ಕೋಟಿಯ ಒಡೆಯನ ಕೈಹಿಡಿದ ಕನ್ನಡ ಸುರಸುಂದರಾಂಗಿ, ಕುಣಿದು ಕುಪ್ಪಳಿಸಿದ ಕನ್ನಡಿಗರು

ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿರ್ಮಾಪಕ ಜಾಕಿ ಭಗ್ನಾನಿ ಜತೆ ಬಹುಕಾಲದ ಪ್ರೀತಿಗೆ ಇದೀಗ ಅಧಿಕೃತವಾಗಿ ಮದುವೆ ಮುದ್ರೆ ಬಿದ್ದಿದೆ. ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ನಿನ್ನೆ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.
ರಾಕುಲ್ ಪ್ರೀತ್ ಮತ್ತು ಜಾಕಿ ಭಗ್ನಾನಿ ಮದುವೆ ಸಮಾರಂಭವು ಸೌತ್ ಗೋವಾದ ಐಟಿಸಿ ಗ್ರ್ಯಾಂಡ್ ರೆಸಾರ್ಟ್‌ನಲ್ಲಿ ಬುಧವಾರ ಅದ್ಧೂರಿಯಾಗಿ ನೆರವೇರಿತು. ಪಂಜಾಬಿ ಮತ್ತು ಸಿಂಧಿ ಸಂಪ್ರದಾಯದಂತೆ ರಾಕುಲ್ ಪ್ರೀತ್ ಮತ್ತು ಜಾಕಿ ಭಗ್ನಾನಿ ಮದುವೆ ನಡೆದಿದೆ. ಈ ಜೋಡಿಯ ಮದುವೆಗೆ ಫೋನ್ ಬಳಕೆ ನಿಷೇಧಿಸಲಾಗಿತ್ತು.
ಹಾಗಾಗಿ ಮದುವೆಯ ಯಾವುದೇ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹೊರಬಿದ್ದಿರಲಿಲ್ಲ. ಇದೀಗ ಮದುವೆ ಫೋಟೋಗಳನ್ನು ಸ್ವತಃ ರಾಕುಲ್ ಶೇರ್ ಮಾಡಿದ್ದಾರೆ. ಫೆಬ್ರವರಿ 19ರಿಂದಲೇ ಗೋವಾದ ಐಟಿಸಿ ಗ್ರ್ಯಾಂಡ್‌ನಲ್ಲಿ ಈ ಜೋಡಿಯ ವಿವಾಹ ಪೂರ್ವ ತಯಾರಿ ಶುರುವಾಗಿತ್ತು. ಮಂಗಳವಾರ ಸಂಗೀತ ಕಾರ್ಯಕ್ರಮ ನಡೆದರೆ, ಇಂದು ಮದುವೆ ಶಾಸ್ತ್ರಗಳು ನೆರವೇರಿವೆ.
ಈ ಮದುವೆಯಲ್ಲಿ ಬಾಲಿವುಡ್‌ನ ಸಿನಿಮಾ ಸ್ನೇಹಿತರಾದ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಆಯುಷ್ಮಾನ್ ಖುರಾನಾ, ಅರ್ಜುನ್ ಕಪೂರ್, ಡೇವಿಡ್ ಧವನ್ ಸೇರಿ ಇತರ ಕೆಲವು ಚಿತ್ರರಂಗದ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ರಾಕುಲ್ ಮತ್ತು ಜಾಕಿ ಅವರ ಕುಟುಂಬದವರೂ ಮತ್ತು ಆಪ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.
ರಾಕುಲ್ ಪ್ರೀತ್ ಸಿಂಗ್ - ಜಾಕಿ ಭಗ್ನಾನಿ ಕಳೆದ ಮೂರು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇಬ್ಬರು ಕಾಮನ್ ಫ್ರೆಂಡ್ ಮೂಲಕ ಭೇಟಿಯಾಗಿ ಬಳಿಕ ಪ್ರೇಮಿಗಳಾದರು. 2021ರ ಅಕ್ಟೋಬರ್‌ನಲ್ಲಿ ಇಬ್ಬರೂ ಪ್ರೀತಿಸುತ್ತಿದ್ದೇವೆ ಎಂದು ರಾಕುಲ್ ತಮ್ಮ ಹುಟ್ಟುಹಬ್ಬದಂದು ಬಹಿರಂಗಪಡಿಸಿದ್ದರು. ಅದಾದ ಬಳಿಕ ಸಾಕಷ್ಟು ಕಾರ್ಯಕ್ರಮಗಳಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.