ಮಗು ಹುಟ್ಟಲು ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ಕೊಟ್ಟ ಕತ್ರಿನಾ ಕೈಫ್, ಹಿಂದೂ ದೇವರ ಬಳಿ ಭಕ್ತಿಯಿಂದ ಕೈಮುಗಿದ ನಟಿ

 | 
Jj
ಪ್ರಸಿದ್ದ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟಿ ಕತ್ರಿನಾ ಕೈಫ್ ಅವರಿಂದು ಭೇಟಿ ಕೊಟ್ಟಿದ್ದಾರೆ. ಇಂದು ಮುಂಜಾನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಹೌದು ಬಾಲಿವುಡ್​ನಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ಕತ್ರಿನಾ ಇಂದು ರಾಜ್ಯದ ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು, ಸರ್ಪಸಂಸ್ಕಾರ ಪೂಜೆಯಲ್ಲಿ ಭಾಗಿಯಾದರು. 
ಕತ್ರಿನಾ ಕೈಫ್, ವಿಕಿ ಕೌಶಲ್ ಬಾಲಿವುಡ್‌ನ ಮೋಸ್ಟ್ ಬ್ಯೂಟಿಫುಲ್ ಕಪಲ್. ಈ ಸ್ಟಾರ್ ಜೋಡಿ ಪ್ರೀತಿಸಿ ಮದುವೆಯಾಗಿ 3 ವರ್ಷಗಳೇ ಕಳೆದಿದೆ. ಡಿಸೆಂಬರ್ 9, 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕತ್ರಿನಾ ಕೈಫ್, ವಿಕಿ ಕೌಶಲ್‌ಗೆ ಈಗ ಸಂತಾನ ಭಾಗ್ಯದ ಕೊರಗಿದ್ದಂತೆ ಕಾಣುತ್ತಿದೆ.
ಬಾಲಿವುಡ್ ಅಂಗಳದಲ್ಲಿ ಕತ್ರಿನಾ ಕೈಫ್ ಗರ್ಭಿಣಿಯಾದ ಸುದ್ದಿ ಬರೀ ಗಾಸಿಪ್‌ ಆಗಿಯೇ ಉಳಿದಿತ್ತು. ಹಲವು ಬಾರಿ ಸೋಷಿಯಲ್ ಮೀಡಿಯಾಗಳಲ್ಲಿ ಕತ್ರಿನಾ ಕೈಫ್‌ ಗುಡ್‌ನ್ಯೂಸ್‌ ವೈರಲ್ ಆಗಿದ್ದು ಸುಳ್ಳಾಗಿದೆ. ಇದೀಗ ಕತ್ರಿನಾ ಕೈಫ್ ಅವರು ಸಂತಾನ ಭಾಗ್ಯಕ್ಕಾಗಿ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಇಲ್ಲಿಗೆ ಆಗಮಿಸಿರುವ ನಟಿ, ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉಳಿದುಕೊಂಡು ನಾಳೆಯೂ ಸರ್ಪಸಂಸ್ಕಾರ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ. ಮಾಸ್ಕ್ ಧರಿಸಿ, ದುಪ್ಪಟ್ಟ ಹಾಕಿ ದೇವಸ್ಥಾನದೊಳಗೆ ಆಗಮಿಸಿದರು.ಆದಿ ಸುಬ್ರಹ್ಮಣ್ಯ ಸರ್ಪಸಂಸ್ಕಾರ ಯಾಗಶಾಲೆಯಲ್ಲಿ ಕೆಲ ಪುರೋಹಿತರು ಮತ್ತು ತಮ್ಮ ಜೊತೆಗೆ ಬಂದ ಕೆಲ ನಿಕಟವರ್ತಿಗಳ ಜೊತೆ ಮಾತ್ರ ಕಾಣಿಸಿಕೊಂಡ ಕತ್ರಿನಾ, ಇಂದು ಮತ್ತು ನಾಳೆ ಸರ್ಪಸಂಸ್ಕಾರ ಸೇವೆಯನ್ನು ನೆರವೇರಿಸಲಿದ್ದಾರೆ. ಮಹಿಳಾ ಪೊಲೀಸರ ರಕ್ಷಣೆಯಲ್ಲಿದ್ದ ಅವರು ಮಾಧ್ಯಮಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗದಂತೆ ಜಾಗೃತೆ ವಹಿಸಿದ್ದು ಕಂಡುಬಂತು.
ಇದಕ್ಕೂ ಮುನ್ನ, 2024ರ ಜುಲೈನಲ್ಲಿ ಕತ್ರಿನಾ ಕೈಫ್​, ಕ್ರಿಕೆಟಿಗ ಕೆಎಲ್​ ರಾಹುಲ್​ ಸೇರಿದಂತೆ ಬಾಲಿವುಡ್​ನ ಸೆಲೆಬ್ರಿಟಿಗಳು ಕುತ್ತಾರು ಕೊರಗಜ್ಜನ ಹರಕೆಯ ಕೋಲದಲ್ಲಿ ಭಾಗವಹಿಸಿದ್ದರು. ಕತ್ರಿನಾ, ರೇಷ್ಮಾ ಶೆಟ್ಟಿ, ಆಥಿಯಾ ಶೆಟ್ಟಿ ಪರಂಪರೆಯಂತೆ ಕೋಲದಿಂದ ಹೊರಗುಳಿದು ಕಟ್ಟೆಯ ಕಚೇರಿಯಲ್ಲಿ ಕುಳಿತಿದ್ದರೆ, ಕ್ರಿಕೆಟಿಗ ರಾಹುಲ್ ಮತ್ತು ಅಹಾನ್ ಶೆಟ್ಟಿ ಕೋಲದಲ್ಲಿ ಭಾಗಿಯಾಗಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.