ಒಂದು ಮಗು ಆದರೂ ಕೂಡ ಇನ್ನು ಬೆಳ್ಳಿ ಗೊಂಬೆಯಂತಿರುವ ಕರೀನಾ ಕಪೂರ್

 | 
Us

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರು ಇತ್ತೀಚೆಗೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಭಾಗಿಯಾದರು. ಪತಿ ಹಾಗೂ ಇಬ್ಬರು ಮಕ್ಕಳ ಸಮೇತ ಕಾರ್ಯಕ್ರಮಕ್ಕೆ ಬಂದಿದ್ದಾರೆ ಸ್ಟಾರ್ ನಟಿ. ಅವರ ಫೋಟೋಸ್ ಈಗ ವೈರಲ್ ಆಗಿವೆ. ಫಂಕ್ಷನ್​ನ ಎರಡನೇ ದಿನದಂದು ಕರೀನಾ ಕಪೂರ್ ಅವರು ಸುಂದರವಾದ ಸೀರೆ ಉಟ್ಟುಕೊಂಡಿದ್ದಾರೆ. 

ಆಕರ್ಷಕ ಸಿಲ್ವರ್ ಪ್ರಿಂಟ್ ಸೀರೆ ಉಟ್ಟಿದ್ದ ಕರೀನಾ ಅವರು ತಿಳಿ ಹಸಿರು ಬಣ್ಣದ ಸ್ಟೋನ್ ಇದ್ದಂತಹ ಭಾರೀ ಗಾತ್ರದ ಇಯರಿಂಗ್ಸ್ ಧರಿಸಿದ್ದರು. ನಟಿ ತುಂಬಾ ಸಿಂಪಲ್ ಮೇಕಪ್ ಮಾಡಿಕೊಂಡಿದ್ದರು. ಅದರ ಮೊದಲ ದಿನ ಸಾದಾ ಸಲ್ವರ್ ಕಮೀಜ್ ಅಲ್ಲಿ ಕೂಡ ಸುಂದರವಾಗಿ ಕಾಣುತ್ತಿದ್ದರು.

ಅವರ ಫೋಟೋಗಳು ವೈರಲ್ ಆಗುತ್ತಿದ್ದಂತೆ ಅವರ ವಯಸ್ಸಿನ ಕುರಿತು ಕೂಡಾ ಚರ್ಚೆ ಶುರುವಾಗಿದೆ. ಅಂದ ಹಾಗೆ ಕರೀನಾ ಕಪೂರ್ ಅವರಿಗೆ 40 ವರ್ಷ ವಯಸ್ಸಾ? ಅಥವಾ 40 ಪ್ಲಸ್ಸಾ ಎಂದು ನೆಟ್ಟಿಗರು ಚರ್ಚಿಸಿದ್ದಾರೆ. ಹಾಗಾದರೆ ಈ ಬಾಲಿವುಡ್ ಚೆಲುವೆಯ ವಯಸ್ಸು ಎಷ್ಟು?

ಕರೀನಾ ಕಪೂರ್ ಖಾನ್ ಅವರಿಗೆ 43 ವರ್ಷ ವಯಸ್ಸು. ಅವರು ಸೈಫ್ ಅಲಿ ಖಾನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಸೈಫ್ ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಾಗಿ ಡಿವೋರ್ಸ್ ಕೂಡಾ ಆಗಿತ್ತು. ಆ ನಂತರ ನಟಿ ಸೈಫ್ ಅಲಿ ಖಾನ್ ಅವರನ್ನು ಇಷ್ಟಪಟ್ಟು ಮದುವೆಯಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.