ಮದ್ವೆ ಮುಂಚೆ ಜಾಸ್ತಿ ಮಾಡ್ತಾ ಇದ್ವಿ, ಮದುವೆ ಆದ ಮೇಲೆ ಎಲ್ಲವೂ Normal ಆಯ್ತು ಎಂದ ಕವಿತಾ ಗೌಡ
May 15, 2025, 10:43 IST
|

ಕಿರುತೆರೆಯ ಮುದ್ದಾದ ಜೋಡಿ ಎಂದರೆ ಕವಿತಾ ಚಂದನ್. ಈ ಜೋಡಿ ಲವ್ ಸ್ಟೋರಿ ಬಗ್ಗೆ ಬಹುತೇಕ ವೀಕ್ಷಕರಿಗೆ ಗೊತ್ತಿದೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ಮಾಡೋವಾಗ ಇಬ್ಬರಿಗೂ ಸ್ನೇಹ ಶುರುವಾಗಿತ್ತು. ಆ ಸ್ನೇಹ ಪ್ರೀತಿಗೆ ಬುನಾದಿಯಾಯ್ತು. ಸೀರಿಯಲ್ನಲ್ಲಿ ಪತಿ-ಪತ್ನಿ ಆಗಿದ್ದ ಲಚ್ಚಿ-ಚಂದುಗೆ ರಿಯಲ್ ಲೈಫ್ನಲ್ಲೂ ಮದುವೆ ಯೋಗ ಕೂಡಿ ಬಂದಿತ್ತು.
ಸಿಂಗಲ್ ಆಗಿಯೇ ಅಪಾರ ಫ್ಯಾನ್ಸ್ ಪಡೆದಿದ್ದ ಇಬ್ಬರೂ ಮಿಂಗಲ್ ಆದ್ಮೇಲೆ ಅಭಿಮಾನಿಗಳ ಸಂಖ್ಯೆ ಜಾಸ್ತಿ ಆಯ್ತು. ಇದೀಗ ಈ ಸ್ಟಾರ್ ದಂಪತಿ ಮುದ್ದಾದ ಮಗನ ಜೊತೆಗೆ ತಮ್ಮ ಅಮೂಲ್ಯವಾದ ಸಮಯವನ್ನು ಕಳೆಯುತ್ತಿದ್ದಾರೆ. ಹೌದು, ಕವಿತಾ ಗೌಡ ಹಾಗೂ ಚಂದನ್ ಕುಮಾರ್ ಮಗನಿಗೆ 5 ತಿಂಗಳು ತುಂಬಿವೆ. ಸದ್ಯ ತಮ್ಮ ಕ್ಯೂಟ್ ಮಗನ ಜೊತೆಗೆ ಒಂದಿಷ್ಟು ಖುಷಿ ಕ್ಷಣದನ್ನು ಅನುಭವಿಸುತ್ತಿದ್ದಾರೆ ಕವಿತಾ ಗೌಡ ಹಾಗೂ ಚಂದನ್ ಕುಮಾರ್.
ಇನ್ನು ಕವಿತಾ ಗೌಡ ಇತ್ತೀಚಿಗಷ್ಟೇ ಸಂದರ್ಶನ ಒಂದರಲ್ಲಿ ಮಗು ಹುಟ್ಟಿದ ಮೇಲೆ ನಾನೂ ಒಂದಿಷ್ಟು ಬದಲಾಗಿದ್ದೇನೆ. ಆಗಾಗ ನನಗೂ ಚಂದನ್ ಗು ಜಗಳ ಆಗ್ತಿರತ್ತೆ ಆದರೆ ಯಾವುದು ಅತಿರೇಕಕ್ಕೆ ಹೋಗುವುದಿಲ್ಲ. ಈಗೀಗ ನಟಿಸುವುದಕ್ಕಿಂತ ಮಗನ ಜೊತೆ ಸಮಯ ಕಳೆಯಲು ಸಂತೋಷ ಎನಿಸುತ್ತದೆ ಎಂದಿದ್ದಾರೆ.
ಇನ್ನು ಮಗುವಿಗೆ ಕೊಂಚ ಹುಷಾರು ತಪ್ಪಿದ್ರು ಕೂಡಾ ನೋಡೋಕೆ ಆಗಲ್ಲ. ಯೂಟ್ಯೂಬ್ ನೋಡಿ ಕೆಲವೊಮ್ಮೆ ಸಮಾಧಾನ ಮಾಡಿ ಕೊಳ್ತೇವೆ. ನನ್ನ ಮಗ ಕೆಲ ಮೈಲುಗಲ್ಲು ಸಾಧಿಸಿದ್ದು ತಡ ಹಾಗಾಗಿ ತುಂಬಾ ಚಿಂತೆ ಆಗ್ತಿತ್ತು. ಆದ್ರೆ ಈಗಿಲ್ಲ. ಚಂದನ್ ಹೋಟೆಲ್ ಕಡೆ ಬ್ಯುಸಿ ಆಗಿರುವ ಕಾರಣ ಮಗನ ಕಡೆ ನನ್ನ ಪೂರ್ತಿ ಗಮನ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.