ದರ್ಶನ್ ಮಗನಿಗೆ ಧೈರ್ಯ ತುಂಬಿದ ಕಿಚ್ಚ ಸುದೀಪ್;

 | 
Ghu

ಸ್ನೇಹಕ್ಕೆ ಸ್ನೇಹ- ಪ್ರೀತಿಗೆ ಪ್ರೀತಿ ಕೊಟ್ಟು ಒಬ್ಬರಿಗೊಬ್ಬರು ಹೆಗಲಾಗಿ ನಿಂತವರು ಸುದೀಪ್ ಹಾಗೂ ದರ್ಶನ್. ಆದರೆ, ಅದ್ಯಾರ ದೃಷ್ಟಿ ಬಿತ್ತೋ ಗೊತ್ತಿಲ್ಲ, ಈ ಇಬ್ಬರ ನಡುವೆ ದೊಡ್ಡ ಕಂದಕವೇ ಸೃಷ್ಟಿಯಾಯಿತು. ಕೆಲವು ದಿನಗಳ ಹಿಂದೆ ನಡೆದ ವಿನೀಶ್ ಹುಟ್ಟುಹಬ್ಬದಂದು ಸಾಮಾಜಿಕ ಜಾಲತಾಣದಲ್ಲಿ ವಿನೀಶ್ ಫೋಟೋವೊಂದು ಹರಿದಾಡಿದ್ದು, ಕಿಚ್ಚನ ಹೆಗಲೇರಿದ್ದಾನೆ ದರ್ಶನ್ ಮಗ . ಹೌದು ಅವರಿಬ್ಬರ ನಡುವೆ ಅಷ್ಟು ಸಲಿಗೆ ಇತ್ತು.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಸುದೀಪ್ ಮಾತನಾಡಿ, ಕೊಲೆಯಾಗಿರುವ ರೇಣುಕಾಸ್ವಾಮಿಗೆ ಮತ್ತು ಆತನ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದರು.ಇನ್ನು ದರ್ಶನ್ ನಿಮ್ಮ ಆಪ್ತ ಸ್ನೇಹಿತರಾಗಿದ್ದವರು, ಜೊತೆಯಲ್ಲೇ ಕ್ರಿಕೆಟ್ ಆಡಿದ್ದವರು. ಎಂದಿಗೂ ದರ್ಶನ್ ವಿರುದ್ಧ ಮಾತನಾಡಿಲ್ಲ, ಈಗ ಏನು ಹೇಳುತ್ತೀರಾ ಎನ್ನುವ ಬಗ್ಗೆ ಉತ್ತರ ಕೊಟ್ಟ ಅವರು, ಸ್ನೇಹ ಬೇರೆ, ಈಗ ಆಗಿರುವ ಪ್ರಕರಣ ಬೇರೆ ಎಂದರು.

ರೇಣುಕಾಸ್ವಾಮಿ ಬಾಳಿ ಬದುಕಬೇಕಾಗಿದ್ದ ಯುವಕ, ಆತನ ಸಾವಿಗೆ ನ್ಯಾಯ ಸಿಗಬೇಕು. ಗರ್ಭಿಣಿಯಾಗಿರುವ ಆತನ ಪತ್ನಿ ಮತ್ತು ಹುಟ್ಟುವ ಮಗುವಿಗೆ ಕೂಡ ನ್ಯಾಯ ಸಿಗಬೇಕು ಎಂದರು. ಹಾಗೆಂದು ದರ್ಶನ್ ಮಗ ವಿನೀಶ್ ಗೆ ಕೂಡ ನೋವಾಗಬಾರದು. ಜಗತ್ತನ್ನು ನೋಡದ ಕಂದಮ್ಮ ಹೇಗೋ ಜಗತ್ತನ್ನು ನೋಡುತ್ತಿರುವ ಅವನು ಹಾಗೆಯೇ ಎಂದು ವಿನೀಶ್ ಕುರಿತಾಗಿ ಕರುಣೆ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳಲ್ಲಿ ಏನು ಬರುತ್ತಿದೆ ಅದಷ್ಟೇ ನನಗೂ ಗೊತ್ತಿರುವುದು. ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರ ನನಗೇನೂ ಗೊತ್ತಿಲ್ಲ. ಕನ್ನಡ ಚಿತ್ರರಂಗ ರೇಣುಕಾಸ್ವಾಮಿ ಕುಟುಂಬದ ಪರವಾಗಿ ಇರುತ್ತದೆ ಎಂದರು.ಬ್ಯಾನ್ ಮಾಡಲು ನಮಗೆ ಅಧಿಕಾರ ಇಲ್ಲ. ದರ್ಶನ್ ಈ ಪ್ರಕರಣದಿಂದ ಹೊರಬಂದರೆ ಬ್ಯಾನ್ ಮಾಡಲಾಗದು, ಅವರ ಆರೋಪ ಸಾಬೀತಾದರೆ ಬ್ಯಾನ್ ಮಾಡುವ ಅಗತ್ಯ ಕೂಡ ಬರುವುದಿಲ್ಲ ಎಂದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.