ಕನ್ನಡದ ಕೋಟ್ಯಾಧಿಪತಿ ಮರು ಆರಂಭ; ಬುದ್ದಿವಂತನನ್ನು ಆಯ್ಕೆ ಮಾಡಿಕೊಂಡ ಟೀಮ್
Dec 3, 2024, 13:32 IST
|
ಬಿಗ್ಬಾಸ್ ಗಿಂತ ಹೆಚ್ಚು ಮನೆಮಂದಿಯನ್ನು ಸೆಳೆದ ಕನ್ನಡ ಕೋಟ್ಯಾಧಿಪತಿ ಸೀಸನ್ ಪುನೀತ್ ರಾಜ್ ಕುಮಾರ್ ಇಲ್ಲದಮೇಲೆ ಇನ್ನುಮುಂದೆ ನಡೆಯೋದೆ ಇಲ್ಲ ಅನ್ನೊ ಮಾತು ಕೇಳಿ ಬಂದಿತ್ತು. ಕನ್ನಡದ ಕೋಟ್ಯಾಧಿಪತಿ' ಕನ್ನಡಿಗರ ಮನೆ, ಮನಸ್ಸು ಗೆಲ್ಲುವ ಜೊತೆಗೆ ಬಡವರಿಗೆ ವರ ಎನ್ನುವಂತೆ ರೂಪುಗೊಂಡಿತ್ತು. ಅದರಲ್ಲೂ ಪುನೀತ್ ರಾಜ್ ಕುಮಾರ್ ಅವರ ನಿರೂಪಣೆಯ ಈ ಕಾರ್ಯಕ್ರಮ ನೋಡಲು ಕೋಟಿ ಕೋಟಿ ಕನ್ನಡಿಗರು ಕಾದು ಕೂತಿರುತ್ತಿದ್ದರು.
ಅಪ್ಪು ಪುನೀತ್ ರಾಜ್‌ಕುಮಾರ್ ಅವರು ಈಗ ನಮ್ಮ ಜೊತೆ ಇಲ್ಲ. 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಕೂಡ ನಡೆಯುತ್ತಿಲ್ಲ. ಪರಿಸ್ಥಿತಿ ಹೀಗಿದ್ದಾಗಲೇ, ಪುನೀತ್ ರಾಜ್‌ಕುಮಾರ್ ಅವರ ಜಾಗಕ್ಕೆ ಇವರೇ ಹೊಸ ಆಂಕರ್ ಅಂತೆ!ಕನ್ನಡದಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡಿ ಕೋಟಿ ಕೋಟಿ ಹಣ ಗೆಲ್ಲಬಹುದು, ಈ ಮೂಲಕ ತಮ್ಮ ಜೀವನದಲ್ಲಿ ಸೆಟಲ್ ಆಗಬಹುದು ಅಂತಾ ಕನಸು ಕಟ್ಟಿಕೊಂಡ ಜನರ ಸಂಖ್ಯೆಯೇ ಹೆಚ್ಚಾಗಿ ಇತ್ತು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಕೂಡ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಟ್ಟು, ಕನ್ನಡಿಗರ ಮನಸ್ಸನ್ನು ಕೂಡ ಗೆದ್ದಿದ್ದರು.
ಹೀಗಿದ್ದಾಗಲೇ, 2021 ರಲ್ಲಿ ಡಾ. ಪುನೀತ್ ರಾಜ್‌ಕುಮಾರ್ ಅಂದ್ರೆ ಅಪ್ಪು ಅವರು ಕನ್ನಡಿಗರನ್ನ ಬಿಟ್ಟು ಹೋದ ನಂತರದಲ್ಲಿ ಈ ಕಾರ್ಯಕ್ರಮ ಕೂಡ ಅನಾಥವಾಗಿತ್ತು... ಆದರೆ ಇದೀಗ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ಭರ್ಜರಿ ಆಂಕರ್ ರೆಡಿಯಾಗಿದ್ದಾರಂತೆ.ಇದೀಗ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರೇ ಆಂಕರ್ ಎಂಬ ಸುದ್ದಿ ಹಬ್ಬಿದ್ದು ಹಲ್‌ಚಲ್ ಕೂಡ ಶುರುವಾಗಿದೆ. ರಿಯಾಲಿಟಿ ಶೋಗಳಲ್ಲಿ ಕಿಚ್ಚ ಸುದೀಪ್ ಅವರನ್ನ ಮೀರಿಸುವ ಮತ್ತೊಬ್ಬ ಕನ್ನಡದ ನಿರೂಪಕ ಇಲ್ಲ ಅನ್ನೋದು ಅವರ ಅಭಿಮಾನಿ ಬಳಗದ ಮಾತು.
ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಅವರೇ ಆಂಕರ್ ಎಂಬ ಸುದ್ದಿ ಹಬ್ಬಿದ್ದರೂ, ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಗಳು ಸಿಕ್ಕಿಲ್ಲ. ಹೀಗಾಗಿ ಕುತೂಹಲ ಕೂಡ ಮತ್ತಷ್ಟು ಹೆಚ್ಚಾಗಿದ್ದು. ಇದಕ್ಕೆ ವಿವರಣೆ ಸಿಗಬೇಕು ಅಂದ್ರೆ ಮತ್ತಷ್ಟು ದಿನಗಳ ಕಾಲ ಫ್ಯಾನ್ಸ್ ಕಾಯಬೇಕಿದೆ. ಈಗಾಗಲೇ ಕಿಚ್ಚ ಸುದೀಪ್ ಅವರು, 'ಬಿಗ್‌ಬಾಸ್ ಕನ್ನಡ' ಕಾರ್ಯಕ್ರಮದ ನಿರೂಪಣೆಯನ್ನ ಇನ್ಮುಂದೆ ಮಾಡುವುದಿಲ್ಲ ಎಂದಿರುವುದು ಕೂಡ ಕುತೂಹಲ ಕೆರಳುವಂತೆ ಮಾಡಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.