ನಮ್ರತಾ ಬಿಳಿ‌ ಕೆನ್ನೆಗೆ ಮುತ್ತಿಟ್ಟ ಕಾರ್ತಿಕ್; ಉ ರಿದು ಬಿದ್ದ ಸ್ನೇಹಿತ್

 | 
ಟ್ಯ u

ಬಾಲ್ಯದಿಂದಲೇ ಚಂದನವನ ಪ್ರವೇಶಿಸಿ ನಾಗಿಣಿ, ಬಿಗ್ ಬಾಸ್ ಕನ್ನಡ 10 ಶೋಗಳ ಮೂಲಕ ಮನೆ ಮಾತಾದ ನಟಿ ನಮ್ರತಾ ಗೌಡ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ತಮ್ಮ ಆತ್ಮೀಯ ಸ್ನೇಹಿತರಿಗೆ ನಟಿ ಬರ್ತ್‌ಡೇ ಪಾರ್ಟಿ ಕೊಟ್ಟಿದ್ದಾರೆ. 

ನಮ್ರತಾ ಹುಟ್ಟುಹಬ್ಬದ ಸೆಲೆಬ್ರೇಶನ್‌ನಲ್ಲಿ ಬಿಗ್ ಬಾಸ್ ಮನೆ ಮಂದಿ ಭಾಗಿಯಾಗುವ ಮೂಲಕ ಸಂಭ್ರಮ ಡಬಲ್ ಮಾಡಿದ್ದಾರೆ.ಅವರ ಜೊತೆ ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿಗಳು ಇದ್ದಿದ್ದು ವಿಶೇಷವಾಗಿತ್ತು. ನಮ್ರತಾ ಅವರ ಮನೆಯನ್ನು ಬಿಳಿ, ಬ್ಲ್ಯಾಕ್ ಥೀಮ್‌ನಲ್ಲಿ ಡೆಕೋರೇಟ್ ಮಾಡಲಾಗಿತ್ತು. ಬಿಳಿ ಬಣ್ಣದಿಂದಲೇ ಅಲಂಕರಿಸಲಾಗಿತ್ತು.

ಎರಡು ಬಾರಿ ಡ್ರೆಸ್‌ ಚೇಂಜ್ ಮಾಡಿಕೊಂಡಿದ್ದ ನಮ್ರತಾ ಗೌಡ ಅವರು ಸ್ಪೆಷಲ್ ಗೆಟಪ್‌ನಲ್ಲಿ ಮಿಂಚಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.ಸೆಲೆಬ್ರೇಶನ್‌ನಲ್ಲಿ ವಿನಯ್ ಗೌಡ, ಕಾರ್ತಿಕ್ ಮಹೇಶ್, ಅಕ್ಷತಾ ವಿನಯ್, ಮೈಕಲ್ ಅಜಯ್, ಇಶಾನಿ, ತನಿಷಾ ಕುಪ್ಪಂಡ, ನಿರಂಜನ್ ದೇಶಪಾಂಡೆ, ಯಶಸ್ವಿನಿ ದೇಶಪಾಂಡೆ, ಕಿಶನ್ ಬಿಳಗಲಿ, ಕವಿತಾ ಗೌಡ, ಅನುಪಮಾ ಗೌಡ, ನೇಹಾ ಗೌಡ ಭಾಗಿಯಾಗಿ ನಮ್ರತಾಗೆ ಶುಭಕೋರಿದ್ದಾರೆ.

ಅಂದಹಾಗೆ, ನಮ್ರತಾ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದ ಬೆನ್ನಲ್ಲೇ MG ಮೋಟರ್ ಇಂಡಿಯಾ ಕಂಪನಿಯ ಎಲೆಕ್ಟ್ರಿಕಲ್ ಕಾರನ್ನು ನಟಿ ಖರೀದಿಸಿದ್ದಾರೆ. ಈ ಕಾರಿನ ಬೆಲೆ 6ರಿಂದ 9 ಲಕ್ಷ ರೂ.ವರೆಗೂ ಇದೆ ಎನ್ನಲಾಗಿದೆ. ಸದ್ಯ ನಮ್ರತಾ ಸಕ್ಸಸ್ ಮತ್ತು ಖುಷಿ ನೋಡಿ ಅಭಿಮಾನಿಗಳು ಶುಭಕೋರುತ್ತಿದ್ದಾರೆ.ನಮ್ರತಾ ಗೌಡ ಅವರು ಬಿಗ್ ಬಾಸ್ ಶೋ ನಂತರದಲ್ಲಿ ಏನು ಮಾಡಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಸದ್ಯ ಅವರು ಒಂದಿಲ್ಲೊಂದು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ.