ಸಂಗೀತ ಮೋಸ ಮಾಡಿದ್ಲು, 'ಮದುವೆ ಆಗುಬೇಕು ಅಂತ ಕನಸು ಕಂಡಿದ್ದೆ' ಕಾರ್ತಿಕ್ ಮಹೇಶ್

 | 
ರಕಕ

ಬಿಗ್ ಬಾಸ್​ ಸೀಸನ್ 10ರಲ್ಲಿ ಸಂಗೀತಾ ಹಾಗೂ ಕಾರ್ತಿಕ್​ ಅಸಮರ್ಥರಾಗಿ ಎಂಟ್ರಿ ಕೊಟ್ರು. ಬಳಿಕ ನಾವು ಸಮರ್ಥರೇ ಎಂದು ಸಾಬೀತು ಪಡಿಸಿಕೊಂಡ್ರು. ಬಳಿಕ ತಮ್ಮ ಆಟದಿಂದಲೇ ಎಲ್ಲರ ಗಮನ ಸೆಳೆದ್ರು.ಬಿಗ್ ಬಾಸ್ ಕಾರ್ಯಕ್ರಮದ ಆರಂಭದಲ್ಲಿ ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಮಹೇಶ್​ ಒಳ್ಳೆ ಸ್ನೇಹಿತರಂತೆ ಇದ್ರು. ಲವ್​ ಬರ್ಡ್ಸ್​​ಗಳಂತೆ ಓಡಾಡಿಕೊಂಡಿದ್ದರು. ಇಬ್ಬರ ಸ್ನೇಹ ದಿನಕಳೆದಂತೆ ದ್ವೇಷವಾಗಿ ಬದಲಾಯ್ತು.

ಬಿಗ್ ಬಾಸ್ ಮುಗಿದು ಟ್ರೋಫಿ ಕಾರ್ತಿಕ್ ಪಾಲಾಯ್ತು. ಜನರು ಈಗಲೂ ಕಾರ್ತಿಕ್​-ಸಂಗೀತಾ ಬಗ್ಗೆ ಚರ್ಚೆ ಮಾಡುತ್ತಲೇ ಇದ್ದಾರೆ. ಸಂದರ್ಶನದಲ್ಲೂ ಸಂಗೀತಾ ಮೇಡಂ, ಕಾರ್ತಿಕ್​ ಮೇಲೆ ನಿಮಗೆ ಯಾಕಿಷ್ಟು ಕೋಪ ಅಂತ ಜನ ಕೇಳ್ತಾನೆ ಇದ್ದಾರೆ. ಅಭಿಮಾನಿಯೊಬ್ಬರು, ಕಾರ್ತಿಕ್​  ಹಾಗೂ ನೀವು ಪ್ರೇಮಿಗಳಂತೆ ಇದ್ರಿ, ಬಳಿಕ ಯಾಕೆ ಅವರನ್ನು ದ್ವೇಷಿಸೋಕೆ ಶುರು ಮಾಡಿದ್ರಿ. ಯಾವ ಮಟ್ಟಿಗೆ ಅಂದ್ರೆ ಫೈನಲ್​ಗೂ ಕಾರ್ತಿಕ್​ ಬರಬಾರದು ಎಂದು ಹೇಳಿದ್ಯಾಕೆ ಎಂದು ಸಂಗೀತಾ ಅವರನ್ನು ಪ್ರಶ್ನೆ ಮಾಡಿದ್ರು.

ಅಭಿಮಾನಿ ಪ್ರಶ್ನೆಗೆ ಉತ್ತರಿಸಿದ ಸಂಗೀತಾ, ಆರಂಭದಲ್ಲಿ ಕಾರ್ತಿಕ್ ನನಗೆ ಬೆಂಬಲವಾಗಿ ನಿಂತ್ರು ಇಬ್ಬರು ಸ್ನೇಹಿತರಾದ್ವಿ ಅಷ್ಟೇ ನೀವು ಅಂದುಕೊಂಡಂತೆ ಪ್ರೀತಿ ಎಲ್ಲಾ ಇಲ್ಲ ಎಂದು ಹೇಳಿದ್ರು. ನಾನು ಕಣ್ಣೀರು ಹಾಕಿದಾಗ ಕಾರ್ತಿಕ್ ಸಮಾಧಾನ ಮಾಡಿದ್ದಾರೆ. ಬಳಿಕ ಅವರ ವರ್ತನೆ ನನಗೆ ಇಷ್ಟವಾಗಲಿಲ್ಲ ಎಂದಿದ್ದಾರೆ. ಕಾರ್ತಿಕ್ ಅವರನ್ನು ನಾನು ದ್ವೇಷ ಮಾಡ್ತಿಲ್ಲ ಎಂದು ಹೇಳಿದ್ದಾರೆ.

ಆದರೆ ಕಾರ್ತೀಕ್ ಮಾತ್ರ ಸ್ನೇಹ ಮುಂದುವರೆಯುತ್ತದೆ ಆದರೆ ಅಷ್ಟೊಂದು ಸಲಿಗೆ ಉಳಿದಿಲ್ಲ ಎಂದಿದ್ದಾರೆ. ಕೆಲವು ಕಡೆ ಸಂಗೀತಾ ಬಹಳಷ್ಟು ನೋವು ಮಾಡಿದ್ದಾರೆ. ಅದನ್ನೆಲ್ಲ ಮರೆತು ಮತ್ತೆ ಮೊದಲಿನಂತೆ ಸ್ನೇಹ ಹಸ್ತ ಚಾಚಲು ಮನಸ್ಸು ಬರುತ್ತಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಬಿಗ್ಬಾಸ್ ಮನೆಯಲ್ಲಿ ಚಂದದ ಜೋಡಿ ಎನಿಸಿಕೊಂಡ ಇವರಿಬ್ಬರೂ ಇದೀಗ ದೂರವಾಗುವುದು ಬೇಸರದ ವಿಷಯವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.