ಒಮ್ಮೆಲೇ ಎಂಟ್ರಿ ಕೊಟ್ಟ ಕಾರ್ತಿಕ್ ತಾಯಿ ಗ.ರಂ, ಕಾರ್ತಿಕ್ ಕಿವಿಯಲ್ಲಿ ಹೇಳಿದ್ದೇನು ಗೊ ತ್ತಾ

 | 
Bj

ಬಿಗ್ ಬಾಸ್ ಮನೆಯಲ್ಲಿ ಈಗ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಎಲ್ಲರೂ ನಮ್ಮ ಅಮ್ಮ ಬರಬಹುದು, ನಮ್ಮ ಮನೆಯವರು ಬರಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದಾರೆ. ಯಾವುದೇ ಟಾಸ್ಕ್ ಇಲ್ಲದೇ ಸ್ಪರ್ಧಿಗಳು ಸುಮ್ಮನಿದ್ದಾರೆ. ಆದರೆ ಮನೆಯವರು ಯಾವಾಗ ಬರುತ್ತಾರೆ ಎಂದು ಕಾಯುವುದೇ ಎಲ್ಲರ ಕೆಲಸವಾಗಿದೆ.

ನಮ್ರತಾ, ತುಕಾಲಿ ಸಂತೋಷ್, ವರ್ತೂರು ಸಂತೋಷ್, ಮೈಕಲ್ ಇವರ ಮನೆಯವರು ಬಂದು ಈಗಾಗಲೇ ಎಲ್ಲರಿಗೂ ಕೂಡ ಶುಭ ಹಾರೈಸಿ ಹೋಗಿದ್ದಾರೆ. ಮೈಕಲ್ ತಾಯಿಯಂತೂ ತಮ್ಮ ಮಗನ ಜೊತೆಗೆ ಸಂಗೀತಾ ಚೆನ್ನಾಗಿ ಇರಬೇಕು ಹಾಗೂ ಮಗ ಕೂಡ ಸಂಗೀತಾ ಜೊತೆಗೆ ಚೆನ್ನಾಗಿ ಇರು ಎಂದು ಹೇಳಿ ಹೋಗಿದ್ದಾರೆ.

ಈಗ ಕಾರ್ತಿಕ್ ಸರದಿ. ಹೊಸ ಪ್ರೋಮೋದಲ್ಲಿ ಕಾರ್ತಿಕ್ ಅವರ ತಾಯಿ ಬಿಗ್ ಬಾಸ್ ಮನೆಯೊಳಗೆ ಬಂದಿದ್ದಾರೆ. ಮಗನಿಗೆ ಒಂದೇ ಒಂದು ಮುತ್ತನ್ನು ಕೊಟ್ಟು ಚೆನ್ನಾಗಿ ಆಡು ಎಂದಷ್ಟೇ ಹೇಳಿ ಕ್ಷಣಾರ್ಧದಲ್ಲಿ ಮರೆಯಾಗಿದ್ದಾರೆ. ಇದು ಕಾರ್ತಿಕ್‌ಗೆ ಅತೀವ ನೋವು ತಂದಿದೆ. ಏಕೆಂದರೆ ಅಮ್ಮನನ್ನು ಸರಿಯಾಗಿ ಮಾತನಾಡಿಸಲು ಆಗಲಿಲ್ಲ. ಅಮ್ಮನನ್ನ ಮಾತನಾಡಿಸಿ ಒಂದು ಅಪ್ಪುಗೆಯನ್ನು ಕೊಡಲು ಆಗಲಿಲ್ಲ ಎಂದು ಕಣ್ಣೀರನ್ನು ಹಾಕಿದ್ದಾರೆ. 

ಸಣ್ಣ ಮಕ್ಕಳು ಹಠ ಮಾಡುವಂತೆ ಅಮ್ಮ ಬಾರಮ್ಮ ಎಂದು ಜೋರಾಗಿ ಕೂಗಿಕೊಂಡಿದ್ದಾರೆ. ಮುಖ್ಯದ್ವಾರದ ಮೂಲಕ ಕಾರ್ತಿಕ್ ಅವರ ಅಮ್ಮ ಹೋಗುವಾಗ ಸಿರಿ ಬಿಗ್ ಬಾಸ್ ಮಾತನಾಡಿಸಲು ಬಿಡಿ ಎಂದು ಕೇಳಿಕೊಂಡಿದ್ದಾರೆ. ಆದರೆ ಬಿಗ್ ಬಾಸ್ ಏನನ್ನು ಸಹ ಹೇಳಿಲ್ಲ. ಕಾರ್ತಿಕ್ ಅವರ ಅಮ್ಮ ಹೊರಗಡೆ ಹೋದಾಗ ಎಲ್ಲರೂ ಕೂಡ ತಮ್ಮ ಕೆಲಸದಲ್ಲಿ ನಿರತರಾಗಿ ಎಂದು ಹೇಳಿದಾಗ ಕಾರ್ತಿಕ್ ಬಿಕ್ಕಿ ಬಿಕ್ಕಿ ಹತ್ತಿದ್ದಾರೆ. 

ಬಿಗ್ ಬಾಸ್ ನಮ್ಮ ಅಮ್ಮನನ್ನು ಮತ್ತೊಮ್ಮೆ ಕಳುಹಿಸಿ ಎಂದು ಕೇಳಿಕೊಂಡಿದ್ದಾರೆ. ಅಮ್ಮ ಬಾರಮ್ಮ ಎಂದು ಜೋರಾಗಿ ಕೂಗಿದ್ದಾರೆ. ಸಂಗೀತಾ ಜೊತೆ ಇರೋದನ್ನು ನೋಡಿ ಕೋಪಗೊಂಡು ಅಮ್ಮ ಹೋಗಿದ್ದಾರೆ ಎಂದು ಕಾರ್ತೀಕ್ ಬೇಸರ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.