ಕಾರ್ತಿಕ್ ವಿ.ರುದ್ಧ ಇಡೀ ಮನೆ ತಿರುಗಿ ಬಿದ್ದಿದೆ, ಸಂಗೀತ ಬ್ರೇಕಪ್ ಬಳಿಕ ಒಂಟಿಯಾದ ಕಾ ರ್ತಿಕ್ ಮಹೇಶ್

 | 
Bh

ಕಾರ್ತಿಕ್ ಬಿಗ್ ಬಾಸ್ ಮನೆಯಲ್ಲಿ ಇರುವ ಅತ್ಯುತ್ತಮ ಆಟಗಾರ. ಯಾಕೆಂದರೆ ವಿನಯ್‌ಗೆ ಸರಿಸಾಟಿಯಾಗಿ ನಿಂತುಕೊಂಡು ಎದುರಾಳಿ ತಂಡದಲ್ಲಿದ್ದವರ ಎದೆಯಲ್ಲಿ ನಡುಕ ಹುಟ್ಟಿಸುತ್ತಾ ಇದ್ದರು. ಆದರೆ ನೆನ್ನೆ ನಡೆದ ಟಾಸ್ಕ್ ವೇಳೆ ಕಾರ್ತಿಕ್‌ಗೆ ಬ್ಯಾಕ್ ಪೇನ್ ಬಂದಿದೆ. ಇದರಿಂದಾಗಿ ತುಂಬಾ ಬಳಲಿದಂತೆ ಕಂಡಿದ್ದಾರೆ. ಜೊತೆಗೆ ವೈದ್ಯರನ್ನು ಕಾಣಬೇಕು ಎಂದು ಹೇಳಿದ್ದರು ಈ ವಿಚಾರವಾಗಿ ಬಿಗ್ ಬಾಸ್ ಮನೆಯಲ್ಲಿ ಇಂದು ಹರಾಜು ಪ್ರಕ್ರಿಯೆ ನಡೆಯುತ್ತಿದ್ದು ಕಾರ್ತಿಕ್ ಅನ್ನು ಇಬ್ಬರು ತಂಡದ ಮಾಲೀಕರು ಖರೀದಿ ಮಾಡಿಲ್ಲ.

ಬಿಗ್ ಬಾಸ್ ಮನೆಯಲ್ಲಿ ತನಿಷಾ ಹಾಗೂ ಸಂಗೀತಾ ಇಬ್ಬರ ಮಾಲೀಕತ್ವದಲ್ಲಿ ಬಿಗ್ ಬಾಸ್ ಮನೆಯಲ್ಲಿರುವ ಸದಸ್ಯರನ್ನು ಹೆಚ್ಚಿನ ಪಾಯಿಂಟ್ಸ್ ಕೊಟ್ಟು ಖರೀದಿ ಮಾಡಬೇಕಾಗಿದೆ. ಸಂಗೀತಾ ಹಾಗೂ ತನಿಷಾ ಇಬ್ಬರೂ ಕೂಡ ಚೇರ ಹಾಕಿಕೊಂಡು ಕುಳಿತುಕೊಂಡಿದ್ದು ಬಿಗ್ ಬಾಸ್ ಮನೆಯಲ್ಲಿರುವ ಸದಸ್ಯರ ಹೆಸರನ್ನು ಕರೆಯುತ್ತಾ, ಎಷ್ಟು ಪಾಯಿಂಟ್ ಕೊಟ್ಟು ಅವರನ್ನು ಖರೀದಿ ಮಾಡಬೇಕು ಎಂದುಕೊಂಡಿದ್ದಾರೆ ಅದನ್ನ ಎಲ್ಲರಿಗೂ ಕೂಡ ತೋರಿಸಬೇಕಾಗಿದೆ. ತನಿಷಾ ಬಹಳ ಬುದ್ಧಿವಂತಿಕೆಯಿಂದ ಆಟವನ್ನ ಆಡುತ್ತಿದ್ದಾರೆ.

ಇನ್ನು ಸಿರಿ ಅವರು ಬಂದು ನಿಂತುಕೊಂಡಾಗ ಎರಡು ತಂಡದವರು ಕೂಡ ಇಷ್ಟು ಪಾಯಿಂಟ್ ಕೊಟ್ಟು ಖರೀದಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದಾದ ಮೇಲೆ ಬಿಗ್ ಬಾಸ್ ವಿನಯ್ ಹಾಗೂ ನಮ್ರತಾ ಇಬ್ಬರನ್ನು ಹೊರತುಪಡಿಸಿ ಮನೆಯ ಉಳಿದ ಸದಸ್ಯರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದ್ದಾರೆ. ಆದರೆ ಇಲ್ಲಿ ನಮ್ರತಾ ಹಾಗೂ ವಿನಯ್ ಅವರನ್ನು ಯಾಕೆ ಹರಾಜು ಪ್ರಕ್ರಿಯೆಯಿಂದ ಹೊರಗೆ ಇಡಲಾಗಿದೆ ಎಂಬುವುದು ಮಾತ್ರ ಗೊತ್ತಿಲ್ಲ.

ಬಿಗ್ ಬಾಸ್ ಮನೆಯಲ್ಲಿ ಈಗ ಪ್ರತಿದಿನವೂ ಕೂಡ ಟ್ವಿಸ್ಟ್ ಮೇಲೆ ಟ್ವಿಸ್ಟ್ ನಡೆಯುತ್ತಿದೆ. ಇನ್ನು ಕಾರ್ತಿಕ್ ಹಾಗೂ ತನಿಷಾ ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಕೂಡ ಸ್ನೇಹಿತರು. ಕಾರ್ತಿಕ್ ಯಾವುದೇ ವಿಚಾರವನ್ನು ಮಾತನಾಡುವಾಗಲೂ ತನಿಷಾ ಜೊತೆಯೇ ಮಾತನಾಡುತ್ತಿದ್ದರು ತನಿಷಾ ಕೂಡ ಕಾರ್ತಿಕ್ ಅವರನ್ನು ತಮ್ಮ ಜೊತೆಯಾಗಿಸಿಕೊಂಡಿದ್ದರು. 

ಆದರೆ ಈಗ ಅವರೇ ಒಂದು ತಂಡವನ್ನ ಖರೀದಿ ಮಾಡುವ ಮಾಲೀಕರಾಗಿದ್ದು ಕಾರ್ತಿಕ್‌ಗೆ ಬ್ಯಾಕ್ ಪೇನ್ ಬಂದಿದೆ ಎಂಬ ವಿಚಾರ ತಿಳಿದು ಅವರನ್ನ ಖರೀದಿ ಮಾಡಿಲ್ಲ. ಇದು ಕಾರ್ತಿಕ್‌ಗೂ ಬೇಸರ ತಂದಿದೆ. ಇಷ್ಟು ದಿನ ಫ್ರೆಂಡ್ ಎಂದುಕೊಂಡು ಜೊತೆಗೆ ಆಟವಾಡಿ ನನಗೆ ತನಿಷಾ ಏನಾದರೂ ಮೋಸ ಮಾಡಿಬಿಟ್ರಾ ಎಂಬ ಗಿಲ್ಟ್ ಕಾರ್ತಿಕ್ ಅವರನ್ನ ಕಾಡುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.