ಗಂಡನನ್ನು ನೋಡಲು ವಿಮಾನ ಹತ್ತಿದ್ದ ಖುಷ್ಬೂ, ಪೋಷಕರು ಹಾಗೂ ಗಂಡ ಕಣ್ಣೀ ರು
Jun 13, 2025, 17:55 IST
|

ಗುಜರಾತ್‌ನ ರಾಜಧಾನಿ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ನಿನ್ನೆ ಪತನವಾಗಿದ್ದು, ಹಲವು ಸಾವು ನೋವು ಸಂಭವಿಸಿದೆ ಎನ್ನಲಾಗಿದೆ. ಈ ವಿಮಾನವು ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿತ್ತು. ಟೇಕಾಫ್ ಆದ ಕೆಲ ಹೊತ್ತಿನಲ್ಲಿಯೇ ತಾಂತ್ರಿಕ ದೋಷದಿಂದ ಪತನವಾಗಿದೆ. 242 ಪ್ರಯಾಣಿಕರು ಈ ವಿಮಾನದಲ್ಲಿ ಇದ್ದರು ಅದರಲ್ಲಿ ಒಬ್ಬೊಬ್ಬರದ್ದು ಒಂದೊಂದು ಕಥೆ.
ಜನವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜಸ್ಥಾನದ ಬಲೋತ್ರಾ ಜಿಲ್ಲೆಯ ಅರಬಾ ಗ್ರಾಮದ ಖುಷ್ಬೂ ರಾಜ್‌ಪುರೋಹಿತ್ ತನ್ನ ಪ್ರಿಯತಮನ ಭೇಟಿಗಾಗಿ ತುದಿಗಾಲಲ್ಲಿ ನಿಂತಿದ್ದರು. ಪಾಸ್‌ಪೋರ್ಟ್ ಸಿಗುತ್ತಲೇ ಮೊದಲ ಬಾರಿಗೆ ಗುಜರಾತ್‌ನಿಂದ ಹೊರಟಿದ್ದರು.ಲಂಡನ್‌ನಲ್ಲಿ ಖುಷ್ಬೂ ಪತಿ ಮನ್ಸೂಲ್ ಸಿಂಗ್‌ರನ್ನು ಹೆಚ್ಚಿನ ವ್ಯಾಸಂಗ ಮಾಡುತ್ತಿದ್ದರು. ಹೀಗಾಗಿ, ಜನವರಿಯಲ್ಲಿ ಮದುವೆಯಾಗಿ ಕೂಡಲೇ ಲಂಡನ್‌ಗೆ ಹಾರಿದ್ದರು.

ಇತ್ತ ಅವರಿಗಾಗಿ ಕಾಯುತ್ತಿದ್ದ ನವವಧುಗೆ ಪತಿಯನ್ನು ಕಾಣುವ ಕ್ಷಣ ಬಂದೇ ಬಿಟ್ಟಿತ್ತು. ಮನ್ಸೂಲ್ ಸಿಂಗ್‌ರನ್ನು ಮಾತನಾಡಿಸಲು, ಕಣ್ತುಂಬ ಕಾಣಲು ಖುಷ್ಬೂ ಹೊರಟಿದ್ದರು. ಮದುವೆಯಾದ ನಂತರ ಒಮ್ಮೆಯೂ ಆತನನ್ನು ಕಾಣದ ಆಕೆ ಹುಮ್ಮಸ್ಸಿನಲ್ಲಿ ಫ್ಲೈಟ್‌ನಲ್ಲಿ ಕುಳಿತಿದ್ದರು. ಆತನದ್ದೇ ಗುಂಗಿನಲ್ಲಿದ್ದ ಆಕೆಯ ಬದುಕಲ್ಲಿ, ವಿಧಿಯ ಆಟವೇ ಬೇರೆ ಇತ್ತು. ಮೂರೇ ತಿಂಗಳಿಗೆ, ಪತಿಯೊಂದಿಗೆ ಜೀವನ ಕಳೆಯುವ ಕ್ಷಣವನ್ನು ದೋಚಿಕೊಂಡು ಬಿಟ್ಟಿತು. ಆಕೆಯ ದೀರ್ಘಭವಿಷ್ಯ ವಿಮಾನದಲ್ಲಿ ಸುಟ್ಟು ಬೂದಿಯಾಗಿತ್ತು.

ಖುಷ್ಬೂ ಅವರ ಕತೆ ಒಂದೆಡೆಯಾದರೆ, ಲಂಡನ್ ಕಾಣುವ ಆಸೆ ಮತ್ತು ಅಲ್ಲಿ ದುಡಿಯುವುದು ಎಂದರೆ ಸಾಮಾನ್ಯವ. ವಿಮಾನದಲ್ಲಿ ಹೊರಟಿದ್ದ ರಾಜಸ್ಥಾನ ಮೂಲದ ಒಟ್ಟು 11 ಮಂದಿ ಅವರಲ್ಲಿ ಇಬ್ಬರು ಲಂಡನ್‌ನಲ್ಲಿ ಅಡುಗೆ ಭಟ್ಟರಾಗಿ ಕೆಲಸ ಮಾಡಲು ಹೋಗುತ್ತಿದ್ದರು. ಮತ್ತೊಬ್ಬರು ಮಾರ್ಬಲ್ ವ್ಯಾಪಾರಿಯ ಮಗ ಮತ್ತು ಮಗಳ ಪ್ರಯಾಣ ಭಾರತದಲ್ಲೇ ಕೊನೆಗೊಂಡಿದೆ.
ಈ ಘಟನೆಯು ಅನೇಕ ಕುಟುಂಬಗಳಿಗೆ ನೋವುಂಟು ಮಾಡಿದೆ. ಮದುವೆಯಾಗಿ ಮೊದಲ ಬಾರಿಗೆ ಗಂಡನನ್ನು ಭೇಟಿಯಾಗಲು ಹೊರಟಿದ್ದ ಖುಷ್ಬೂ ಅವರ ಕಥೆ ಎಲ್ಲರ ಕಣ್ಣುಗಳನ್ನು ತೇವಗೊಳಿಸಿದೆ. ರಾಜಸ್ಥಾನದ ಅನೇಕ ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿವೆ. ಲಂಡನ್‌ನಲ್ಲಿ ಕೆಲಸ ಮಾಡುವ ಕನಸು ಹೊತ್ತಿದ್ದ ಯುವಕರ ಭವಿಷ್ಯವು ಕಮರಿಹೋಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.