ ಎಂದೆಲ್ಲಾ ವಿಡಿಯೋ ಮಾಡಿ ಹರಿಬಿಟ್ಟಿದ್ದುಂಟು. ಆದರೆ ಇವೆಲ್ಲ ಸತ್ಯಕ್ಕೆ ದೂರವಾದ ಮಾಹಿತಿ ಎಂದು ಕೆಲ ಮೂಲಗಳು ಹೇಳಿವೆ. ಈ ಎಲ್ಲಾ ವದಂತಿಗೆ ಪೂಜಾ ಲೋಕೇಶ್ ಅವರೇ ಸ್ಪಷ್ಟನೆ ನೀಡಬೇಕಿದೆ ಸದ್ಯ ತಮ್ಮ ಸೃಜನ್ ಲೋಕೇಶ್, ತಾಯಿ ಗಿರಿಜಾ ಲೋಕೇಶ್ ಜೊತೆ ವಾಸಿಸುತ್ತಿರುವ ಪೂಜಾ ಲೋಕೇಶ್, ಇನ್ನೂ ಯಾಕೆ ಮದುವೆಯಾಗಿಲ್ಲ ಎಂಬುದಕ್ಕೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಪೂಜಾ ತಂದೆ ಲೋಕೇಶ್ ಅವರು ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದವರು. ಅವರ ತಾಯಿ ಗಿರಿಜಾ ಲೋಕೇಶ್ ಕೂಡ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಅನೇಕರು ಪೂಜಾ ನಟನೆಯನ್ನು ನೋಡಿ ತಂದೆ-ತಾಯಿಗೆ ಹೋಲಿಕೆ ಮಾಡುತ್ತಿದ್ದಾರೆ. ಜನರು ಬರಮಾಡಿಕೊಂಡ ರೀತಿ ಖುಷಿ ನೀಡುತ್ತಿದೆ. ನನ್ನನ್ನು ಅನೇಕರು ನನ್ನ ತಂದೆ, ತಾಯಿಗೆ ಹೋಲಿಕೆ ಮಾಡುತ್ತಿದ್ದಾರೆ. 

ಇದಕ್ಕಿಂತ ಖುಷಿ ಇನ್ನೇನು ಬೇಕು? ನಾನು ಮಾಡುತ್ತಿರುವ ಭಾರ್ಗವಿ ಕ್ಯಾರೆಕ್ಟ್​​ನ ಹೇಟ್ ಮಾಡುವವರೂ ಇದ್ದಾರೆ. ನೆಗೆಟಿವ್ ಪಾತ್ರವನ್ನು ಜನರು ದ್ವೇಷಿಸಿದರೆ ನಾವು ಗೆದ್ದಂತೆ ಅನ್ನೋದು ಪೂಜಾ ಅಭಿಪ್ರಾಯ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.