ರಾಯಚೂರಿಗೆ ಬಂದು ಎದ್ದುಬಿದ್ದು ಡ್ಯಾನ್ಸ್ ಮಾಡಿದ ಕೀರ್ತಿ ಸುರೇಶ್, ಫಿದಾ ಆದ ಕರುನಾಡು
Mar 10, 2025, 07:53 IST
|

ಮಹಾನಟಿ ಖ್ಯಾತಿಯ ದಕ್ಷಿಣ ಭಾರತದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟಿಯೆನಿಸಿಕೊಂಡಿರುವ ಮತ್ತು ಸಾಂಪ್ರದಾಯಿಕ ಚೆಲುವಿನ ಒಡತಿ ಕೀರ್ತಿ ಸುರೇಶ್ ನಗರಕ್ಕೆ ಆಗಮಿಸಿ ಶಾಪಿಂಗ್ ಮಾಲೊಂದನ್ನು ಉದ್ಘಾಟಿಸಿದರು. ಈರುಳ್ಳಿ ಬಣ್ಣದ ಸೀರೆಯಲ್ಲಿ ಸೌಂದರ್ಯದ ಖನಿಯಂತೆ ಕಾಣುತ್ತಿದ್ದ ಕೀರ್ತಿ ನೆರಿದಿದ್ದ ಅಭಿಮಾನಿಗಳ ಕೋರಿಕೆ ಮೇರೆಗೆ ಸ್ಟೇಜ್ ಮೇಲೆ ಮೈದಣಿಯದ ಹಾಗೆ ಕುಣಿದು ರಂಜಿಸಿದರು.
ಅವರು ಮೈ ಬಳುಕಿಸಿದಂತೆ ಅಭಿಮಾನಿಗಳು ಹುಚ್ಚೆದ್ದು ಕೂಗಾಡಿದರು ಮತ್ತು ಶಿಳ್ಳೆ ಚಪ್ಪಾಳೆಯೊಂದಿಗೆ ನಟಿಯನ್ನು ಅಭಿನಂದಿಸಿದರು.ಕರ್ನಾಟಕದಲ್ಲಿ ಪುನೀತ್ ರಾಜಕುಮಾರ್ ನನ್ನ ನೆಚ್ಚಿನ ನಟ. ನಾನು ಈ ಹಿಂದೆ ಡಾ.ರಾಜ್‌ಕುಮಾರ ಅವರನ್ನ ಭೇಟಿ ಮಾಡಿದ್ದೆ, ನನ್ನ ತಾಯಿ ಅವರೊಂದಿಗೆ ನಟಿಸಿದ್ದರು ಅಂತ ಬಹುಭಾಷಾ ನಟಿ ಕೀರ್ತಿ ಸುರೇಶ್ ಹೇಳಿದ್ದಾರೆ.
ರಾಯಚೂರಿನಲ್ಲಿ ಶಾಪಿಂಗ್ ಮಾಲ್‌ವೊಂದರ ಉದ್ಘಾಟನೆಗೆ ನಟಿ ಆಗಮಿಸಿದ್ದರು. ಈ ವೇಳೆ ಮಾತನಾಡಿ ಕನ್ನಡ ಸಿನಿಮಾಗಳಲ್ಲಿ ನಟಿಸುವ ಇಂಗಿತ ವ್ಯಕ್ತಪಡಿಸಿದರು. ಒಳ್ಳೆಯ ಆಫರ್, ಉತ್ತಮ ಸ್ಕ್ರಿಪ್ಟ್ ಬಂದ್ರೆ ಖಂಡಿತ ಕನ್ನಡ ಸಿನಿಮಾದಲ್ಲಿ ನಟಿಸುತ್ತೇನೆ ಅಂತ ಹೇಳಿದ್ರು. ಹೌದು ಈಗೀಗ ಕನ್ನಡದಲ್ಲಿ ಒಳ್ಳೆಯ ಸಿನೆಮಾ ಬರ್ತಿದೆ. ಒಳ್ಳೆಯ ಸಿನಿಮಾಕ್ಕೆ ಭಾಷೆಯ ಹಂಗಿಲ್ಲ ಅಂದಿದ್ದಾರೆ.
ಇನ್ನೂ ಈಗಷ್ಟೇ ವೈವಾಹಿಕ ಜೀವನ ಆರಂಭವಾಗಿದೆ, ತುಂಬಾ ಚೆನ್ನಾಗಿ ಸಾಗುತ್ತಿದೆ ಅಂತ ತಿಳಿಸಿದರು. ಸದ್ಯ ತೆಲುಗು ಹಾಗೂ ತಮಿಳು ಸಿನೆಮಾಗಳಲ್ಲಿ ನಟಿಸುತ್ತಿದ್ದು, ಇನ್ನೂ ಕೆಲ ಸಿನೆಮಾಗಳಲ್ಲಿ ನಟಿಸುವ ಬಗ್ಗೆ ಮಾತುಕತೆ ನಡೆದಿದೆ ಅಂತ ಕೀರ್ತಿ ಸುರೇಶ್ ತಿಳಿಸಿದರು. ನನಗೆ ಸ್ಕ್ರಿಪ್ಟ್ ಮುಖ್ಯ ಭಾಷೆಗಿಂತ ಎಂದು ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.