ಏಕಾಏಕಿ ಕರ್ಣ ಸೀರಿಯಲ್ ನಾಯಕಿ ಬದಲಾವಣೆ, ನಿಧಿ ಪಾತ್ರಕ್ಕೆ ಬೇರೆ ನಾಯಕಿ ಆಯ್ಕೆ ಮಡಿದ ಡೈರೆಕ್ಟರ್

 | 
Karna

ಕನ್ನಡ ಕಿರುತೆರೆಯಲ್ಲಿ ಇತ್ತೀಚೆಗೆ ಆರಂಭವಾದ ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಕರ್ಣ’ ಕೇವಲ ಕೆಲವು ತಿಂಗಳಲ್ಲಿ ಟಿಆರ್‌ಪಿಯಲ್ಲಿ ನಂ.1 ಸ್ಥಾನಕ್ಕೇರಿದೆ. ಪ್ರೊಮೋ ಬಿಡುಗಡೆಯಾಗುವ ಮೊದಲೇ ಟ್ರೆಂಡಿಂಗ್‌ನಲ್ಲಿ ಇರೋ ಈ ಧಾರಾವಾಹಿ ಈಗ ಮನೆಯ ಮನೆ ಮಾತಾಗಿದೆ. ಕಥೆ, ಪಾತ್ರಗಳ ಅಭಿನಯ ಹಾಗೂ ನಿರೂಪಣೆಯಿಂದ ಪ್ರೇಕ್ಷಕರ ಮನ ಗೆದ್ದಿರುವ ಕರ್ಣ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದೆ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ಪೋಸ್ಟ್ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ. ಅದರಲ್ಲಿ ಶೀಘ್ರದಲ್ಲೇ ಕನ್ನಡದ ನಂ.1 ಧಾರಾವಾಹಿಯ ನಾಯಕಿ ಬದಲಾಗಲಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಅಭಿಮಾನಿಗಳು ಅದನ್ನು ಕರ್ಣ ಸೀರಿಯಲ್ ಕುರಿತ ಗಾಸಿಪ್ ಎಂದು ನಂಬುತ್ತಿದ್ದಾರೆ.ಈಗ ಸೀರಿಯಲ್‌ನಲ್ಲಿ ನಮ್ರತಾ ಗೌಡ (ನಿತ್ಯಾ ಪಾತ್ರ) ಹಾಗೂ ಭವ್ಯಾ ಗೌಡ (ನಿಧಿ ಪಾತ್ರ) ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇವರಿಬ್ಬರಲ್ಲಿ ಯಾರು ಹೊರ ಬರುತ್ತಾರೆ ಎಂಬ ಚರ್ಚೆ ಜೋರಾಗಿದೆ. ಕೆಲವು ವರದಿಗಳ ಪ್ರಕಾರ, ನಮ್ರತಾ ಗೌಡ ಅವರು ವಿಜಯ್ ರಾಘವೇಂದ್ರ ಜೊತೆ ಹೊಸ ಸಿನಿಮಾ ಕೈಗೆತ್ತಿಕೊಂಡಿರುವುದರಿಂದ ಧಾರಾವಾಹಿಯಿಂದ ಹೊರ ಬರುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಇದು ಅಧಿಕೃತ ಮಾಹಿತಿ ಅಲ್ಲ.ಇನ್ನೊಂದು ಬದಿಯಲ್ಲಿ, ನಿತ್ಯಾ ಪಾತ್ರಕ್ಕೆ ಈಗಾಗಲೇ ಮತ್ತೊಬ್ಬ ನಾಯಕಿಯನ್ನು ಆಯ್ಕೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ‘ಮಹಾದೇವಿ’ ಸೀರಿಯಲ್‌ನಲ್ಲಿ ನಟಿಸಿದ ನಾಯಕಿ ಬರುವ ಸಾಧ್ಯತೆಗಳೂ ಇವೆ ಎಂಬ ಮಾತು ಹರಿದಾಡುತ್ತಿದೆ.

ಆದರೆ ಈ ಸುದ್ದಿಗಳ ನಿಜಾಸತ್ಯತೆ ಬಗ್ಗೆ ಧಾರಾವಾಹಿ ತಂಡದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ.ಸದ್ಯಕ್ಕೆ ಈ ವಿಷಯ ಕುತೂಹಲ ಮಾತ್ರ ಹುಟ್ಟಿಸಿದೆ. ಪ್ರೇಕ್ಷಕರು ತಮ್ಮ ನೆಚ್ಚಿನ ಪಾತ್ರಗಳಲ್ಲಿ ಬದಲಾವಣೆ ಆಗಬಾರದು ಎಂದು ಬಯಸುತ್ತಿದ್ದಾರೆ. ನಿತ್ಯಾ ಪಾತ್ರದಿಂದ ನಮ್ರತಾ ಹೊರ ಬರ್ತಾರಾ? ಅಥವಾ ಭವ್ಯಾ ಪಾತ್ರ ಬದಲಾಗುತ್ತದೆಯಾ? ಎನ್ನುವುದನ್ನು ತಿಳಿಯಲು ಇನ್ನೂ ಸ್ವಲ್ಪ ಕಾಲ ಕಾದು ನೋಡಬೇಕಾಗಿದೆ.