ಯಾವುದೇ ಕಾರಣಕ್ಕೂ ತುಂಡು ಬ ಟ್ಟೆ ಹಾಕಲ್ಲ ಎಂದಿದ್ದ ಕೀರ್ತಿ ಸುರೇಶ್ ಇದೀಗ ಸಂಪೂರ್ಣ ಬದಲಾವಣೆ
Aug 6, 2024, 22:55 IST
|

ಭಾರತದಾದ್ಯಂತ ಬೇರೆ ಬೇರೆ ಭಾಷೆಯಲ್ಲಿ ನಾಯಕಿಯರು ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲವರು ಪಾತ್ರಕ್ಕೆ ತಕ್ಕಂತೆ ಬದಲಾಗಿದ್ದು ಇದೆ. ಹಾಗಾಗಿ ಅಂತಹ ನಟಿಯರು ಟ್ರೆಡಿಷನಲ್ ಲುಕ್‌ನಲ್ಲಿ ಕಂಡರೂ, ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡರೂ ಫ್ಯಾನ್ಸ್ ಹೆಚ್ಚೇನು ತಲೆಕೆಡಿಸಿಕೊಳ್ಳುವುದಿಲ್ಲ. ಅದೇ ಇನ್ನು ಕೆಲವು ನಟಿಯರು ಹಾಗಲ್ಲ. ಅಭಿಮಾನಿಗಳ ಮನಸ್ಸಿನಲ್ಲಿ ಅವರ ಇಮೇಜ್ ಬೇರೆನೇ ಇರುತ್ತೆ. ಅಂತಹವರು ಬದಲಾದರೆ ಫ್ಯಾನ್ಸ್‌ಗೆ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ.
ದಕ್ಷಿಣ ಭಾರತದಲ್ಲಿರುವ ನಾಯಕಿಯರಲ್ಲಿ ಸದಾ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಕೆಲವೇ ಕೆಲವು ನಟಿಯರಿದ್ದಾರೆ. ಅಂತಹವರಲ್ಲಿ ಸಾಯಿ ಪಲ್ಲವಿ, ಕೀರ್ತಿ ಸುರೇಶ್ ಮೊದಲಿಗರಾಗಿ ನಿಲ್ಲುತ್ತಾರೆ. ಆದರೆ, ಇವರಲ್ಲಿ ಕೀರ್ತಿ ಸುರೇಶ್ ಯಾಕೋ ಬದಲಾದರು ಅಂತ ಅಭಿಮಾನಿಗಳಿಗೆ ಅನಿಸುತ್ತಿದೆ. ಅದಕ್ಕೆ ಕಾರಣ ಇತ್ತೀಚೆಗೆ ಕೀರ್ತಿ ಸುರೇಶ್ ಅವಾರ್ಡ್ ಫಂಕ್ಷನ್‌ನಲ್ಲಿ ಕಾಣಿಸಿಕೊಂಡ ರೀತಿ.
ಇತ್ತೀಚೆಗೆ ಹೈದರಾಬಾದ್‌ನಲ್ಲಿ 69ನೇ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭ ನಡೆದಿತ್ತು. ಈ ವೇಳೆ ಬೇರೆ ಚಿತ್ರರಂಗದ ಸ್ಟಾರ್‌ಗಳು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಅದರಲ್ಲೂ ದಕ್ಷಿಣ ಭಾರತದ ಫಿಲ್ಮ್‌ಫೇರ್ ಆಗಿದ್ದರಿಂದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದ ತಾರೆಯರು ಆಗಮಿಸಿದ್ದರು. ಈ ವೇಳೆ ಕೀರ್ತಿ ಸುರೇಶ್ ಕೂಡ ಆಗಮಿಸಿದ್ದರು. ಅವರ ಕಾಸ್ಟ್ಯೂಮ್ ಸೆನ್ಸ್ ಕಂಡು ಫ್ಯಾನ್ಸ್ ಕಂಗಾಲಾಗಿ ಹೋಗಿದ್ದಾರೆ.
ಕೆಲವು ನಾಯಕಿಯರನ್ನು ಟ್ರೆಡಿಷನಲ್ ಲುಕ್‌ನಲ್ಲಿ ನೋಡುವುದಕ್ಕೆ ಅಭಿಮಾನಿಗಳು ಇಷ್ಟ ಪಡುತ್ತಾರೆ. ಅವರಲ್ಲಿ ತಮನ್ನಾ, ಅನುಪಮಾ ಪರಮೇಶ್ವರನ್, ಸಾಯಿ ಪಲ್ಲವಿ, ಕೀರ್ತಿ ಸುರೇಶ್ ಅಂತ ನಟಿಯರು ಸೇರಿಕೊಳ್ಳುತ್ತಾರೆ. ಆದರೆ, ಈ ಪಟ್ಟಿಯಿಂದ ಈಗಾಗಲೇ ತಮನ್ನಾ ಹಾಗೂ ಅನುಪಮಾ ಪರಮೇಶ್ವರನ್ ಈ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಈಗ ಕೀರ್ತಿ ಸುರೇಶ್ ಕೂಡ ಅದೇ ಸಾಲಿಗೆ ಸೇರುವ ಹಾಗೆ ಕಾಣಿಸುತ್ತಿದೆ.
ಇದೂವರೆಗೂ ಕೀರ್ತಿ ಸುರೇಶ್ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ. ಅದರಲ್ಲೂ ಸ್ಕಿನ್ ಶೋ ಮಾಡಿದ್ದು ಅಪರೂಪದಲ್ಲಿ ಅಪರೂಪ ಅಂತಲೇ ಹೇಳಬಹುದು. ಆದ್ರೀಗ ಕೀರ್ತಿ ಸುರೇಶ್ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಲುಕ್‌ನಲ್ಲಿ ಕ್ಯಾಮರಾ ಮುಂದೆ ಪ್ರತ್ಯಕ್ಷ ಆಗಿದ್ದರು. ಇವರ ಡ್ರೆಸ್ಸಿಂಗ್ ಸೆನ್ಸ್ ಹಿಂದೆಂದಿಗೂ ಹೀಗೆ ಇರಲಿಲ್ಲ ಅಂತ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.