ಚಂದನ್ ಶೆಟ್ಟಿ ಜೊತೆ engagement ಮಾಡಿಕೊಂಡ ಕನ್ನಡದ ಸೀರಿಯಲ್ ನಟಿ

 | 
Nz
ಕನ್ನಡ ಸಿನಿಮಾ ರಂಗ ಬೆಳ್ಳಿತೆರೆ ಎಂದು ಹೆಸರು ಮಾಡಿದ್ದರೆ, ಕನ್ನಡದ ಧಾರಾವಹಿ ಹಾಗೂ ಕನ್ನಡ ಚಾನಲ್‌ಗಳಲ್ಲಿ ಬರುವ ಕಾರ್ಯಕ್ರಮಗಳು ಕಿರುತೆರೆ ಎಂದು ಹೆಸರು ಮಾಡಿವೆ. ಇದೇ ನಮ್ಮ ಕನ್ನಡದ ಕಿರುತೆರೆ ಮೂಲಕ ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ಹೀಗಾಗಿಯೇ, ಕನ್ನಡ ಕಿರುತೆರೆ ಲೋಕ ಇಂಡಿಯಾ ಮಾತ್ರವಲ್ಲ ಜಗತ್ತಿನಾದ್ಯಂತ ಹೆಸರು ಮಾಡಿದೆ. ಹೀಗೆ ಇದ್ದಾಗಲೇ, ಕನ್ನಡ ಕಿರುತೆರೆ ನಟಿ ಸುಪ್ರೀತಾ ಸತ್ಯನಾರಾಯಣ್‌ ಅವರು ಸದ್ದಿಲ್ಲದೇ ದಿಢೀರ್ ಚಂದನ್ ಶೆಟ್ಟಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಅಂದಹಾಗೆ ನಟಿ ಸುಪ್ರೀತಾ ಸತ್ಯನಾರಾಯಣ್ ಅವರು ಸೀತಾ ವಲ್ಲಭ ಧಾರಾವಾಹಿ ಮೂಲಕ ದೊಡ್ಡ ಹೆಸರು ಮಾಡಿದ್ದರು. ಮೈಥಲಿ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದು, ಕನ್ನಡ ವೀಕ್ಷಕರಿಗೆ ಹತ್ತಿರವಾಗಿದ್ದರು. ಅಲ್ಲದೇ ಗಿರೀಶ್ ವೈರಮುಡಿ ನಿರ್ದೇಶನದ ರಹದಾರಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ಅಂದ್ರೆ ನಮ್ಮ ಕನ್ನಡ ಸಿನಿಮಾದ ಬೆಳ್ಳಿತೆರೆಗೆ ಕೂಡ ಎಂಟ್ರಿಯನ್ನ ಕೊಟ್ಟಿದ್ದರು ನಟಿ ಸುಪ್ರೀತಾ ಸತ್ಯನಾರಾಯಣ್ ಅವರು. ಹೀಗಿದ್ದಾಗಲೇ, ದಿಢೀರ್ ಭರ್ಜರಿ ಸುದ್ದಿ ನೀಡಿರುವ ನಟಿ ಸುಪ್ರೀತಾ ಸತ್ಯನಾರಾಯಣ್ ಚಂದನ್ ಶೆಟ್ಟಿ ಅವರ ಜೊತೆ ಎಂಗೇಜ್ ಆಗಿದ್ದು, ಶೀಘ್ರದಲ್ಲೇ ಮದುವೆ ಕೂಡ ಆಗಲಿದ್ದಾರಂತೆ.
ಮಾರ್ಚ್‌ ತಿಂಗಳಲ್ಲೇ ನಟಿ ಸುಪ್ರೀತಾ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಚಂದನ್ ಶೆಟ್ಟಿ ಎಂಬುವವರ ಜೊತೆ ಮದುವೆ ಆಗುತ್ತಿದ್ದಾರಂತೆ. ಈ ಬಗ್ಗೆ ನಟಿ ಸುಪ್ರೀತಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಮಾಹಿತಿಯನ್ನ ತಡವಾಗಿ ಹಂಚಿಕೊಂಡಿದ್ದಾರೆ. ನಟಿ ಸುಪ್ರೀತಾ ಸತ್ಯನಾರಾಯಣ್ ಮದುವೆ ಆಗ್ತಿರುವ ಚಂದನ್ ಶೆಟ್ಟಿ ಯಾರು ಎಂಬುದನ್ನು ನೋಡುವುದಾದ್ರೆ ಡಿಜಿಟಲ್ ಕ್ರಿಯೇಟರ್ ಅಂತಾ ನಟಿ ಸುಪ್ರೀತಾ ಅವರ ಭಾವಿ ಪತಿ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಹಾಕಿದ್ದಾರೆ. ಈ ಮೂಲಕ ನಟಿ ಸುಪ್ರೀತಾ ಸತ್ಯನಾರಾಯಣ್ ಅವರು ಭರ್ಜರಿಯಾಗಿ ಮದುವೆ ಆಗೋದಕ್ಕೆ ಸಿದ್ಧವಾಗಿದ್ದಾರೆ
ಹೊಸ ಚಾಪ್ಟರ್ ಇಲ್ಲಿಂದ ಶುರು. ಹಲೋ ಎನ್ನುವ ನಿನ್ನ ಧ್ವನಿಯಿಂದಲೇ ಪ್ರೀತಿ ಶುರುವಾದ ಬಗ್ಗೆ ಹೇಳಲಾ ಅಥವಾ ನಿನ್ನ ನಗು ನೋಡಿದಾಗ ನನ್ನ ಹೊಟ್ಟೆಯೊಳಗಡೆ ಚಿಟ್ಟೆ ಹಾರಾಟ ಮಾಡೋ ಬಗ್ಗೆ ಹೇಳಲಾ? ನಿನ್ನ ನಗು ಅಂದ್ರೆ ನನಗೆ ತುಂಬ ಇಷ್ಟ. ಆ ನಗುಗೋಸ್ಕರ ನಾನು ಏನು ಬೇಕಿದ್ರೂ ಮಾಡುವೆ. ಖುಷಿಗೋಸ್ಕರ ನಾನು ದೇವರ ಬಳಿ ಪ್ರಾರ್ಥಿಸಿದೆ. ಅವನು ನನಗೆ ನಿಮ್ಮನ್ನು ಕೊಟ್ಟ. ನನ್ನ ಜೀವನಕ್ಕೆ ಬಂದಿದ್ದಕ್ಕೆ, ನಿಜವಾದ ಲವ್ ಏನು ಎಂದು ಅರ್ಥ ಮಾಡಿಸಿದ್ದಕ್ಕೆ, ನನ್ನ ಜೀವನವನ್ನು ಸುಂದರ ಮಾಡಿದ್ದಕ್ಕೆ ಥ್ಯಾಂಕ್ಯೂ ಎಂದು ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಡಿಜಿಟಲ್ ಕ್ರಿಯೇಟರ್, ಸಾಫ್ಟ್‌ವೇರ್ ಉದ್ಯೋಗಿ ಚಂದನ್ ಶೆಟ್ಟಿ ಅವರನ್ನು ಮದುವೆಯಾಗಲು ನಟಿ ಸಜ್ಜಾಗಿದ್ದಾರೆ. ಕೊಡಗು ಮೂಲದ ಚಂದನ್ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.