ಬಿಗ್ ಬಾಸ್ ಮನೆಯಿಂದ ಪವಿ ಪೂವಪ್ಪ ಪಡೆದ ಸಂಭಾವನೆ ಕೇಳಿ ತ.ಲೆಕೆಳಗಾದ ಕನ್ನಡಿಗರು

 | 
Nd

ಕೊಡಗಿನ ಚೆಲುವೆ ಪವಿ ಪೂವಪ್ಪ ಬಿಗ್‌ ಬಾಸ್‌ ಸೇಸನ್‌ ಹತ್ತರಲ್ಲಿ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಪಡೆದಿದ್ದರು. ಇದೀಗ ಬಿಗ್‌ ಬಾಸ್‌ ಮನೆಯಿಂದ ಎಲಿಮಿನೇಟ್‌ ಆಗಿ ಹೊರ ನಡೆದಿದ್ದಾರೆ. ಹೌದು ಬಿಗ್‌ ಬಾಸ್‌ ಸೀಸನ್‌ ಹತ್ತು ಯಶಸ್ವಿಯಾಗಿ ಹತ್ತನೇ ವಾರ ಪೂರೈಸಿದ್ದು ಇದೀಗ ಹನ್ನೊಂದನೇ ವಾರಕ್ಕೆ ಕಾಲಿಟ್ಟಿದೆ. 

ಇನ್ನು ಕಳೆದ ವಾರ ಬಿಗ್‌ ಬಾಸ್‌ ಮನೆಯಲ್ಲಿ ಮೈಕಲ್‌ ಸಂಗೀತಾ ಪ್ರತಾಪ್‌ ಕಾರ್ತಿಕ್‌ ಸೇರಿದಂತೆ ಘಟಾನುಘಟಿ ಸ್ಪರ್ಧಿಗಳೇ ನಾಮಿನೇಟ್‌ ಆಗಿದ್ದು ಅದರಲ್ಲಿ ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ ಮನೆಗೆ ಎಂಟ್ರಿ ನೀಡಿದ್ದ ಪವಿ ಪೂವಪ್ಪ ಎಲಿಮಿನೇಟ್‌ ಆಗಿ ಮೂರೇ ವಾರಕ್ಕೆ ಮನೆಯಿಂದ ಹೊರ ನಡೆದಿದ್ದಾರೆ. ಹೌದು ಪವಿ ಪೂವಪ್ಪ ಒಬ್ಬ ಮಾಡೆಲ್‌ ಆಗಿದ್ದು ಬಿಗ್‌ ಬಾಸ್‌ ಸೇಸನ್‌ ಹತ್ತರಲ್ಲಿ ಐವತ್ತು ದಿನಗಳ ನಂತರ ವೈಲ್ಡ್‌ ಕಾರ್ಡ್‌ ಮೂಲಕ ಅದ್ಧೂರಿಯಾಗಿ ಒಳಗೆ ಹೋಗಿದ್ದರು. 

ಆದರೆ ನಿರೀಕ್ಷಿಸಿದಂತೆ ಪವಿ ಪೂವಪ್ಪ ಅವರ ಆಟ ಇರಲಿಲ್ಲ.. ಅವರಿಂದ ಬಿಗ್‌ ಬಾಸ್‌ ಗೆ ಯಾವುದೇ ಟಿ ಆರ್‌ ಪಿ ಕಂಟೆಂಟ್‌ ಆಗಲಿ ಅಥವಾ ಪ್ರೇಕ್ಷಕರಿಗೆ ಮನರಂಜನೆಯಂತಹ ಕಂಟೆಂಟ್‌ ಆಗಲಿ ಸಿಗಲಿಲ್ಲ. ಇನ್ನು ಮೊದಲ ವಾರ ನಾಮಿನೇಷನ್‌ ನಿಂದ ಹೊರಗಿಟ್ಟು ಅವಕಾಶ ಕೊಟ್ಟಿದ್ದರು ಬಿಗ್‌ ಬಾಸ್. ಆದರೆ ಪವಿ ಪೂವಪ್ಪರಿಂದ ಯಾವುದೇ ಉಪಯೋಗವಾಗದ ಕಾರಣ ಮೂರೇ ವಾರಕ್ಕೆ ಅವರನ್ನು ಎಲಿಮಿನೇಟ್‌ ಮಾಡಿ ಮನೆಯಿಂದ ಹೊರ ಕಳುಹಿಸಿದ್ದಾರೆ.

 ಇನ್ನು ಪವಿ ಪೂವಪ್ಪ ಅವರ ಸಂಭಾವನೆಯ ವಿಚಾರಕ್ಕೆ ಬರುವುದಾದರೆ ಇದ್ದದ್ದು ಮೂರೇ ವಾರವಾದರೂ ಒಂದು ದೊಡ್ಡ ಮೊತ್ತದ ಸಂಭಾವನೆ ಪಡೆದು ಹೊರ ಬಂದಿದ್ದಾರೆ. ಹೌದು ಬಿಗ್‌ ಬಾಸ್‌ ಮನೆಯ ಸ್ಪರ್ಧಿಗಳಿಗೆ ಸಾಮಾನ್ಯವಾಗಿ ಬಹುತೇಕರಿಗೆ ವಾರದ ಸಂಭಾವನೆಯನ್ನು ನಿಗಧಿ ಮಾಡಲಾಗುತ್ತದೆ. ಇನ್ನು ಕಳೆದ ಸೀಸನ್‌ ಗಳಲ್ಲಿ ಕೆಲವರಿಗೆ ವರ್ಷಕ್ಕೆ ಅಗ್ರಿಮೆಂಟ್‌ ಮಾಡಿಕೊಂಡಿದ್ದೂ ಉಂಟು.ಆದರೆ ಈ ಬಾರಿ ಎಲ್ಲಾ ಸ್ಪರ್ಧಿಗಳಿಗೂ ವಾರದ ಸಂಭಾವನೆಯೇ ನಿಗಧಿಯಾಗಿದ್ದು ಇದ್ದಷ್ಟು ವಾರಗಳ ಲೆಕ್ಕಾಚಾರ ಮಾಡಿ ಸಂಭಾವನೆ ನೀಡಲಾಗುತ್ತಿದೆ.

ಇನ್ನು ಹೊರಗೆ ಮಾಡೆಲ್‌ ಆಗಿ ಗುರುತಿಸಿಕೊಂಡು ಒಂದಷ್ಟು ನಿರೀಕ್ಷೆಯ ಜೊತೆಗೆ ಬಿಗ್‌ ಬಾಸ್‌ ಮನೆಗೆ ಕಾರ್‌ ನಲ್ಲಿಯೇ ಅದ್ಧೂರಿಯಾಗಿ ಕಳುಹಿಸಿದ್ದ ಪವಿ ಪೂವಪ್ಪ ಅವರಿಗೂ ದೊಡ್ಡ ಮಟ್ಟದ ಸಂಭಾವನೆಯನ್ನೇ ಆಫರ್‌ ಮಾಡಿದ್ದರು. ಹೌದು ಪವಿ ಪೂವಪ್ಪ ಅವರಿಗೆ ಒಂದು ವಾರಕ್ಕೆ ಬರೋಬ್ಬರಿ ನಲವತ್ತು ಸಾವಿರ ರೂಪಾಯಿ ಸಂಭಾವನೆಯನ್ನು ನಿಗಧಿ ಮಾಡಿದ್ದರು. ಆದರೆ ಪವಿ ಪೂವಪ್ಪ ಇದ್ದದ್ದು ಮೂರೇ ವಾರವಾದ ಕಾರಣ ಅವರಿಗೆ ಮೂರು ವಾರಗಳಿಗೆ ಒಟ್ಟು ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ ಸಂಭಾವನೆ ದೊರೆತ್ತಿದ್ದು ಆ ಸಂಭಾವನೆಯ ಜೊತೆಗೆ ಮನೆಗೆ ತೆರಳಿದ್ದಾರೆ. 

ಇನ್ನು ಬಿಗ್‌ ಬಾಸ್‌ ಗೆ ಹೋಗಿ ಬಂದ ಸ್ಪರ್ಧಿಗಳು ಸಾಮಾನ್ಯವಾಗಿ ಕಲರ್ಸ್‌ ಕನ್ನಡ ವಾಹಿನಿಯ ಶೋಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದ್ದು ಮುಂಬರುವ ದಿನಗಳಲ್ಲಿ ಪವಿ ಪೂವಪ್ಪ ಅವರೂ ಕೂಡ ಕಲರ್ಸ್‌ ಕನ್ನಡ ವಾಹಿನಿಯ ಶೋಗಳಲ್ಲಿ ಕಾಣಿಸಿಕೊಂಡರೆ ಅಚ್ಚರಿ ಏನೂ ಇಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.