ಕರುನಾಡ ಅಚ್ಚುಮೆಚ್ಚಿನ ಸೀರಿಯಲ್ ಜೋಡಿಯ ಸೀಮಂತ; ಫಿದಾ ಆದ ಕನ್ನಡಿಗರು
ಜೀವ ಹೂವಾಗಿದೆ ಧಾರವಾಹಿ ನೋಡಿದವರಿಗೆ ನಟಿ ಶಿಲ್ಪಾ ನೆನಪಿರುತ್ತಾರೆ. ಕನ್ನಡ ಕಿರುತೆರೆಯ ಸೆಲೆಬ್ರಿಟಿ ದಂಪತಿ ದರ್ಶಕ್ ಗೌಡ ಮತ್ತು ನಟಿ ಶಿಲ್ಪಾ ರವಿ ಹೊಸ ರೀಲ್ಸ್ ಹಂಚಿಕೊಂಡಿದ್ದಾರೆ. ತಮ್ಮ ಸೀಮಂತ ಸಂಭ್ರಮದ ರೀಲ್ಸ್ ಹಂಚಿಕೊಂಡಿದ್ದು, ಶೀಘ್ರದಲ್ಲಿಯೇ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಅಷ್ಟಕ್ಕೂ ಈ ದಂಪತಿ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ವಿವಾಹವಾಗಿದ್ದರು.ತಮ್ಮ ಸೀಮಂತ ಸಂಭ್ರಮವನ್ನು ತಮಾಷೆಯ, ಭಾವನಾತ್ಮಕ ರೀಲ್ಸ್ ಮೂಲಕ ಜೀವ ಹೂವಾಗಿದೆ ಸೀರಿಯಲ್ ನಟಿ ಶಿಲ್ಪಾ ರವಿ ಹಂಚಿಕೊಂಡಿದ್ದಾರೆ. ಎಲ್ಲರೂ ಈ ಸಾಧನೆಗೆ ನಾನೇ ಕಾರಣ ಎನ್ನುತ್ತಾರೆ. ಆದರೆ, ಇದಕ್ಕೆಲ್ಲ ಕಾರಣ ಇವರು ಎನ್ನುವ ಆಡಿಯೋ ಇರುವ ರೀಲ್ಸ್ ಹಂಚಿಕೊಂಡಿದ್ದಾರೆ.
ಈ ವಿಡಿಯೋದ ಕೊನೆಗೆ ಈ ದಂಪತಿ ಭಾವನಾತ್ಮಕವಾಗಿ ಹತ್ತಿರವಾಗುವ ದೃಶ್ಯವಿದೆ. ಪುಟ್ಟ ರೀಲ್ಸ್ ಮೂಲಕ ಸೀಮಂತ ಸಂಭ್ರಮವನ್ನು ಇವರು ಹಂಚಿಕೊಂಡಿದ್ದಾರೆ. ಇವರಿಗೆ ಅಭಿನಂದನೆಗಳ ಮಹಾಪೂರವೇ ಸೋಷಿಯಲ್ ಮೀಡಿಯಾದಲ್ಲಿ ಹರಿದುಬರುತ್ತಿದೆ. ಸೀಮಂತ ಕಾರ್ಯಕ್ರಮಕ್ಕೆ ನಟಿ ಶಿಲ್ಪಾ ರವಿ ಪಿಂಕ್ ಬಣ್ಣದ ಬಾರ್ಡ್ ಇರುವ ತುಸು ಬಿಳಿ ಬಣ್ಣದ ಸೀರೆ ಮತ್ತು ಪಿಕ್ ಬಣ್ಣದ ಬ್ಲೌಸ್ ಧರಿಸಿದ್ದಾರೆ.
ಈ ಬೇಬಿಶವರ್ ಕಾರ್ಯಕ್ರಮದಲ್ಲಿ ದರ್ಶಕ್ ಪಿಂಕ್ ಬಣ್ಣದ ಶರ್ಟ್ ಧರಿಸಿದ್ದಾರೆ. ಬಿಳಿ ಬಣ್ಣದ ವೇಸ್ಟಿ ಉಟ್ಟಿದ್ದಾರೆ.ಪ್ರಶಸ್ತಿ ಸಮಾರಂಭವೊಂದರಲ್ಲಿ ನಟಿ ಶಿಲ್ಪಾ ರವಿ ಮತ್ತು ದರ್ಶಕ್ ಪರಸ್ಪರ ಭೇಟಿಯಾಗಿದ್ದರು. ತನ್ನ ಸ್ನೇಹಿತನ ಸಹೋದರಿ ಈ ಶಿಲ್ಪಾ ಎಂದು ದರ್ಶಕ್ ತಿಳಿದುಕೊಂಡಿದ್ದಾರೆ. ಬಳಿಕ ಇವರಿಬ್ಬರ ನಡುವೆ ಸ್ನೇಹವಾಗಿ, ಸ್ನೇಹ ಪ್ರೀತಿ ತಿರುಗಿದೆ. ಬೇರೆ ಪ್ರಾಜೆಕ್ಟ್‌ನಲ್ಲಿ ಬಿಝಿಯಾಗಿದ್ದ ದರ್ಶಕ್ ಗೌಡರಿಗೆ ಲವ್, ಡೇಟಿಂಗ್ ಅಂತ ಸುತ್ತಲು ಸಮಯವಿರಲಿಲ್ಲವಂತೆ.
ಹೀಗಾಗಿ, ಈಕೆನಗೆ ನೇರವಾಗಿ ವಿಲ್ ಯು ಮ್ಯಾರಿ ಮೀ ಎಂದು ಕೇಳಿದ್ದಾರೆ. ಖುಷಿಯಿಂದ ಎರಡೂ ಕುಟುಂಬದವರೂ ಇವರ ಮದುವೆಗೆ ಒಪ್ಪಿದ್ದಾರೆ. ಕೊರೊನಾ ಸಮಯದಲ್ಲಿ ಇವರಿಗೆ ವಿವಾಹವಾಗಿತ್ತು.ಇನ್ನು ಕೆಲವೇ ದಿನಗಳಲ್ಲಿ ಪಾಲಕರು ಕೂಡಾ ಆಗಲಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.